newsfirstkannada.com

ಮೆಗಾ ಸ್ಟಾರ್ ಫ್ಯಾಮಿಲಿಗೆ ಇವತ್ತು ಡಬಲ್ ಶಾಕ್‌; ನಟಿ ನಿಹಾರಿಕಾ ಡಿವೋರ್ಸ್‌ಗೆ ನಿರ್ಧಾರ.. ಏನಾಯ್ತು?

Share :

05-07-2023

  ಪವನ್ ಕಲ್ಯಾಣ ಬಳಿಕ ಫ್ಯಾಮಿಲಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌

  ಮೆಗಾಸ್ಟಾರ್‌ ಚಿರಂಜೀವಿಯ ಸಂಬಂಧಿ ನಿಹಾರಿಕಾ ಕೊನಿಡೆಲಾ

  ಟಾಲಿವುಡ್ ನಟ, ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರಿ

ಹೈದರಾಬಾದ್‌: ತೆಲುಗು ಚಿತ್ರರಂಗದ ಇಬ್ಬರು ಖ್ಯಾತ ತಾರೆಯರ ದಾಂಪತ್ಯದಲ್ಲಿ ಇವತ್ತು ಬಿರುಕು ಕಾಣಿಸಿಕೊಂಡಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಪ್ರೀತಿಸಿ ಮದುವೆಯಾಗಿದ್ದ ತಮ್ಮ 3ನೇ ಪತ್ನಿ ರಷ್ಯಾ ದೇಶದ ಅನ್ನಾ ಲಿಜನೆವಾರಿಂದ ದೂರವಾದ್ರೆ, ನಟಿ ನಿಹಾರಿಕಾ ಕೊನಿಡೆಲಾ ಕೂಡ ಇವತ್ತೇ ತನ್ನ ಬಹುಕಾಲದ ಗೆಳಯ ಚೈತನ್ಯಗೆ ಡಿವೋರ್ಸ್ ಅನೌನ್ಸ್ ಮಾಡಿದ್ದಾರೆ.

ನಿಹಾರಿಕಾ ಕೊನಿಡೆಲಾ ಅವರು ಮೆಗಾಸ್ಟಾರ್‌ ಚಿರಂಜೀವಿಗೆ ಸಂಬಂಧದಲ್ಲಿ ಮಗಳು ಆಗಬೇಕು. ನಟ, ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರಿ. ತೆಲುಗು ಸೂಪರ್‌ ಸ್ಟಾರ್‌ಗಳಾದ ರಾಮ್ ಚರಣ್‌, ಅಲ್ಲು ಅರ್ಜುನ್, ಅಲ್ಲು ಸಿರಿಶ್ ಅವರ ಕುಟುಂಬಸ್ಥರು ಆಗಿದ್ದಾರೆ. ನಟಿ ನಿಹಾರಿಕಾ ಕೊನಿಡೇಲಾ ಅವರು 2020ರಲ್ಲಿ ಹೈದರಾಬಾದ್ ಮೂಲದ ಟೆಕ್ಕಿ ಚೈತನ್ಯ ಅವರ ಕೈ ಹಿಡಿದಿದ್ದರು. ನಿಹಾರಿಕಾ, ಚೈತನ್ಯ ಅದ್ಧೂರಿ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ತೆಲುಗು ಚಿತ್ರರಂಗದ ಪ್ರಮುಖ ತಾರೆಯರು ಭಾಗಿಯಾಗಿದ್ದರು. ನಟ ಚಿರಂಜೀವಿ, ರಾಮ್‌ ಚರಣ್ ಸೇರಿದಂತೆ ಹಲವರು ನಿಹಾರಿಕಾ ಜೋಡಿಗೆ ಶುಭಾಶಯ ಕೋರಿದ್ದರು.

ಮೂರು ವರ್ಷ ಒಟ್ಟಿಗೆ ಖುಷಿಯಾಗಿದ್ದ ನಿಹಾರಿಕಾ ಕೊನಿಡೆಲಾ, ಚೈತನ್ಯ ಜೋಡಿ ಇಂದು ಬೇರೆ, ಬೇರೆಯಾಗುವ ನಿರ್ಧಾರಕ್ಕೆ ಬಂದಿದೆ. ನಟಿ ನಿಹಾರಿಕಾ ಕೊನಿಡೆಲಾ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಡಿವೋರ್ಸ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಮತ್ತು ಚೈತನ್ಯ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಬದುಕಿನ ಸೂಕ್ಷ್ಮತೆಯಿಂದ ದೂರವಾಗಲು ತೀರ್ಮಾನಿಸಿದ್ದೇವೆ. ನಮಗೆ ಖಾಸಗಿ ಬದುಕಿನ ಅಗತ್ಯವಿದೆ. ನಮಗೆ ಸದಾ ಬೆಂಬಲಿಸುವ ನನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆಯೇ ನಿಹಾರಿಕಾ ಡಿವೋರ್ಸ್ ಸುದ್ದಿ ತೆಲುಗು ಚಿತ್ರರಂಗದಲ್ಲಿ ಗಾಸಿಪ್‌ಗೆ ಕಾರಣವಾಗಿತ್ತು. ತನ್ನ ಸಹೋದರ ವರುಣ್ ತೇಜ್‌ ಅವರ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ನಿಹಾರಿಕಾ, ಚೈತನ್ಯ ಬಾಳಲ್ಲಿ ಬಿರುಕು ಮೂಡಿದೆ ಎನ್ನಲಾಗಿತ್ತು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾದ ಬಳಿಕ ಗಾಸಿಪ್ ಸುದ್ದಿಯೇ ಇಂದು ನಿಜವಾಗಿದೆ.

ನಿಹಾರಿಕಾ ಕೊನಿಡೆಲಾ ಟಿವಿಯಲ್ಲಿ ನಿರೂಪಕಿಯಾಗಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ವೆಬ್ ಶೋಗಳಲ್ಲಿ ಸಾಕಷ್ಟು ಹೆಸರುಗಳಿಸಿದ್ದರು. ನಿಹಾರಿಕಾ ನಿರ್ಮಾಣದ ಪಿಂಕ್ ಎಲಿಫೆಂಟ್ ಪಿಕ್ಚರ್ಸ್‌ ಸೂಪರ್ ಹಿಟ್ ಆಗಿತ್ತು. 2016ರಲ್ಲಿ ನಿಹಾರಿಕಾ ಒಕ ಮನಸ್ಸು ಚಿತ್ರದ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ್ದರೆ. ಇದಾದ ಬಳಿಕ ಹಲವು ತೆೆಲುಗು ಚಿತ್ರದಲ್ಲಿ ನಿಹಾರಿಕಾ ಮಿಂಚಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೆಗಾ ಸ್ಟಾರ್ ಫ್ಯಾಮಿಲಿಗೆ ಇವತ್ತು ಡಬಲ್ ಶಾಕ್‌; ನಟಿ ನಿಹಾರಿಕಾ ಡಿವೋರ್ಸ್‌ಗೆ ನಿರ್ಧಾರ.. ಏನಾಯ್ತು?

https://newsfirstlive.com/wp-content/uploads/2023/07/Mega-star-Chiranjeevi.jpg

Load More