ಕಾಂಗ್ರೆಸ್ನ 5 ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಒಂದು
ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರದ್ದು 5 ಕೆ.ಜಿ ಅಕ್ಕಿ ಇದೆ
ಕಾಂಗ್ರೆಸ್ ಸರ್ಕಾರ ಒಟ್ಟು 10 ಕೆಜಿ ನಾವು ಕೊಡುತ್ತಿದ್ದೇವು ಎಂದಿತ್ತಾ?
ಲೋಕಸಭಾ ಚುಣಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಭರ್ಜರಿ ಟಕ್ಕರ್ ಕೊಟ್ಟಿದೆ. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ 10 ಕೆಜಿ ಅಕ್ಕಿ ಉಚಿತವಾಗಿ ಕೊಡ್ತೀವಿ ಎಂದು ಹೇಳಿಕೊಂಡು ಬಂದಿದ್ದ ಅನ್ನಭಾಗ್ಯ ಯೋಜನೆಯ ಪ್ರಿಂಟೆಡ್ ಬಿಲ್ ಮೂಲಕ ಜನರ ಮುಂದಿಡುವ ಹೊಸ ಬಿಲ್ ಪದ್ಧತಿ ಜಾರಿಗೆ ತಂದಿದೆ.
ಏನದು ರೇಷನ್‌ಗೆ ಬಿಲ್?
ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ಧತಿ
ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಸಾಲಾಗಿ ನಿಲ್ಲುವ ಗ್ರಾಹಕರು ಇನ್ಮುಂದೆ ಪ್ರಿಂಟೆಡ್ ಬಿಲ್ ಅನ್ನು ಪಡೆಯುತ್ತಾರೆ. ಈಗಾಗಲೇ ಕೋಲಾರ ನ್ಯಾಯ ಬೆಲೆ ಅಂಗಡಿಗಳಲ್ಲಿ ಈ ಬಿಲ್ ನೀಡಲಾಗುತ್ತಿದೆ. ಹೌದು ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಉಚಿತವಾಗಿ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ನ 5 ಗ್ಯಾರಂಟಿ ಯೋಜನೆಗಳ ಪೈಕಿ ಈ ಅನ್ನಭಾಗ್ಯ ಯೋಜನೆ ಕೂಡಾ ಒಂದಾಗಿತ್ತು. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ಧತಿ ಜಾರಿಗೆ ತಂದಿದೆ.
ಇದರಲ್ಲಿ ಯಾವ ಸರ್ಕಾರದಿಂದ ಎಷ್ಟು ಅಕ್ಕಿ ಕೊಡ್ತಿದೆ, ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಅನ್ನೊ ಯೋಜನೆ ಅನುಧಾನ ಎಷ್ಟು, ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅನುಧಾನ ಎಷ್ಟು ಅನ್ನೋದನ್ನು ಹೊಸ ಬಿಲ್ನಲ್ಲಿ ವಿವರವಾಗಿ ಮುದ್ರಿಸುವ ಜೊತೆಗೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಕೆಜಿ ಅಕ್ಕಿ, ಎಷ್ಟು ಕೆಜಿ ರಾಗಿ ಅಥವಾ ಜೋಳ ವಿತರಣೆಯಾಗಿದೆ ಅದಕ್ಕೆ ತಗುಲುವ ಮೊತ್ತವೆಷ್ಟು, ಆ ಅನುದಾನ ಎಲ್ಲಿಂದ ಬಂದಿದೆ ಎನ್ನುವ ವಿವರ ಇರುತ್ತದೆ.
ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಹಾಗು ರಾಜ್ಯದ ಪಾಲು ಎಷ್ಟು?
ರಾಜ್ಯ ಸರ್ಕಾರದ ಅನುದಾನ ಎಷ್ಟು ಅದು ಯಾವ ರೀತಿ ಗ್ರಾಹಕರಿಗೆ ತಲುಪಿದೆ ಅನ್ನೋ ಪ್ರತಿಯೊಂದು ಮಾಹಿತಿಯನ್ನು ಸದ್ಯ ಹೊಸ ಬಿಲ್ನಲ್ಲಿ ದಾಖಲಾಗುವಂತೆ ಮಾಡಿದೆ. ಸದ್ಯ ಈ ಹೊಸ ಬಿಲ್ ವ್ಯವಸ್ಥೆಯಿಂದ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಹಾಗು ರಾಜ್ಯದ ಪಾಲು ಎಷ್ಟು ಅನ್ನೋದು ತಿಳಿದು ಬರಲಿದೆ. ಅದರ ಜೊತೆಗೆ ಪಡಿತರ ಅಕ್ಕಿಯಲ್ಲಾಗುತ್ತಿದ್ದ ಸೋರಿಕೆ ಹಾಗೂ ಅವ್ಯವಹಾರವನ್ನು ತಡೆಯಲು ಈ ವ್ಯವಸ್ಥೆ ಅನುಕೂಲವಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು ಕಾಂಗ್ರೆಸ್ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯೊಂದಿಗೆ ಕಾಂಗ್ರೆಸ್ನ ಅನ್ನಭಾಗ್ಯ ಯೋಜನೆ ಸೇರಿ 10 ಕೆಜಿ ಉಚಿತ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಹೇಳಿತ್ತು. ನಂತರ ಯೋಜನೆ ಜಾರಿ ಮಾಡುವ ವೇಳೆಯಲ್ಲೂ ಕೂಡಾ ಬಿಜೆಪಿ ಮುಖಂಡರು ಕೇಂದ್ರ ಸರ್ಕಾರದ ಪಾಲು ಬಿಟ್ಟು ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಅಂದರೆ ಒಟ್ಟು 15 ಕೆ.ಜಿ ಅಕ್ಕಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆ
ಆ ನಂತರ ಅಕ್ಕಿ ಪೂರೈಕೆ ಮಾಡಲು ಅಕ್ಕಿ ಸಿಗದ ಕಾರಣ ರಾಜ್ಯ ಸರ್ಕಾರ ಅಕ್ಕಿಯ ಬದಲಾಗಿ 1 ಕೆಜಿ ಅಕ್ಕಿಗೆ 36 ರೂಪಾಯಿಯಂತೆ ಹಣವನ್ನು ಗ್ರಾಹಕರ ಖಾತೆಗೆ ನೀಡುತ್ತಿದೆ. ಹಾಗಾಗಿ ಸದ್ಯ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಗೆ ವಿತರಣೆ ಮಾಡುತ್ತಿರುವ ಅಕ್ಕಿ ಮತ್ತು ರಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಅನ್ನ ಯೋಜನೆಯದ್ದು ಅನ್ನೋದನ್ನು ವಿವರವಾಗಿ ಮುದ್ರಿಸಿ ನೀಡುತ್ತಿದೆ. ಹಾಗಾಗಿ ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯನ್ನು ಜನರಿಗೆ ಅರ್ಥಮಾಡಿಸುವುದು ಕೇಂದ್ರ ಸರ್ಕಾರದ ಈ ಹೊಸ ಪ್ರಿಂಟೆಡ್ ಬಿಲ್ನ ಉದ್ದೇಶವಾದಿದೆ. ಸದ್ಯ ಈ ವ್ಯವಸ್ಥೆಗೆ ಗ್ರಾಹಕರಿಂದಲೂ ಸ್ಪಂದನೆ ಸಿಕ್ಕಿದ್ದು ಇದು ಅಕ್ಕಿ ವಿತರಣೆಯ ಸೋರಿಕೆಯನ್ನು ತಡೆಯಲಿದೆ ಎನ್ನೋದು ಕೂಡ ಇದರ ಉದ್ದೇಶ ಎನ್ನಲಾಗಿದೆ. ಆದರೆ ಈ ಕಾರ್ಯಕ್ಕೆ ಬೇಕಾದ ಮಿಷನ್ ಮತ್ತು ಅದಕ್ಕೆ ಬೇಕಾದ ಪೇಪರ್ ಕರ್ಚು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ನ್ಯಾಯ ಬೆಲೆ ಅಂಗಡಿಗಳ ಸಂಘದವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಿದ್ಧಗೊಳ್ಳುತ್ತಿರುವ ಬಿಜೆಪಿ ನೇತ್ರತ್ವದ ಸರ್ಕಾರ ಮತ ಪಡೆಯಲು ಈ ಬಿಲ್ ನೀಡುತ್ತಿದೆ ಎನ್ನುತ್ತಿವೆ ರಾಜಕೀಯ ಚರ್ಚೆಗಳು. ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ನ ಸರ್ಕಾರಕ್ಕೆ ಹಾಗೂ ಅವರ ಗ್ಯಾರಂಟಿ ಯೋಜನೆಗಳಿಗೆ ಇದು ಟಕ್ಕರ್ ಆಗಲಿದೆಯಾ. ತಮ್ಮ ಮಹಾತ್ವಾಕಾಂಕ್ಷೆ ಯೋಜನೆಗೆ ಬಿಜೆಪಿ ಸರ್ಕಾರ ಈ ರೀತಿ ಟಾಂಗ್ ನೀಡಿದ್ದನ್ನು ಹೇಗೆ ಅರಗಿಸಿಕೊಳ್ಳುತ್ತಾರೆ ಗೊತ್ತಿಲ್ಲ. ಈ ಬಿಲ್ ಪ್ಲಾನ್ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಬಿಜೆಪಿಗೆ ಸಹಕಾರಿ ಆಗತ್ತೆ. ಅಥವಾ ಕಾಂಗ್ರೆಸ್ಗೆ ಇನ್ನಷ್ಟು ಪ್ರಚಾರ ಸಿಗಲಿದೆಯಾ ಮುಂದೆ ತಿಳಿಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ