newsfirstkannada.com

ಜೈಲಿನಲ್ಲಿ ದರ್ಶನ್, ಪ್ರದೂಷ್‌ಗೆ ಬಿಗ್ ಶಾಕ್.. ಮತ್ತೊಂದು ಶಾಕಿಂಗ್ ವಿಚಾರ ಬೆಳಕಿಗೆ; ಏನದು?

Share :

Published June 26, 2024 at 9:24pm

    ಜೈಲಿನಲ್ಲಿ ಬೇರೆ ಕೈದಿಗಳಿಗೆ ಮುಖ ತೋರಿಸಲು ದರ್ಶನ್​ಗೆ ಮುಜುಗರ

    ದಿನ ಪೂರ್ತಿ ಜೈಲಿನ ಸೆಲ್​ನಲ್ಲೇ ಕುಳಿತು ನಟ ದರ್ಶನ್ ಬಾರಿ ಯೋಚನೆ

    ನಡೆದಿರುವ ಘಟನೆ ಪರಾಮರ್ಶೆ ಮಾಡಿಕೊಳ್ತಿದ್ದಾರೆ ಸ್ಯಾಂಡಲ್​ವುಡ್​ ನಟ

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 4 ದಿನಗಳು ಕಳೆದಿವೆ. ಜೈಲಿಗೆ ಹೋದಾಗಿನಿಂದ ದರ್ಶನ್ ಅವರಿಗೆ​ ಚಿಂತೆ ಆವರಿಸಿದೆ. ಜೈಲಿನಲ್ಲಿ ಯಾರೊಂದಿಗೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಜೈಲೊಳಗೆ ಕೂತು ಚಿಂತೆಯಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಲೋಕಸಭಾ ಚುನಾವಣೆ ಹೊತ್ತಲ್ಲೂ ನಟ ದರ್ಶನ್ ಹಾಗೂ ಆರೋಪಿ ಪ್ರದೂಶ್​ಗೆ ಪಿಸ್ತೂಲ್ ವಿನಾಯ್ತಿ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆಯ ಎಚ್ಚರಿಕೆ.. ಬೆಂಗಳೂರಿಗೆ ಹವಾಮಾನ ಇಲಾಖೆ ಕೊಟ್ಟ ಸೂಚನೆ ಏನು?

ಪಟ್ಟಣಗೆರೆ ಶೆಡ್​​​ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಮಾಡಿ ಕೊಂದ ಡಿ ಗ್ಯಾಂಗ್​ ಈಗ ಕಂಬಿ ಎಣಿಸ್ತಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​​ ಈಗಾಗಲೇ ಜೈಲಿನಲ್ಲಿ 4 ದಿನಗಳನ್ನು ಕಳೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ನಟ ದರ್ಶನ್ ಫುಲ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸ್ಟೇಷನ್​​ನಲ್ಲಿ ಓಡಾಡಿಕೊಂಡಿದ್ದ ದರ್ಶನ್ ಮೌನಕ್ಕೆ ಜಾರಿದ್ದಾರೆ. ಯಾರೊಂದಿಗೂ ಮಾತನಾಡದೇ ಮೌನಂ ಶರಣಂ ಗಚ್ಛಾಮಿ ಮಂತ್ರ ಜಪಿಸ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್​ನಿಂದ ನಟ ದರ್ಶನ್ ಕುಗ್ಗಿ ಹೋದಂತೆ ಕಾಣಿಸ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮೌನಕ್ಕೆ ಜಾರಿದ್ದಾರೆ. ಜೈಲಿನಲ್ಲಿ ಬೆಳಗ್ಗೆ 6:30ರಿಂದ ಸಂಜೆ 6ರವರೆಗೆ ಸೆಲ್ ಓಪನ್ ಇರುತ್ತೆ, ಆದ್ರೆ ಜೈಲು ಸೇರಿದಾಗಿನಿಂದ ನಟ ಹೊರಗೆ ಬಾರದೇ ಜೈಲಲ್ಲೇ ಕುಳಿತಿದ್ದಾರೆ. ಬೇರೆ ಕೈದಿಗಳಿಗೂ ಮುಖ ತೋರಿಸಲು ದರ್ಶನ್​ಗೆ ಮುಜುಗರ ಉಂಟಾಗಿದ್ದು ದಿನ ಪೂರ್ತಿ ಜೈಲಿನ ಸೆಲ್​ನಲ್ಲೇ ಕುಳಿತು ದರ್ಶನ್ ಯೋಚನೆಯಲ್ಲಿ ಮುಳುಗಿದ್ದಾರೆ. ನಡೆದಿರುವ ಘಟನೆಗೆ ಪರಾಮರ್ಶೆ ಮಾಡಿಕೊಳ್ತಿದ್ದು ಆತನ ನೋಡಲು ಬೇರೆ ಕೈದಿಗಳು ಬಂದರೂ ಸಹ ‘ದರ್ಶನ’ ನೀಡುತ್ತಿಲ್ಲ.

ಇದನ್ನೂ ಓದಿ: ‘ಅತ್ತಿಗೆ ನಿಮ್ಮ ಜೊತೆ ನಾವಿದ್ದೇವೆ’; ದರ್ಶನ್​ ಪತ್ನಿ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ ಅಭಿಮಾನಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲು ಸೇರಿರೋ ನಟ ದರ್ಶನ್ ಹಾಗೂ ಪ್ರದೂಶ್​​ನ ಪ್ರದೋಷ್​ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ. ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್​​ಗಳು, ಪ್ರದೂಶ್​ ಬಳಿ ಒಂದು ಲೈಸೆನ್ಸ್ ಪಿಸ್ತೂಲ್ ಇದೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದ್ರೆ ದರ್ಶನ್-ಪ್ರದೂಷ್ ಸೇರಿ 277 ಮಂದಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು ಅಂತ ಹೇಳಲಾಗ್ತಿದೆ. ಬೆಂಗಳೂರು ಪೊಲೀಸ್ ಕಮಿಷನರ್​ ಬಿ.ದಯಾನಂದ್​ ಅವರೇ ಖುದ್ದು ವಿನಾಯಿತಿ ನೀಡಿ ಅದೇಶ ಹೊರಡಿಸಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ನಟ ದರ್ಶನ್ ಹಾಗೂ ಪ್ರದೂಶ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಗನ್ ವಾಪಸ್ ಪಡೆಯುವ ಸಾಧ್ಯತೆ ಇದೆ.

ಯಾರಾರಿಗೆಲ್ಲಾ ಗನ್ ವಿನಾಯ್ತಿ ನೀಡಲಾಗುತ್ತೆ?

1.ನಿವೃತ್ತ ನ್ಯಾಯಾಧೀಶರು
2.IAS, IPS ಅಧಿಕಾರಿಗಳು
3.ಬ್ಯಾಂಕ್ ಮ್ಯಾನೇಜರ್​ಗಳು
4. ಬ್ಯುಸಿನೆಸ್ ಮೆನ್​​ಗಳು
5. ಶಾಸಕರು, ಎಂಎಲ್​​ಸಿಗಳು
6. ಹಿರಿಯ ರಾಜಕಾರಣಿಗಳು
7. ಅತಿ ಗಣ್ಯವ್ಯಕ್ತಿಗಳು

ಒಟ್ಟಿನಲ್ಲಿ ಒಳ್ಳೆಯ ಕರ್ಮದಿಂದ ಒಳ್ಳೆಯ ಫಲ. ಆದ್ರೆ ನಟ ದರ್ಶನ್ ಪರಿಸ್ಥಿತಿ ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ. ಹೆಸರಾಂತ ನಟನಾಗಿ ಕೊಲೆ ಕೇಸ್​​ನಲ್ಲಿ ಜೈಲುಪಾಲಾಗಿರೋದು ಕರ್ಮ ಈಸ್ ಬ್ಯಾಕ್ ಎನ್ನುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ದರ್ಶನ್, ಪ್ರದೂಷ್‌ಗೆ ಬಿಗ್ ಶಾಕ್.. ಮತ್ತೊಂದು ಶಾಕಿಂಗ್ ವಿಚಾರ ಬೆಳಕಿಗೆ; ಏನದು?

https://newsfirstlive.com/wp-content/uploads/2024/06/darshan2-1.jpg

Load More