/newsfirstlive-kannada/media/post_attachments/wp-content/uploads/2024/09/RCB_TEAM.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ಗೆ ಲೀಗ್​​ ಇನ್ನೇನು ಕೇವಲ 5 ತಿಂಗಳು ಬಾಕಿ ಇದೆ. ಇದಕ್ಕೂ ಮುನ್ನ ಐಪಿಎಲ್​ ಮೆಗಾ ಹರಾಜು ನಡೆಯಲಿದೆ. 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಐಪಿಎಲ್​​ ತಂಡಗಳಿಗೆ ಬಿಸಿಸಿಐ ಅವಕಾಶ ನೀಡಿದೆ. ಇದರ ಮಧ್ಯೆ ಆರ್​​​ಸಿಬಿಯಿಂದ ಒಂದು ಬಿಗ್​ ಅಪ್ಡೇಟ್​ ಹೊರಬಿದ್ದಿದೆ.
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಯಿಂದ ಔಟ್​ ಆಗಲಿರೋ ಪ್ಲೇಯರ್​ ಮತ್ಯಾರು ಅಲ್ಲ, ಕರಣ್​ ಶರ್ಮಾ​​. ಈ ಸುದ್ದಿ ಆರ್​​ಸಿಬಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿರುವುದು ಅಚ್ಚರಿ.
/newsfirstlive-kannada/media/post_attachments/wp-content/uploads/2024/04/Karn-Sharma-1.jpg)
ಯಾರು ಈ ಕರಣ್​ ಶರ್ಮಾ?
ಆರ್​​ಸಿಬಿ ತಂಡದ ಯುವ ಆಲ್​ರೌಂಡರ್​​ ಮಯಾಂಕ್​. ಕಳೆದ ಸೀಸನ್​​ನಲ್ಲಿ ಆರ್​​​ಸಿಬಿ ಪರ ಇವರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಲಿಲ್ಲ. 2024ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ ತಾನು ಆಡಿದ 9 ಪಂದ್ಯದಲ್ಲಿ ಕೇವಲ 31 ರನ್​​ ಗಳಿಸಿದ್ರು. ಬೌಲಿಂಗ್​​ನಲ್ಲೂ ಕೇವಲ 9 ವಿಕೆಟ್​ ಪಡೆದ್ರು. ಹಾಗಾಗಿ ಇವರನ್ನು ಕೈ ಬಿಡಲು ಆರ್​​ಸಿಬಿ ನಿರ್ಧರಿಸಿದೆ.
ಆರ್​​ಸಿಬಿಯಿಂದ ಕರಣ್​​ ಔಟ್​​
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹೀಗಾಗಿ ಬಲಿಷ್ಠ ಟೀಮ್​ ಕಟ್ಟಲು ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ. ಇದರ ಪರಿಣಾಮ ಕರಣ್​​ ಶರ್ಮಾಗೆ ಕೊಕ್​ ನೀಡಲಾಗುತ್ತಿದೆ.
ಇನ್ನು, ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವಿರಾಟ್​ ಕೊಹ್ಲಿ ಅವರನ್ನು ಮೊದಲು ರೀಟೈನ್​ ಮಾಡಿಕೊಳ್ಳಲಿದೆ. ಆರ್​​​ಸಿಬಿ ತಂಡ ರೀಟೈನ್​​ ಮಾಡಿಕೊಳ್ಳೋ 2ನೇ ಪ್ಲೇಯರ್​​​​ ಫಾಫ್​​ ಡುಪ್ಲೆಸಿಸ್​​​. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಸೇಂಟ್​​ ಲೂಯಿಸ್ ಕಿಂಗ್ಸ್ ತಂಡವನ್ನು ಚಾಂಪಿಯನ್​ ಮಾಡಿದ ಕಾರಣಕ್ಕೆ ಫಾಫ್​ ಅವರನ್ನು ಉಳಿಸಿಕೊಳ್ಳಲಾಗುತ್ತಿದೆ. ಜತೆಗೆ ಮೊಹಮ್ಮದ್​ ಸಿರಾಜ್​ ಹೆಸರು ಕೂಡ ಆರ್​​ಸಿಬಿ ರೀಟೈನ್​ ಲಿಸ್ಟ್​​ನಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us