newsfirstkannada.com

ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಮತ್ತೊಂದು ಬಿಗ್ ಶಾಕ್.. ಪವಾರ್ ಕಂಡ ಕನಸಿನ ಪಕ್ಷದಲ್ಲಿ ಏನಾಗ್ತಿದೆ..?

Share :

21-07-2023

    NCPಯಲ್ಲಿ ಅಜಿತ್ ಪವಾರ್ vs ಶರದ್ ಪವಾರ್

    ಅಂದು 8 ಶಾಸಕರು, ಇಂದು ಮತ್ತೆ 7 ಶಾಸಕರು..!

    ಅಜಿತ್ ಪವಾರ್​​​​ ವಿಚಾರದಲ್ಲಿ ಶರದ್​​​​ಗೆ ಮತ್ತೆ ಹಿನ್ನಡೆ

ನ್ಯಾಷನಲಿಸ್ಟ್ ಕಾಂಗ್ರೆಸ್​ ಪಾರ್ಟಿ (ಎನ್​​ಸಿಪಿ) ಮುಖ್ಯಸ್ಥ ಶರದ್ ಪವಾರ್​​ಗೆ ಮತ್ತೊಂದು ಆಘಾತವಾಗಿದೆ. ಒಡೆದ ಮನೆಯಾಗಿರುವ ಪಕ್ಷದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದ್ದು, ಅಜಿತ್ ಪವಾರ್ ಬಿಜೆಪಿಗೆ ಬೆಂಬಲಿಸಿದ ಬೆನ್ನಲ್ಲೇ, ನಾಗಲ್ಯಾಂಡ್​ ಶಾಸಕರು ಶರದ್ ಪವಾರ್​ಗೆ ಶಾಕಿಂಗ್ ನ್ಯೂಸ್​ ಕೊಟ್ಟಿದ್ದಾರೆ.

ಬಂಡಾಯವೆದ್ದಿರುವ ಅಜಿತ್ ಪವಾರ್​​ಗೆ ತಾವು ಬೆಂಬಲ ನೀಡುತ್ತಿರೋದಾಗಿ ನಾಗಲ್ಯಾಂಡ್​ನ 7 ಶಾಸಕರು ಘೋಷಣೆ ಮಾಡಿದ್ದಾರೆ. ಶರದ್ ಪವಾರ್​ಗೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಪತ್ರ ಬರೆದಿದ್ದಾರೆ.
ನಾಗಲ್ಯಾಂಡ್​​ನಲ್ಲಿರುವ ಎನ್​ಸಿಪಿಯ ಎಲ್ಲಾ ಸದಸ್ಯರು ಅಜಿತ್ ಪವಾರ್ ಮತ್ತು ಪರ್ಫುಲ್ ಪಟೇಲ್ ನೇತೃತ್ವದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಅದರಂತೆ, ನಾವು ಅಜಿತ್ ಪವಾರ್​​ಗೆ ಬೆಂಬಲ ನೀಡುತ್ತಿರೋದಾಗಿ ತಿಳಿಸಿದ್ದಾರೆ.

ಶರದ್ ಪವಾರ್ ವಿರುದ್ಧ ಸಿಡಿದೆದ್ದಿರುವ ಅಜಿತ್ ಪವಾರ್, ಜುಲೈ 2 ರಂದು 8 ಶಾಸಕರ ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಮಾತ್ರವಲ್ಲ, 8 ಮಂದಿಯೂ ನೂತನ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಅಜಿತ್ ಪವಾರ್​ ಈಗ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದು, ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್​ಗೆ ಮತ್ತೊಂದು ಬಿಗ್ ಶಾಕ್.. ಪವಾರ್ ಕಂಡ ಕನಸಿನ ಪಕ್ಷದಲ್ಲಿ ಏನಾಗ್ತಿದೆ..?

https://newsfirstlive.com/wp-content/uploads/2023/07/SHARAD.jpg

Load More