ಈ ಬಾರಿಯ ಬಿಗ್‌ಬಾಸ್ ಕಾನ್ಸೆಪ್ಟ್ ಮೇಲೆಯೇ ಸಾಕಷ್ಟು ಮಂದಿ ಚಿತ್ತ
ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋ ಹೆಸರುಗಳು ನಿಜಾನಾ?
ಇಷ್ಟು ದಿನ ಯಾವಾಗಪ್ಪಾ ಬಿಗ್‌ಬಾಸ್ ಬರುತ್ತೆ ಅಂತ ಕಾಯುತ್ತಿದ್ದ ವೀಕ್ಷಕರು ಇನ್ನೂ ಒಂದೇ ಒಂದು ದಿನದಲ್ಲಿ ಈ ಶೋ ಅಧಿಕೃತವಾಗಿ ಶುರುವಾಗಲಿದೆ. ಸೆಪ್ಟೆಂಬರ್ 29ರಂದು ಒಟ್ಟು 5 ಸ್ಪರ್ಧಿಗಳು ಬಿಗ್ಬಾಸ್ಗೆ ಹೋಗಲಿದ್ದಾರೆ. ವೀಕ್ಷಕರು ನೀಡುವ ವೋಟ್ನಿಂದ ಯಾರು ಸ್ಪರ್ಗಕ್ಕೆ ಹೋಗ್ತಾರಾ? ಯಾರು ನರಕಕ್ಕೆ ಹೋಗ್ತಾರೆ ಅಂತ ಗೊತ್ತಾಗಲಿದೆ. ವಿಶೇಷ ಎಂದರೆ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಈ ಬಗ್ಗೆ ಅಧಿಕೃತವಾಗಿ ತಿಳಿದು ಬರಲಿದೆ.
ಇದನ್ನೂ ಓದಿ: BIGG BOSS 11: ಈ ಬಾರಿ ನರಕದ ಕ್ರೂರ ದರ್ಶನ ಪಕ್ಕಾ.. ಬಿಗ್‌ಬಾಸ್ ಸ್ಪರ್ಧಿಗಳ ಗತಿಯೇನು?
ಹೌದು, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರ ಹೊಸ ಅಧ್ಯಾಯ ಶುರುವಾಗುವ ಮೊದಲೇ ಹಲವು ವಿಚಾರಗಳಲ್ಲಿ ಚರ್ಚೆಯಾಗ್ತಿದೆ. ಪ್ರತಿ ಸೀಸನ್ ಸ್ಪರ್ಧಿಗಳು ಯಾರು ಇರ್ತಾರೆ ಅನ್ನೋದರ ಮೇಲೆ ವೀಕ್ಷಕರ ಚಿತ್ತ ಇರ್ತಿತ್ತು. ಬಟ್ ಈ ಬಾರಿ ಕೌತುಕ ಹೆಚ್ಚಿಸಿರೋದು ಬಿಗ್ ಬಾಸ್ ಕಾನ್ಸೆಪ್ಟ್. ಈ ಬಾರಿಯ ಸೀಸನ್ 11ರಲ್ಲಿ ಸ್ವರ್ಗ-ನರಕ ಎಂಬ ಎರಡು ಕಾನ್ಸೆಪ್ಟ್ ಇರಲಿದೆ.
ಸೀಸನ್ 10 ಸಮರ್ಥರು ಹಾಗೂ ಅಸಮರ್ಥರು ಎಂಬ ಕಾನ್ಸೆಪ್ಟ್ನಲ್ಲಿ ಮಾಡಲಾಗಿತ್ತು. ಆಡಿಯನ್ಸ್ ಕೈಗೆ ವೂಟಿಂಗ್ ಪವರ್ ಕೊಟ್ಟಿದ್ದರು. ಯಾರು ಬಿಗ್‌ಬಾಸ್ ಮನೆಗೆ ಹೋಗ್ಬೇಕು? ಯಾರು ಹೋಗ್ಬಾರ್ದು ಅನ್ನೋದನ್ನ ವೀಕ್ಷಕರ ಮೂಲಕ ತಿಳಿಸಲಾಯ್ತು. ಅದರಲ್ಲಿ 80 ಪರ್ಸಂಟ್ಕ್ಕಿಂತ ಹೆಚ್ಚು ಓಟ್ ಬಂದವ್ರು ನೇರವಾಗಿ ಸಮರ್ಥರಾಗಿ ಮನೆಗೆ ಎಂಟ್ರಿ ಕೊಟ್ಟರೇ ವೇಟಿಂಗ್ ಲಿಸ್ಟ್ನಲ್ಲಿ ಉಳಿದವರು ಅಸಮರ್ಥ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ರು. ಇದೇ ರೀತಿ ಸ್ವರ್ಗ-ನರಕ ಇರಲಿದೆ.
ಇದೇ ಭಾನುವಾರ ಬಿಗ್‌ಬಾಸ್ ಅಸಲಿ ಕಥೆ ರಿವೀಲ್ ಆಗ್ತಿದೆ. ಈ ನಡುವೆ ಬಿಗ್ ಮನೆಗೆ ಕಾಲಿಡೋ ಆ ಸೆಲೆಬ್ರಿಟಿಗಳು ಯಾರು? ಅನ್ನೋದು ಸದ್ಯದ ಕೌತುಕ. ಇದಕ್ಕೂ ರಾಜಾರಾಣಿ ಶೋನಲ್ಲಿ ಶನಿವಾರ ಉತ್ತರ ಸಿಗಲಿದೆ. ಆದ್ರೇ ಈಗ ಎಲ್ಲರ ಚಿತ್ತ ಇರೋದು ಆ ಪ್ರೋಮೋ ಮೇಲೆ. ಹೌದು, ಹೊಸ ಪ್ರೊಮೋ ರಿಲೀಸ್ ಆಗಿದ್ದು, ಅದರಲ್ಲಿ ಕೆಲವು ಫೋಟೋಗಳನ್ನ ತೋರಿಸಲಾಗಿದೆ.
ಇದನ್ನೂ ಓದಿ: BBK11: ವೀಕ್ಷಕರಿಗೆ ಗುಡ್ನ್ಯೂಸ್; ಇಂದು ಬಿಗ್ ಅಪ್ಡೇಟ್ ಹೊತ್ತು ತರ್ತಿದೆ ಬಿಗ್‌ಬಾಸ್ ತಂಡ.. ಏನದು?
ಆದರೆ ಆ ಫೋಟೋಗಳು ಅಷ್ಟೊಂದು ಸ್ಪಷ್ಟವಾಗಿಲ್ಲ. ಬ್ಲರ್ ಆಗಿದ್ದು, ಯಾರು? ಯಾರು ಇರಬಹುದು ಆ ಸ್ಪರ್ಧಿಗಳು ಅಂತ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಆ ಫೋಟೋಗಳನ್ನ ಡೀಕೋಡ್ ಮಾಡೋಕೆ ಹಲವರು ಯತ್ನಿಸಿದ್ದಾರೆ. ಆ ಬ್ಲರ್ ಫೋಟೋಗಳಲ್ಲಿ ವೀಕ್ಷಕರು ಕೆಲವೊಂದು ಸ್ಟಾರ್ ಸೆಲೆಬ್ರಿಟಿಗಳ ಹೆಸರನ್ನು ಗೆಸ್ ಮಾಡಿದ್ದಾರೆ.
ನಿರ್ದೇಶಕ ಎಸ್ ನಾರಾಯಣ ಅವರ ಮಗ ನಟ ಪಂಕಜ್, ಸತ್ಯ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾದವ್, ವಜ್ರಕಾಯ ಸಿನಿಮಾ ಖ್ಯಾತಿಯ ನಟಿ ನಭಾ ನಟೇಶ್, ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್, ರೀಲ್ಸ್ ಮೂಲಕ ಖ್ಯಾತಿಯ ಪಡೆದಿರೋ ಭೂಮಿಕಾ ಬಸವರಾಜ್, ಅಂತರಪಟ ಖ್ಯಾತಿಯ ನಟಿ ತನ್ವಿ ಬಾಲರಾಜ್ ಈ ಬಾರಿ ಬಿಗ್‌ಬಾಸ್ ಹೋಗ್ತಾರೆ ಅನ್ನೋ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದಕ್ಕೆ ಮೂಲ ಕಾರಣ, ಕಲರ್ಸ್ ಕನ್ನಡದವರೇ ಬ್ಲರ್ ಮಾಡಿರೋ ಫೋಟೋಗಳು. ಸದ್ಯ ನಾಳೆ ರಾಜಾರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಐವರು ಸ್ಪರ್ಧಿಗಳ ಹೆಸರನ್ನು ಮಾತ್ರ ರಿವೀಲ್ ಮಾಡಲಿದ್ದಾರೆ. ಅದರಲ್ಲಿ ಸ್ವರ್ಗ ಯಾರಿಗೆ ನರಕ ಯಾರಿಗೆ ಅನ್ನೋದನ್ನ ಜನರು ನೀಡುವ ವೋಟ್ ಮೂಲಕ ನಿರ್ಧಾರ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ