ಇಂದಿನಿಂದಲೇ ಬಹುನಿರೀಕ್ಷಿತ 2023 ಏಷ್ಯಾಕಪ್ ಸ್ಟಾರ್ಟ್
ಸೆಪ್ಟೆಂಬರ್ 2ಕ್ಕೆ ಟೀಂ ಇಂಡಿಯಾ, ಪಾಕಿಸ್ತಾನ ಮುಖಾಮುಖಿ
ಪಂದ್ಯಕ್ಕೆ ಮುನ್ನವೇ ಟೀಂ ಇಂಡಿಯಾಗೆ ಬಾಬರ್ ವಾರ್ನಿಂಗ್
ಬಹುನಿರೀಕ್ಷಿತ 2023 ಏಷ್ಯಾಕಪ್ ಟೂರ್ನಿ ಇಂದಿನಿಂದಲೇ ಶುರುವಾಗಿದೆ. ಹೀಗಾಗಿ ಇಡೀ ಕ್ರೀಡಾ ಜಗತ್ತೇ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದೆ. ಸೆಪ್ಟೆಂಬರ್ 2ನೇ ತಾರೀಕು ಪಲ್ಲೆಕೆಲೆ ಮೈದಾನದಲ್ಲಿ ನಡೆಯಲಿರೋ ಈ ಬಿಗ್ ಮ್ಯಾಚ್ಗಾಗಿ ಟೀಂ ಇಂಡಿಯಾ, ಪಾಕ್ ಆಟಗಾರರು ಭರ್ಜರಿ ತಯಾರಿ ನಡೆಸಿಕೊಂಡಿದ್ದಾರೆ.
ಟೀಂ ಇಂಡಿಯಾ ಆಟಗಾರರು ಆರು ದಿನಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಲೂರು ಕ್ಯಾಂಪಸ್ನಲ್ಲಿ ಸೇರಿರೋ ಆಟಗಾರರು ಅಂತಿಮ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾಗೆ ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ.
ಹೌದು, ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ ಬ್ಯಾಕ್ ಟು ಬ್ಯಾಕ್ ಸೆಂಚೂರಿ ಬಾರಿಸೋ ಮೂಲಕ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇಂದು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೇಪಾಳದ ವಿರುದ್ಧ ನಡೆಯುತ್ತಿರೋ ಏಷ್ಯಾಕಪ್ ಪಂದ್ಯದಲ್ಲಿ ಬಾಬರ್ ಅಜಮ್ ಶತಕ ಸಿಡಿಸಿದ್ದಾರೆ.
ನೇಪಾಳ ತಂಡದ ಬೌಲರ್ಸ್ ಬೆಂಡೆತ್ತಿದ ಬಾಬರ್ ಅಜಮ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ್ದಾರೆ. ಬರೋಬ್ಬರಿ 13 ಫೋರ್, 2 ಸಿಕ್ಸರ್ ಮೂಲಕ ಶತಕ ಬಾರಿಸಿದ್ದಾರೆ. ಸದ್ಯ ಇನ್ನೂ ಪಂದ್ಯ ನಡೆಯುತ್ತಿದ್ದು, ಬಾಬರ್ ಅಜೇಯ 121 ಬಾಲ್ನಲ್ಲಿ 131 ರನ್ ಚಚ್ಚಿದ್ದಾರೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಎದುರಾಗೋ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ