newsfirstkannada.com

KL ರಾಹುಲ್​, ಪಡಿಕ್ಕಲ್​ ಅಲ್ಲ; ಆರ್​​​ಸಿಬಿಗೆ ಮತ್ತೋರ್ವ ಸ್ಟಾರ್​ ಕನ್ನಡಿಗನ ಎಂಟ್ರಿ; ಬೆಂಗಳೂರಿಗೆ ಬಂತು ಆನೆಬಲ!

Share :

Published August 30, 2024 at 10:51pm

    ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್

    ಇನ್ನೆರಡು ತಿಂಗಳಲ್ಲಿ ಐಪಿಎಲ್ 2025ರ ಮೆಗಾ ಹರಾಜು

    ಹರಾಜಿನಲ್ಲಿ ಕನ್ನಡಿಗನ ಮೇಲೆ ಆರ್​​​ಸಿಬಿ ಹದ್ದಿನ ಕಣ್ಣು!

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಐಪಿಎಲ್ 2025ರ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಯಾರನ್ನು ರಿಲೀಸ್ ಮಾಡಬೇಕು? ಯಾರನ್ನು ಉಳಿಸಿಕೊಳ್ಳಬೇಕು? ಎಂದು ಐಪಿಎಲ್​ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಇದರ ಮಧ್ಯೆ ಸ್ಟಾರ್​ ಆಟಗಾರನ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ.

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್​​​ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್​ಗಳ ಗೆಲುವು ಸಾಧಿಸಿತ್ತು. ಮೈಸೂರು ತಂಡದ ಪರ ಅತ್ಯುತ್ತಮವಾಗಿ ಬ್ಯಾಟ್​ ಬೀಸಿದ ಕರುಣ್​ ನಾಯರ್​​ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್​ ಚಚ್ಚಿದ್ರು. 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಮೆಗಾ ಆಕ್ಷನ್​​ ನಡೆಯಲಿರೋ ಹೊತ್ತಲ್ಲೇ ಕನ್ನಡಿಗ ಕರುಣ್​​ ನಾಯರ್​ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹಾಗಾಗಿ ಕರುಣ್​ ನಾಯರ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಕರುಣ್​​ ನಾಯರ್ ಖರೀದಿ ಏಕೆ?

ಕರ್ನಾಟಕದ ಕ್ರಿಕೆಟರ್​ ಕರುಣ್​ ನಾಯರ್​​. ಇವರ ಹೋಮ್​ ಗ್ರೌಂಡ್​​​ ಚಿನ್ನಸ್ವಾಮಿ ಸ್ಟೇಡಿಯಮ್​​. ಬೆಂಗಳೂರು ಲೋಕಲ್​ ಆಗಿರೋ ಇವರು ಟಾಪ್​ ಆರ್ಡರ್​ ಬ್ಯಾಟರ್​ ಕೂಡ ಹೌದು. ಬಿಗ್​ ಹಿಟ್ಟರ್​ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರೋ ಹುಲಿಯಾಗಿರೋ ಕರುಣ್​ ನಾಯರ್​​ ಅವರನ್ನು ಆರ್​​ಸಿಬಿ ಕರೆ ತಂದರೆ ಘರ್ಜಿಸೋದು ಗ್ಯಾರಂಟಿ. ಫಾಫ್​ ಡುಪ್ಲೆಸಿಸ್​​ ಸ್ಥಾನಕ್ಕೆ ಒಳ್ಳೆಯ ಆಯ್ಕೆ ಅನ್ನೋದು ಆರ್​​ಸಿಬಿ ಪ್ಲಾನ್​​.

ಈ ಹಿಂದೆ ನನಗೆ 30 ವರ್ಷ. ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ20 ನಂತರ, ನಾನು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರ ರಣಜಿ ಟ್ರೋಫಿ ಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್​ನಲ್ಲೂ ಅತೀ ಹೆಚ್ಚು ರನ್​​ ಗಳಿಸಿದ್ದೆ. ಆದ್ರೂ ನನಗೆ ಐಪಿಎಲ್​​ನಲ್ಲಿ ಅವಕಾಶ ಸಿಗಲಿಲ್ಲ ಎಂದು ಕರುಣ್​ ನಾಯರ್​ ಕಣ್ಣೀರಿಟ್ಟಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್​, ಪಡಿಕ್ಕಲ್​ ಅಲ್ಲ; ಆರ್​​​ಸಿಬಿಗೆ ಮತ್ತೋರ್ವ ಸ್ಟಾರ್​ ಕನ್ನಡಿಗನ ಎಂಟ್ರಿ; ಬೆಂಗಳೂರಿಗೆ ಬಂತು ಆನೆಬಲ!

https://newsfirstlive.com/wp-content/uploads/2024/08/RCB_TEAM-3.jpg

Load More