ಇದು ಡಿಎಂಕೆ ಫೈಲ್ಸ್ ಪಾರ್ಟ್ 2 ಎಂದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
DMK ಶಾಸಕರು, ಸಚಿವರು, ಸಂಸದರಿಂದ ಬೇನಾಮಿ ಆಸ್ತಿ ಸಂಪಾದನೆ?
ನಾಡಿದ್ದಿನಿಂದ ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದಲ್ಲಿ ಪಾದಯಾತ್ರೆ
ಚೆನ್ನೈ: ತಮಿಳುನಾಡು ಸರ್ಕಾರದ ವಿರುದ್ಧ ಸಮರ ಸಾರಿರೋ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಇವತ್ತು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ 5,600 ಕೋಟಿ ರೂಪಾಯಿ ಮೊತ್ತದ ಮೂರು ಹಗರಣ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಕಡತಗಳನ್ನು ದೊಡ್ಡ ಟ್ರಂಕ್‌ನಲ್ಲಿಟ್ಟು ತಮಿಳುನಾಡು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಇದು ಡಿಎಂಕೆ ಫೈಲ್ಸ್ ಪಾರ್ಟ್ 2 ಎಂದಿರುವ ಅಣ್ಣಾಮಲೈ, ಮುಂದೆ ಇನ್ನಷ್ಟು ಹಗರಣಗಳನ್ನು ಬಯಲು ಮಾಡುವ ಸುಳಿವು ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ನೇತೃತ್ವದ ನಿಯೋಗ ಇಂದು ರಾಜ್ಯಪಾಲ ಆರ್.ಎನ್ ರವಿ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಡಿಎಂಕೆ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರು, ಸಚಿವರು, ಸಂಸದರು ಅವರ ಕುಟುಂಬಸ್ಥರು ಕೋಟಿ, ಕೋಟಿ ಬೇನಾಮಿ ಆಸ್ತಿ ಸಂಪಾದನೆ ಮಾಡಿದ್ದಾರೆ ಅನ್ನೋದು ಅಣ್ಣಾಮಲೈ ಅವರ ಆರೋಪವಾಗಿದೆ.
ದೊಡ್ಡ ಟ್ರಂಕ್‌ನಲ್ಲಿ ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿರುವ ಅಣ್ಣಾಮಲೈ ಅವರು, ಡಿಎಂಕೆ ಸರ್ಕಾರದಲ್ಲಿ 5,600 ಕೋಟಿ ರೂಪಾಯಿ ಮೊತ್ತದ ಮೂರು ಹಗರಣ ನಡೆದಿದೆ ಎಂದು ದೂರು ಸಲ್ಲಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ ಅವರು, ನಾವು ರಾಜ್ಯಪಾಲರಿಗೆ ಡಿಎಂಕೆ ಫೈಲ್ಸ್ ಪಾರ್ಟ್ 2 ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದಿದ್ದಾರೆ.
ಅಣ್ಣಾಮಲೈ ಅವರು ಇದೇ ಜುಲೈ 28ರಿಂದ 10 ತಿಂಗಳ ಕಾಲ ಸಿಂಹವಾಹನಂ ಹೆಸರಲ್ಲಿ ಬೃಹತ್ ಪಾದಯಾತ್ರೆ ಹೊರಟಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ನಡೆಯೋ ನಡೆಯೋ ಈ ಪಾದಯಾತ್ರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ನಾಡಿದ್ದಿನಿಂದ ಅಣ್ಣಾಮಲೈ ಅವರು ರಾಜ್ಯಾದ್ಯಂತ ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆಗೂ ಮುನ್ನ ದೂರು ನೀಡಿದ ಅಣ್ಣಾಮಲೈ ಅವರು ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ