newsfirstkannada.com

ಅಕ್ಕಿ ಕೊಡದ ಮೋದಿ ಸರ್ಕಾರಕ್ಕೆ ಸೆಡ್ಡು; ಜುಲೈನಿಂದಲೇ ಅನ್ನಭಾಗ್ಯ ಸ್ಕೀಮ್​​; ಬಿಜೆಪಿಗೆ ಶಾಕ್​ ಕೊಟ್ಟ ಸಿದ್ದು!

Share :

28-06-2023

  ಜುಲೈ 1ರಿಂದಲೇ ಅನ್ನಭಾಗ್ಯ ಯೋಜನೆ ಜಾರಿಗೆ ಸರ್ಕಾರ ನಿರ್ಧಾರ

  5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ 170 ರೂಪಾಯಿ ನೇರ ಖಾತೆಗೆ

  ಮೋದಿ, ಯಡಿಯೂರಪ್ಪ, ಬೊಮ್ಮಾಯಿಗೆ ಸಿಎಂ ನೇರ ಸವಾಲು

ಬೆಂಗಳೂರು: ಕೊನೆಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೊಂದು ಗ್ಯಾರಂಟಿ ಯೋಜನೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಜುಲೈ 1ರಿಂದ ಬಡವರಿಗೆ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇವತ್ತು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ 170 ರೂಪಾಯಿ ಕೊಡಲು ತೀರ್ಮಾನಿಸಲಾಗಿದೆ.

ಜುಲೈ 1ರಿಂದ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿ

5 ಕೆಜಿ ಅಕ್ಕಿಗೆ 170 ರೂಪಾಯಿ ಕೊಡುವ ನಿರ್ಧಾರ ಕೈಗೊಂಡ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಇಟ್ಕೊಂಡು ಕೊಡ್ತೀವಿ ಅಂತಾ ಹೇಳಿದ್ರು. ಈಗ ನಾವು ದುಡ್ಡು ಕೊಟ್ಟರೂ ಅಕ್ಕಿ ಕೊಡಲು ಕೇಂದ್ರ ಸರ್ಕಾರ ರೆಡಿಯಾಗಿಲ್ಲ. ಕೇಂದ್ರ ಸರ್ಕಾರ ಆ್ಯಕ್ಷನ್ ಮೂಲಕ ಅಕ್ಕಿ ಕೊಡ್ತಿದ್ದಾರೆ. ಖಾಸಗಿ ಅವರಿಗೆ ಮಾತ್ರವೇ ಅಕ್ಕಿ ಕೊಡ್ತಾರೆ. ಅದರಲ್ಲಿ ಸರ್ಕಾರ ಭಾಗಿಯಾಗುವಂತೆ ಇಲ್ವಂತೆ. ಹಾಗಾದರೆ ಅಕ್ಕಿ ಇದೆ ಅಂತಾ ಆಯ್ತಲ್ವಾ. ಇದು ಕೇಂದ್ರ ಸರ್ಕಾರ ಬಡವರಿಗೆ ಮಾಡುವರಿಗೆ ದ್ರೋಹವಲ್ಲದೇ ಇನ್ನೇನು ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೇಲೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ: 10 ಅಲ್ಲ, 5 ಕೆಜಿ ಅಕ್ಕಿ ಜತೆ 170 ರೂ. ದುಡ್ಡು ಕೊಡಲು ನಿರ್ಧಾರ

ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡ್ತೀವಿ ಅಂತಾ ಹೇಳಿದ್ವಿ. 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ನಾವು 5 ಕೆಜಿ ಅಕ್ಕಿ ಕೊಡಬೇಕು. ಆದರೆ ಅಕ್ಕಿ ದಾಸ್ತಾನು ಇಲ್ಲ. ನಮಗೆ 2,29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಫುಡ್ ಸೆಕ್ಯುರಿಟಿ ಆ್ಯಕ್ಟ್ ಅಡಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿತ್ತು. ಈಗ ಅಕ್ಕಿ ಸಿಗದೇ ಇರುವುದರಿಂದ ಜುಲೈ 1 ರಿಂದ ಅಕ್ಕಿ ಸಿಗುವವರೆಗೂ ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಕೊಡುತ್ತೇವೆ. ಇದರ ಹಣ ನೇರವಾಗಿ ಅವರ ಅಕೌಂಟ್‌ಗೆ ಹಾಕುತ್ತೇವೆ. ಪ್ರತಿಯೊಂದು ಕುಟುಂಬಕ್ಕೆ 5 ಕೆಜಿ ಅಕ್ಕಿ ಹಾಗೂ 5 ಅಕ್ಕಿಗೆ 170 ರೂಪಾಯಿ ಹಣ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇನ್ನು, ಪಾರದರ್ಶಕವಾಗಿ ಟೆಂಡರ್ ಕರೆದು ಓಪನ್ ಮಾರ್ಕೆಟ್‌ನಲ್ಲಿ ಟೆಂಡರ್ ಕರೆಯುತ್ತಿದ್ದೇವೆ. ಇದು ಬಡವರ ಕಾರ್ಯಕ್ರಮ. ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ಹೋಗಿ ಅಕ್ಕಿ ಕೊಡಲು ಒತ್ತಾಯ ಮಾಡ್ಲಿ. ಇವರು ರಾಜ್ಯಕ್ಕೆ ಅಕ್ಕಿ ಕೊಡಿ ಅಂತಾ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ಕೊಡದ ಮೋದಿ ಸರ್ಕಾರಕ್ಕೆ ಸೆಡ್ಡು; ಜುಲೈನಿಂದಲೇ ಅನ್ನಭಾಗ್ಯ ಸ್ಕೀಮ್​​; ಬಿಜೆಪಿಗೆ ಶಾಕ್​ ಕೊಟ್ಟ ಸಿದ್ದು!

https://newsfirstlive.com/wp-content/uploads/2023/06/Cm-Siddaramaiah-2.jpg

Load More