newsfirstkannada.com

ನಿಮ್ಮಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ.. ನೇಹಾ ಗೌಡ, ಅನುಪಮಾ ಗೌಡ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ!

Share :

Published August 20, 2024 at 8:30pm

Update August 20, 2024 at 8:24pm

    ಕ್ಯೂಟ್​ ಆಗಿರೋ ವಿಡಿಯೋ ಕ್ಲಿಪ್​ಗೆ ಫ್ಯಾನ್ಸ್​ ಏನಂದ್ರು ಗೊತ್ತಾ?

    ಜೂನ್​ 1ರಂದು ಫ್ಯಾನ್ಸ್​ಗೆ ​ಗುಡ್​ನ್ಯೂಸ್ ಕೊಟ್ಟಿದ್ದ ಫೇಮಸ್ ಜೋಡಿ

    ಅದ್ಭುತ ನಟನೆಯ ಮೂಲಕವೇ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ

ಕನ್ನಡ ಕಿರುತೆರೆಯಲ್ಲಿ ಗೊಂಬೆ ಅಂತಲೇ ಖ್ಯಾತಿ ಪಡೆದಿರೋ ನೇಹಾ ಗೌಡ ಅವರ ಮನೆಯಲ್ಲಿ ಸಂತಸದ ಮನೆ ಮಾಡಿದೆ. ಬಿಗ್​ಬಾಸ್​ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಸದ್ಯ ನೇಹಾ ಗೌಡ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ಇನ್ನು ಕಾಯೋಕೆ ಅಗಲ್ಲ ಎಂದ ವೈಷ್ಣವಿ ಗೌಡ.. ಸಿಹಿ ಸುದ್ದಿ ಕೊಡುವ ತವಕದಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ!

ಇದೇ ಖುಷಿಯಲ್ಲಿದ್ದ ನೇಹಾ ಗೌಡ ಪ್ರೀತಿಯ ಗೆಳತಿ ಜೊತೆ ಮುದ್ದುಮುದ್ದಾಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹೌದು, ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹಾಗೂ ಚಂದನ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನೇಹಾ ಗೌಡ ಅವರು ತಮ್ಮ ಆಪ್ತ ಸ್ನೇಹಿತೆ ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಅವರ ಜೊತೆಗೆ ಮುದ್ದಾದ ವಿಡಿಯೋ ಶೂಟ್ ಮಾಡಿದ್ದಾರೆ.

ಇದೇ ವಿಡಿಯೋ ಕ್ಲಿಪ್ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದೃಷ್ಟಿ ತೆಗೆದಿರುವೆ ನಾನು ನಿಮ್ಮ ಈ ಮುದ್ದಾದ ವಿಡಿಯೋಗೆ, ಸದಾ ಕಾಲ ಹೀಗೆ ಇರಲಿ ನಿಮ್ಮ ಈ ಸ್ನೇಹ, ಸೋ ಕ್ಯೂಟ್​ ಅಂತ ಕಾಮೆಂಟ್ಸ್ ಹಾಕಿದ್ದಾರೆ.

View this post on Instagram

A post shared by Anupama Anandkumar (@anupamagowda)

ಇನ್ನು, ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಂದನ್​ ಗೌಡ ಅವರು ಕಲರ್ಸ್​ ಕನ್ನಡದಲ್ಲಿ ಮೂಡಿ ಬರುತ್ತಿರೋ ಅಂತರಪಟ ಸೀರಿಯಲ್​ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮಿಬ್ಬರ ಮೇಲೆ ಯಾರ ಕಣ್ಣು ಬೀಳದಿರಲಿ.. ನೇಹಾ ಗೌಡ, ಅನುಪಮಾ ಗೌಡ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ!

https://newsfirstlive.com/wp-content/uploads/2024/08/neha-gowda.jpg

Load More