newsfirstkannada.com

ಕೊಲೆ ಕೇಸ್​ಗೆ ಟ್ವಿಸ್ಟ್; ನಟ ದರ್ಶನ್​ಗೆ ಮತ್ತೆ ​​​ಪೊಲೀಸ್​ ಕಸ್ಟಡಿ; ಇಲ್ಲಿದೆ ಅಸಲಿ ಕಾರಣ!

Share :

Published June 20, 2024 at 10:44pm

    ರೇಣುಕಾ ಕೊಲೆ ಕೇಸ್​ನಲ್ಲಿ ದರ್ಶನ್‌ಗೆ ಎರಡು ದಿನ ಕಸ್ಟಡಿ

    ಎ-1 ಪವಿತ್ರಾ ಜೈಲಿಗೆ.. ದರ್ಶನ್ ಸೇರಿ ನಾಲ್ವರಿಗೆ ವಿಚಾರಣೆ

    ದಾಸನಿಗೆ ಮತ್ತೆರೆಡು ದಿನ ಕಸ್ಟಡಿ ನೀಡಿ ಕೋರ್ಟ್​ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್​ರನ್ನ ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ 9 ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ದಾಸನನ್ನು ಮತ್ತೆರಡು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದ್ದು ವಿಚಾರಣೆ ಮುಂದುವರಿಯಲಿದೆ. ಆದ್ರೆ ದರ್ಶನ್​ ಗೆಳತಿ ಪವಿತ್ರಾಗೌಡ ಸೇರಿದಂತೆ ಉಳಿದ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್‌ಗೆ ಮತ್ತೆರಡು ದಿನ ಕಸ್ಟಡಿ

ಡಿ-ಗ್ಯಾಂಗ್​.. ರೇಣುಕಾಸ್ವಾಮಿಯನ್ನು ಅಮಾನವೀಯ ಮತ್ತು ಭೀಕರವಾಗಿ ಕೊಲೆ ಮಾಡಿದ ಆರೋಪ ಹೊತ್ತ ಗ್ಯಾಂಗ್‌. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್​ ಸೇರಿದಂತೆ 14 ಆರೋಪಿಗಳನ್ನು ಕಳೆದ 9 ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಇದೀಗ ಮತ್ತೊಮ್ಮೆ ನಟ ದರ್ಶನ್​ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶಿಸಿದೆ. ಹಾಗೂ ಎ1 ಪವಿತ್ರಾಗೌಡ ಸೇರಿದಂತೆ ಉಳಿದ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಲಾಕ್​ ಆಗಿರುವ ನಟ ದರ್ಶನ್​ ಸೇರಿದಂತೆ 14 ಆರೋಪಿಗಳ ಪೊಲೀಸ್​ ಕಸ್ಟಡಿ ಇವತ್ತಿಗೆ ಅಂತ್ಯವಾಗಿತ್ತು. ಈ ಹಿನ್ನೆಲೆ ಎ-1 ಪವಿತ್ರಾಗೌಡ, ಎ-2 ದರ್ಶನ್​ ಸೇರಿದಂತೆ 14 ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಪೀಠದ ಮುಂದೆ ಹಾಜರು ಪಡಿಸಿದ್ರು. ಬಳಿಕ ನಟ ದರ್ಶನ್​ ಪರ ವಕೀಲರು ಮತ್ತು ಎಸ್​ಪಿಪಿ ತಮ್ಮ ವಾದ-ಪ್ರತಿವಾದವನ್ನು ನ್ಯಾಯಾಧೀರ ಮುಂದೆ ಮಂಡಿಸಿದ್ರು. ಈ ವೇಳೆ ನಟ ದರ್ಶನ್​ ಸೇರಿದಂತೆ 4 ಜನ ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ನೀಡುವಂತೆ ಎಸ್​ಪಿಪಿ ಮನವಿ ಮಾಡಿಕೊಂಡ್ರು. ಇದಕ್ಕೆ ದರ್ಶನ್​ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ರು.

ದರ್ಶನ್​ ಪರ ವಕೀಲರ ವಾದ

ಈಗಾಗಲೇ ಪ್ರಕರಣದಲ್ಲಿ ನಟ ದರ್ಶನ್ ಹೇಳಿಕೆ ದಾಖಲಾಗಿದೆ. ಅಲ್ಲದೇ ಎಲ್ಲಾ ರಿಕವರಿ ಆಗಿದ್ದು, ಕಷ್ಟಡಿ ಅಗತ್ಯವೇ ಇಲ್ಲ ಎಂದು ವಾದಿಸಿದ್ರು.

ಎಸ್​ಪಿಪಿ ವಾದ

ಕೇಸ್​ನಲ್ಲಿ ಆರೋಪಿಗಳ ವಿಚಾರಣೆ ಇನ್ನೂ ಇದೆ. ಮೃತ ರೇಣುಕಾಸ್ವಾಮಿಯ ಪೋನ್ ಇನ್ನೂ ಸಿಕ್ಕಿಲ್ಲ, ಆ ಫೋನ್​ ರಿಕವರಿ ಬಾಕಿ ಇದೆ. ಆರೋಪಿಗಳ ಸ್ಯಾಂಪಲ್ FLSಗೆ ಕಳುಹಿಸಲಾಗಿದ್ದು, ಎಫ್​ಎಸ್ಎಲ್ ತಜ್ಞರ ವರದಿಯು ಬರಬೇಕಿದೆ. ಎಫ್​ಎಸ್​ಎಲ್​ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ವಿಚಾರಣೆ ಬಾಕಿ ಇದೆ. ಹೀಗಾಗಿ ನಟ ದರ್ಶನ್ ಸೇರಿ 4 ಮಂದಿ ಆರೋಪಿಗಳನ್ನು ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.

ನಟ ದರ್ಶನ್​ ಮತ್ತೆರಡು ದಿನ ಪೊಲೀಸ್​ ಕಸ್ಟಡಿಗೆ

ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್, ಎಸ್​ಪಿಪಿ ಪ್ರಸನ್ನ ಕುಮಾರ್​ ವಾದವನ್ನು ಪುರಸ್ಕರಿಸಿ, ತನಿಖೆಗೆ ಸಹಕರಿಸುತ್ತಿಲ್ಲವೆಂಬ ಕಾರಣಕ್ಕೆ ಪೊಲೀಸ್ ಕಸ್ಟಡಿಯನ್ನು ಎರಡು ದಿನ ಮುಂದುವರಿಕೆ ಮಾಡಿದೆ.

ಪವಿತ್ರಾಗೌಡ ಸೇರಿ 10 ಮಂದಿಗೆ ನ್ಯಾಯಾಂಗ ಬಂಧನ

ನಟ ದರ್ಶನ್​ನನ್ನು​ ಎರಡು ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ್ರೆ, ದರ್ಶನ್​ ಗೆಳತಿ ಪವಿತ್ರಾಗೌಡಳನ್ನು ಕೋರ್ಟ್​ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪವಿತ್ರಾಗೌಡ ಜೊತೆ ಇತರೆ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಜೈಲೂಟ ಫಿಕ್ಸ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್​ಗೆ ಟ್ವಿಸ್ಟ್; ನಟ ದರ್ಶನ್​ಗೆ ಮತ್ತೆ ​​​ಪೊಲೀಸ್​ ಕಸ್ಟಡಿ; ಇಲ್ಲಿದೆ ಅಸಲಿ ಕಾರಣ!

https://newsfirstlive.com/wp-content/uploads/2024/06/DARSHAN-40.jpg

Load More