newsfirstkannada.com

ವಿಶ್ವಕಪ್​ ಸೆಮಿಸ್​ನಲ್ಲಿ ಮತ್ತೊಂದು ಸೇಡಿನ ಸಮರ.. ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್​ ಪ್ರವೇಶಿಸುತ್ತಾ ಸೌತ್ ಆಫ್ರಿಕಾ?

Share :

16-11-2023

    ಈ ಸಲ ಚೋಕರ್ಸ್​ ಪಟ್ಟ ಕಳಚುತ್ತಾ ಸೌತ್ ಆಫ್ರಿಕಾ..?

    ಆಸಿಸ್​ ಎದುರು 3ನೇ ಬಾರಿ ಖುಲಾಯಿಸುತ್ತಾ ಅದೃಷ್ಟ..?

    ಅಗ್ರೆಸ್ಸಿವ್ ಆಸಿಸ್​​​​ಗೆ ಸವಾಲ್ ಆಗ್ತಾರಾ ಆಫ್ರಿಕನ್ಸ್​..?

ಇವತ್ತು ಮತ್ತೊಂದು ಹೈವೋಲ್ಟೇಜ್​ ಮ್ಯಾಚ್​​ಗೆ ಕೌಂಟ್​ಡೌನ್ ಶುರುವಾಗಿದೆ. ಬಲಿಷ್ಠ ಸೌತ್ ಆಫ್ರಿಕಾ – ಆಸ್ಟ್ರೇಲಿಯಾ ತಂಡಗಳು ಭಾರತದ ಕ್ರಿಕೆಟ್​ ಕಾಶಿ ಈಡನ್ ಗಾರ್ಡನ್ಸ್​ನಲ್ಲಿ ಮುಖಾಮುಖಿಯಾಗ್ತಿವೆ. ಒಂದೆಡೆ ಆಸ್ಟ್ರೇಲಿಯಾ, ಸೌತ್​ ಆಫ್ರಿಕನ್ಸ್​​​​​​​​​​​ಗೆ ಟಕ್ಕರ್ ಕೊಟ್ಟು ಫೈನಲ್​​ಗೇರುವ ತವಕದಲ್ಲಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ, ಚೋಕರ್ಸ್ ಹಣಪಟ್ಟಿ ಕಳಚಲು ಹವಣಿಸುತ್ತಿದೆ.

ದೈತ್ಯ ಬ್ಯಾಟಿಂಗ್ ಪಡೆ.. ಸ್ಟಾರ್​ ವೇಗಿಗಳ ದಂಡು… ಪಂದ್ಯಕ್ಕೆ ಯಾವ ಕ್ಷಣದಲ್ಲಾದ್ರೂ ತಿರುವ ನೀಡೋ ಗೇಮ್​ ಚೇಂಜರ್ಸ್​.. ಇದು ಸೌತ್ ಆಫ್ರಿಕಾ​ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳ ಶಕ್ತಿ. ಕ್ರಿಕೆಟ್​ ಲೋಕದ ಎರಡು ಬಲಾಢ್ಯ ತಂಡಗಳಾಗಿರೋ ಇವು ಇವತ್ತು ಮಹತ್ವದ ರಣಕಣದಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ಇವರಿಬ್ಬರ ಟಾರ್ಗೆಟ್​​ ಒಂದೇ. ಅದೇ ಫೈನಲ್ ಟಿಕೆಟ್​.

ವಿಶ್ವಕಪ್​ನ ಸೆಮಿಫೈನಲ್​​ -2ರಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗ್ತಿದ್ದು, ಫೈನಲ್​​​ ರಣಕಣಕ್ಕೆ ಎಂಟ್ರಿ ನೀಡೋ ಲೆಕ್ಕಾಚಾರದಲ್ಲಿವೆ. ಲೀಗ್​ನಲ್ಲಿ ಅತ್ಯದ್ಬುತ ಪ್ರದರ್ಶನ ನೀಡಿರುವ ಸೌತ್​​ ಆಫ್ರಿಕಾ, ಫಸ್ಟ್​ ಟೈಮ್ ಫೈನಲ್​​ಗೆ ಎಂಟ್ರಿ ನೀಡುವ ತವಕದಲ್ಲಿದೆ. ಚೋಕರ್ಸ್​ ಹಣೆಪಟ್ಟಿ ಕಳಚುವ ಶಪಥ ಮಾಡಿದೆ.

ವಿಶ್ವಕಪ್​​​​​​​​ನ ಮೊದಲ ಫೈನಲ್​ ಕನಸು ಈಡೇರುತ್ತಾ..?

ವಿಶ್ವಕಪ್​ ಇತಿಹಾಸದಲ್ಲಿ ಇದುವರೆಗೆ ಫೈನಲ್​​ಗೇರದ ಸೌತ್ ಆಫ್ರಿಕಾ, ಈ ಸಲ ಸೆಮಿಫೈನಲ್​​ ಗೆದ್ದು ಆ ಸಾಧನೆ ಮಾಡೋ ಹಠದಲ್ಲಿದೆ. ಇದುವರೆಗೆ ಸೆಮಿಫೈನಲ್​​ನಲ್ಲಿ ಗೆಲುವನ್ನೇ ಕಾಣದೆ ಚೋಕರ್ಸ್ ಎಂಬ ಹಣೆಪಟ್ಟಿ ಗಿಟ್ಟಿಸಿಕೊಂಡಿರುವ ಹರಿಣಗಳ ಪಡೆ, ಅಪಖ್ಯಾತಿಗೆ ಬ್ರೇಕ್ ಹಾಕಲು ಸಜ್ಜಾಗಿ ನಿಂತಿದೆ. 1992, 1999, 2007, 2015ರ ವಿಶ್ವಕಪ್​ನ ಸೆಮಿಫೈನಲ್​ಗಳ ಸೋಲಿಗೆ ಉತ್ತರ ನೀಡುವ ಇರಾದೆಯಲ್ಲಿದೆ.

ಇದನ್ನು ಓದಿ: ಕಿಂಗ್​ ಕೊಹ್ಲಿ ವಿಶ್ವ ದಾಖಲೆ.. ಪರಮ ಗುರುವಿಗೆ ಶಿರಬಾಗಿ ನಮಿಸಿದ ವಿರಾಟ.!

ನಾಲ್ಕು ಸೋಲಗಳಲ್ಲಿ ಎರಡು ಸೆಮಿಸ್​ ಸೋಲಿಗೆ ಆಸಿಸ್ ಕಾರಣ!

ಸೌತ್ ಆಫ್ರಿಕಾ ವಿಶ್ವಕಪ್​ನಲ್ಲಿ ಆಡಿದ 4 ಸೆಮಿಫೈನಲ್​ಗಳಲ್ಲಿ 2ರ ಸೋಲಿಗೆ ಕಾರಣವೇ ಆಸ್ಟ್ರೇಲಿಯಾ..! 1999 ಹಾಗೂ 2007ರ ಏಕದಿನ ವಿಶ್ವಕಪ್​ ಸೆಮೀಸ್​ನಲ್ಲಿ ಸೌತ್ ಆಫ್ರಿಕನ್ಸ್​ ಕನಸಿಗೆ ಕೊಳ್ಳಿ ಇಟ್ಟಿದ್ದ ಆಸ್ಟ್ರೇಲಿಯಾನೇ ಇಂದು ಎದುರಾಳಿಯಾಗ್ತಿದೆ. ಹೀಗಾಗಿ ಈ ಹಿಂದಿನ ಸೋಲಿನ ರಿವೇಂಜ್ ತೀರಿಸಿಕೊಳ್ಳೋ ತವಕದಲ್ಲಿದೆ.

ಅಗ್ರೆಸ್ಸಿವ್ ಆಸ್ಟ್ರೇಲಿಯನ್ಸ್​ಗೆ ಸವಾಲ್ ಆಗ್ತಾರಾ ಆಫ್ರಿಕನ್ಸ್​..?

ಪ್ರಸಕ್ತ ವಿಶ್ವಕಪ್​ನ ಆರಂಭದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯನ್ಸ್ ಮುಖಭಂಗ ಅನುಭವಿಸಿದ್ರು. ನಂತರ ಫಿನಿಕ್ಸ್​ನಂತೆ ಮೇಲೆದ್ದು ಬಂದಿದೆ. ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಸದ್ಯ ಗೆಲುವಿನ ಲಯದಲ್ಲಿರುವ ಆಸ್ಟ್ರೇಲಿಯಾ, ಲೀಗ್​ ಸ್ಟೇಜ್​ ಸೋಲಿನ ಸೇಡು ತೀರಿಸಿಕೊಳ್ಳವ ಯತ್ನದಲ್ಲಿದೆ.. 9ನೇ ಬಾರಿ ಸೆಮಿಸ್​ ಎಂಟ್ರಿ ನೀಡಿರುವ 5 ಬಾರಿಯ ಚಾಂಪಿಯನ್ಸ್​, ಈ ಸಲ ಫೈನಲ್​​​ಗೇರೋಕೆ ಭಾರೀ ಸ್ಟ್ರಾಟರ್ಜಿಯನ್ನೇ ರೂಪಿಸಿದೆ.

ಇದನ್ನು ಓದಿ: 4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್

ಸಮಬಲರ ಹೋರಾಟದಲ್ಲಿ ಯಾರಿಗೆ ಫೈನಲ್ ಟಿಕೆಟ್..?

ಈ ಹಿಂದಿನ ವಿಶ್ವಕಪ್​ ಲೆಕ್ಕಾಚಾರ ಏನೇ ಇದ್ರೂ, ಈ ಬಾರಿ ಆಸಿಸ್​ ಹಾಗೂ ಆಫ್ರಿಕಾ ಎರಡೂ ತಂಡಗಳು ಸಮಬಲರಾಗೇ ಕಾಣ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್​ ಹಾಗೂ ಫೀಲ್ಡಿಂಗ್​ನಲ್ಲಿ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಇಂದಿನ ಸೆಮಿಫೈನಲ್​ನಲ್ಲಿ ಗೆದ್ದು, ಯಾರು ಫೈನಲ್​​ಗೆ ಎಂಟ್ರಿ ನೀಡ್ತಾರೆ ಅನ್ನೋದು ಸದ್ಯ ಕುತೂಹಲ ಹೆಚ್ಚಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಸೆಮಿಸ್​ನಲ್ಲಿ ಮತ್ತೊಂದು ಸೇಡಿನ ಸಮರ.. ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್​ ಪ್ರವೇಶಿಸುತ್ತಾ ಸೌತ್ ಆಫ್ರಿಕಾ?

https://newsfirstlive.com/wp-content/uploads/2023/11/AUSvsSA.jpg

Load More