newsfirstkannada.com

BREAKING: ‘ಸನಾತನ’ ಧರ್ಮ ಸಮರ.. ಏಡ್ಸ್‌, ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆಯ ಮತ್ತೊಬ್ಬ ನಾಯಕ

Share :

07-09-2023

  ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಎಂದಿದ್ದ ಉದಯನಿಧಿ

  ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿದ ಮತ್ತೊಬ್ಬ ಡಿಎಂಕೆ ಲೀಡರ್

  ಏಡ್ಸ್ ಮತ್ತು ಕುಷ್ಠರೋಗದಂತಹ ಸಾಮಾಜಿಕ ಪಿಡುಗುಗಳಿಗೆ ಹೋಲಿಕೆ

ಚೆನ್ನೈ: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಉದಯನಿಧಿ ಅವರ ಸನಾತನ ಧರ್ಮಯುದ್ಧ ಭುಗಿಲೆದ್ದಿರುವಾಗಲೇ ಡಿಎಂಕೆ ಪಕ್ಷದ ಮತ್ತೊಬ್ಬ ನಾಯಕ ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿದಿದ್ದಾರೆ. ಸನಾತನ ಧರ್ಮವನ್ನು ಏಡ್ಸ್ ಮತ್ತು ಕುಷ್ಠರೋಗದಂತಹ ಸಾಮಾಜಿಕ ಪಿಡುಗುಗಳಿಗೆ ಹೋಲಿಸಿದ್ದಾರೆ.

ಸನಾತನ ಧರ್ಮ ವಿವಾದವನ್ನು ಡಿಎಂಕೆ ನಾಯಕರು ಇವತ್ತು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಡಿಎಂಕೆ ನಾಯಕ ಎ.ರಾಜಾ ಅವರು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಸನಾತನ ಧರ್ಮವನ್ನು ಕುಷ್ಠರೋಗ ಮತ್ತು ಏಡ್ಸ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಹೋಲಿಸಿದ್ದಾರೆ. ಕುಷ್ಠರೋಗ, ಏಡ್ಸ್‌ ಅನ್ನು ಹೇಗೆ ನಿರ್ಮೂಲನೆ ಮಾಡಬೇಕೋ ಹಾಗೇ ಸನಾತನದ ಧರ್ಮದ ವಿಷಯಗಳನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉದಯ​ ನಿಧಿ ಸ್ಟಾಲಿನ್​ ಹೇಳಿಕೆಗೆ ಪ್ರಧಾನಿ ಪ್ರತಿಕ್ರಿಯೆ; ಸನಾತನ ಧರ್ಮದ ಕುರಿತು ಪ್ರತ್ಯುತ್ತರ ನೀಡಲು ಸಚಿವರಿಗೆ ಮೋದಿ ಕರೆ

ಉದಯನಿಧಿ ಅವರ ವಿವಾದಾತ್ಮಕ ಹೇಳಿಕೆಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಕೂಡ ಮೌನ ಮುರಿದಿದ್ದಾರೆ. ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಉದಯನಿಧಿ ಏನು ಮಾತನಾಡಿದ್ದಾರೆ ಎಂದು ತಿಳಿಯದೆ ಪ್ರಧಾನಿ ಕಾಮೆಂಟ್ ಮಾಡುವುದು ಅನ್ಯಾಯ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ‘ಸನಾತನ’ ಧರ್ಮ ಸಮರ.. ಏಡ್ಸ್‌, ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆಯ ಮತ್ತೊಬ್ಬ ನಾಯಕ

https://newsfirstlive.com/wp-content/uploads/2023/09/DMK-A-Raja.jpg

Load More