ರಾಹುಲ್ ತ್ರಿಪಾಠಿ ಬಂಧಿತ ಸಬ್ ಇನ್ಸ್‌ಪೆಕ್ಟರ್
ಅಧಿಕಾರಿ ರಾಹುಲ್ ತ್ರಿಪಾಠಿ ಸಿಕ್ಕಿಬಿದ್ದಿದ್ದು ಹೇಗೆ..?
ಬಂಧಿಸಿ ಕರ್ಕೊಂಡು ಹೋಗ್ತಿರುವ ವಿಡಿಯೋ ವೈರಲ್
ಉತ್ತರ ಪ್ರದೇಶದ ಲಕ್ನೋದಲ್ಲಿ ಲಂಚ ಪಡೆಯುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ರಾಹುಲ್ ತ್ರಿಪಾಠಿ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ತಂಡ ಬಂಧಿಸಿದೆ. ಲಂಚದ ಬೇಡಿಕೆಯ ಮೇರೆಗೆ ಇನ್ ಸ್ಪೆಕ್ಟರ್ ವಿರುದ್ಧ ಬುದ್ಧೇಶ್ವರದ ಹೋಟೆಲ್ ಮಾಲೀಕ ವಿನೋದ್ ಕುಮಾರ್ ಎಂಬುವವರು ದೂರು ನೀಡಿದ್ದರು.
ಖಚಿತ ಮಾಹಿತಿ ಪಡೆದ ಭ್ರಷ್ಟಾಚಾರ ನಿಗ್ರಹ ದಳದ ಇನ್ ಸ್ಪೆಕ್ಟರ್ ನೂರುಲ್ ಹುದಾ ಖಾನ್ ನೇತೃತ್ವದಲ್ಲಿ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರ ಪ್ರಕರಣದಲ್ಲಿ 10,000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಅಧಿಕಾರಿಗಳ ಕೈಗೆ ಸಬ್ ಇನ್ಸ್‌ಪೆಕ್ಟರ್ ಸಿಕ್ಕಿ ಬೀಳುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆತನನ್ನು ಬಿಗಿಯಾಗಿ ಹಿಡಿದುಕೊಂಡು ಹರೌನಿ ಪೋಸ್ಟ್ನಿಂದ ಪಿಜಿಐ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. 2019ರ ಬ್ಯಾಚ್ನ ರಾಹುಲ್ ತ್ರಿಪಾಠಿಯನ್ನು ಮೋಹನ್ ಲಾಲ್ ಗಂಜ್ ಠಾಣೆಗೆ ನಿಯೋಜಿಸಲಾಗಿತ್ತು. ಕೆಲವು ತಿಂಗಳು ಹಿಂದಷ್ಟೇ ಬಂಟ್ರಾದ ಹರೌಣಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ಆಗಸ್ಟ್ 28 ರಂದು ಯುವತಿಯೊಬ್ಬಳು ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣದ ತನಿಖೆಯನ್ನು ರಾಹುಲ್ ತ್ರಿಪಾಠಿ ನಡೆಸುತ್ತಿದ್ದರು. ತನಿಖೆ ಶುರುಮಾಡಿ ಆರೋಪಿಗಳ ಮೇಲೆ ಅತ್ಯಾಚಾರದ ಸೆಕ್ಷನ್‌ಗಳನ್ನು ಹೆಚ್ಚಿಸಿದ್ದರು. ಕೊನೆಗೆ ಆರೋಪಿ ವಿಶಾಲ್ ರಾವತ್ ಹಾಗೂ ಮತ್ತೊಬ್ಬನನ್ನು ಜೈಲಿಗೆ ಕಳುಹಿಸಿದ್ದರು. ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಹೋಟೆಲ್ನ ಮಾಲೀಕ ವಿನೋದ್ ಕುಮಾರ್ನನ್ನೂ ವಿಚಾರಣೆಗೆ ಕರೆ ತಂದಿದ್ದರು. ಈ ವೇಳೆ ಆತನ ಬಳಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೊನೆಗೆ 10 ಸಾವಿರ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ ರಾಹುಲ್ ತ್ರಿಪಾಠಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ