’ನಮ್ಮ ಕುಟುಂಬದಲ್ಲಿ ನಿಖಿಲ್ ಸೇರಿ ಯಾರಿಗೂ ಎಂಪಿ ಟಿಕೆಟ್ ಇಲ್ಲ‘
ಕುಮಾರಸ್ವಾಮಿ ರಣತಂತ್ರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ
ವಿಧಾನಸಭೆಯಲ್ಲಿ ಹಿಂದೆ ಸರಿದಿದ್ದ ಭವಾನಿ ರೇವಣ್ಣ ಈಗ ಸುಮ್ಮನಿರ್ತಾರಾ?
ಬೆಂಗಳೂರು: ಹಾಸನ ಜೆಡಿಎಸ್ ಪಕ್ಷಕ್ಕೆ ಸಿಂಹಾಸನವಿದ್ದಂತೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭದ್ರಕೋಟೆಯಲ್ಲಿ ಗೌಡರ ಕುಟುಂಬದ ಸದಸ್ಯರೇ ಮತ್ತೊಮ್ಮೆ ಟಿಕೆಟ್‌ಗಾಗಿ ಪಟ್ಟು ಹಿಡಿಯೋ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಸದ್ದು ಮಾಡಿದ್ದ ಹಾಸನದ ಟಿಕೆಟ್ ಹಂಚಿಕೆಯ ದಂಗಲ್ 2024ರ ಲೋಕಸಭಾ ಚುನಾವಣೆಯಲ್ಲೂ ಮರುಕಳಿಸುವ ಮುನ್ಸೂಚನೆ ನೀಡಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇತ್ತೀಚಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲಿ ನಿಖಿಲ್ ಸೇರಿ ಯಾರಿಗೂ ಎಂಪಿ ಟಿಕೆಟ್ ಇಲ್ಲ ಎಂದಿದ್ದರು. ಇದು ಹಾಸನಕ್ಕೂ ಅನ್ವಯಿಸುತ್ತೆ ಅನ್ನೋದು ಸಂಚಲನ ಸೃಷ್ಟಿಸಿದೆ. ಕುಮಾರಸ್ವಾಮಿಯವರ ವಾದಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಹೇಳಿದ್ದೇನು?
ಹಾಸನ ಲೋಕಸಭೆ ಕ್ಷೇತ್ರದ ಟಿಕೆಟ್ ಬಗ್ಗೆ ಹೆಚ್‌ಡಿಕೆ ಈಗಾಗಲೇ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಈ ಬಾರಿ ನಮ್ಮ ಕುಟುಂಬದಲ್ಲಿ ನಿಖಿಲ್ ಸೇರಿ ಯಾರಿಗೂ ಎಂಪಿ ಟಿಕೆಟ್ ಇಲ್ಲ. ಇದು ಸಂಸದ ಪ್ರಜ್ವಲ್ ರೇವಣ್ಣಗೂ ಅನ್ವಯ ಆಗುತ್ತೆಂದು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹಾಸನದಿಂದ ಮತ್ತೊಮ್ಮೆ ದೇವೇಗೌಡರೇ ಸ್ಪರ್ಧಿಸಲಿ ಎಂದು ಒತ್ತಾಯ ಕೇಳಿ ಬಂದಿದ್ದು, ಅತ್ಯಾಪ್ತರ ಬಳಿ ಕುಮಾರಸ್ವಾಮಿ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಪ್ರಜ್ವಲ್ ರೇವಣ್ಣ ವಾದವೇನು?
ಹೆಚ್.ಡಿ. ಕುಮಾರಸ್ವಾಮಿ ಅವರ ಎಚ್ಚರಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಹಾಲಿ ಹಾಸನ ಲೋಕಸಭೆ ಕ್ಷೇತ್ರದ ಸಂಸದನಾಗಿದ್ದೇನೆ. ದೇವೇಗೌಡರು ಹಾಲಿ ರಾಜ್ಯಸಭೆ ಕ್ಷೇತ್ರದ ಸದಸ್ಯರು. ಇದಕ್ಕಿಂತಲೂ ಮುಖ್ಯವಾಗಿ ಈ ಹಿಂದೆಯೇ ದೇವೇಗೌಡರು ಹೇಳಿ ಟಿಕೆಟ್ ನೀಡಿದ್ದರು. ನಾನು ಗ್ರಾಮಗಳ ಮಟ್ಟದಲ್ಲಿ ಸಭೆ ನಡೆಸುತ್ತಾ ಪಕ್ಷ ಸಂಘಟನೆ ಪ್ರಾರಂಭಿಸಿದ್ದೇನೆ. ಟಿಕೆಟ್ ಬಗ್ಗೆ ನನ್ನ ಬಳಿ ಯಾರು ಚರ್ಚೆಯನ್ನೇ ಮಾಡಿಲ್ಲ. ಕುಮಾರಸ್ವಾಮಿ ಅವರು ಎಲ್ಲಿಯೂ ಹೇಳಿಕೆ ನೀಡಿಲ್ಲ. ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿಕೊಂಡಿದ್ದೇನೆ ಎಂದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದರು. ಬಳಿಕ ಕಾರ್ಯಕರ್ತನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದ ಕುಮಾರಸ್ವಾಮಿ ಸಕ್ಸಸ್ ಕೂಡ ಆಗಿದ್ದರು. ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಈ ತಂತ್ರಗಾರಿಕೆಗೆ ಯಶಸ್ಸು ಸಿಕ್ಕಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲೂ ಹೆಚ್‌ಡಿಕೆ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿದ್ದಾರೆ. ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದ ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರು ಈ ಬಾರಿಯೂ ತ್ಯಾಗಕ್ಕೆ ಮುಂದಾಗ್ತಾರಾ. ಅಥವಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಟ್ಟು ಹಿಡಿಯುತ್ತಾರಾ ಅನ್ನೋದೇ ಕುತೂಹಲಕಾರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ