newsfirstkannada.com

ಕೊಹ್ಲಿ, ರೋಹಿತ್​ ನಿವೃತ್ತಿ ಬಳಿಕ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ಸ್ಟಾರ್​​​ ಆಟಗಾರ ಅಚ್ಚರಿ ನಿರ್ಧಾರ!

Share :

Published June 30, 2024 at 5:31pm

    ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​ ಇಂಡಿಯಾ

    ಟ್ರೋಫಿ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ರೋಹಿತ್, ಕೊಹ್ಲಿ!​​

    ಕೊಹ್ಲಿ, ರೋಹಿತ್​​ ನಿವೃತ್ತಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​

ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ.

ಇನ್ನು, ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾ ದಿಗ್ಗಜ ವಿರಾಟ್​ ಕೊಹ್ಲಿ ಮತ್ತು ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಈ ಬೆನ್ನಲ್ಲೇ ಮತ್ತೋರ್ವ ಸ್ಟಾರ್​​ ಕ್ರಿಕೆಟರ್​​ ರವೀಂದ್ರ ಜಡೇಜಾ ಟಿ20 ಕ್ರಿಕೆಟ್​​ ನಿವೃತ್ತಿ ಘೋಷಿಸಿದ್ದಾರೆ.

ಈ ಸಂಬಂಧ ಇನ್​ಸ್ಟಾ ಪೋಸ್ಟ್​ ಹಾಕಿರೋ ರವೀಂದ್ರ ಜಡೇಜಾ, ನಾನು ಸದಾ ಟೀಮ್​ ಇಂಡಿಯಾಗೆ ನನ್ನ ಕೈಯಲ್ಲಾದಷ್ಟು ಕೊಡುಗೆ ನೀಡಿದ್ದೇನೆ. ಟಿ20 ವಿಶ್ವಕಪ್​ ಗೆಲ್ಲಬೇಕು ಅನ್ನೋದು ನನ್ನ ದೊಡ್ಡ ಕನಸಾಗಿತ್ತು. ಈಗ ನನ್ನ ಕನಸು ನನಸಾಗಿದೆ. ನನ್ನ ಕ್ರಿಕೆಟ್​ ಜರ್ನಿಯಲ್ಲಿ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ಇದು ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಸಮಯ. ಟಿ20 ಕ್ರಿಕೆಟ್​ ಹೊರತು ಏಕದಿನ ಮತ್ತು ಟೆಸ್ಟ್​​ ಫಾರ್ಮೇಟ್​​ನಲ್ಲಿ ಆಟ ಮುಂದುವರಿಸುತ್ತೇನೆ ಎಂದು ನಿವೃತ್ತಿ ಘೋಷಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ನಿವೃತ್ತಿ ಬೆನ್ನಲ್ಲೇ ಗಂಭೀರ್​​ ವಿರುದ್ಧ ರೋಹಿತ್​​​ ಬಹಿರಂಗ ಅಸಮಾಧಾನ.. ಅಂಥದ್ದೇನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ, ರೋಹಿತ್​ ನಿವೃತ್ತಿ ಬಳಿಕ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​.. ಸ್ಟಾರ್​​​ ಆಟಗಾರ ಅಚ್ಚರಿ ನಿರ್ಧಾರ!

https://newsfirstlive.com/wp-content/uploads/2024/05/Team-India_m.jpg

Load More