newsfirstkannada.com

ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅನುಷಾ ರಮೇಶ್​​.. ಹುಡುಗ ಯಾರು?

Share :

Published July 9, 2024 at 6:08am

Update July 9, 2024 at 6:09am

  ಕಾರಣಾಂತರಗಳಿಂದ ಅವನು ಮತ್ತು ಶ್ರಾವಣಿ ಸೀರಿಯಲ್​ನಿಂದ ನಟಿ ಔಟ್

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವನು ಮತ್ತು ಶ್ರಾವಣಿ ಸೀರಿಯಲ್ ನಟಿ

  ಗುರು ಹಿರಿಯರ ಸಮ್ಮುಖದಲ್ಲಿ ಪ್ರೀತಿಸಿದವನ ಜೊತೆಗೆ ಮದುವೆಯಾದ ಅನುಷಾ

ಅವನು ಮತ್ತು ಶ್ರಾವಣಿ ಖ್ಯಾತಿಯ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.​ ನಟಿ ಅನುಷಾ ರಮೇಶ್​ ಪ್ರೀತಿಸುತ್ತಿದ್ದ ಹುಡುಗನ ಜೊತೆ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವೆ ಕನಸನ್ನ ನನಸು ಮಾಡಿಕೊಂಡಿದ್ದಾರೆ ಚಲುವೆ ಅನುಷಾ. ಸದ್ಯ ಪ್ರಸಾರವಾಗ್ತಿರೋ ಸ್ಕಂದ ನಾಯಕನಾಗಿರೋ ಹೊಸ ಅವತರಣಿಕೆ ಅವನು ಮತ್ತು ಶ್ರಾವಣಿಯ ಮೊದಲ ನಾಯಕಿ ಅನುಷಾ.

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ಚಿಕು ಅನ್ನೋ ಶ್ವಾನ ಜೊತೆ ಶುರುವಾದ ಧಾರಾವಾಹಿ ಕತೆ ಇಂಟ್ರಸ್ಟಿಂಗ್​ ಆಗಿ ಶುರುವಾಗಿತ್ತು. ಈಗಲೂ ಅದೇ ರೀತಿ ಸಾಗುತ್ತಿದೆ. ಆದರೆ ಮದುವೆ ಸಂಚಿಕೆಯವರೆಗೂ ನಾಯಕಿ ಶ್ರಾವಣಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಅನುಷಾ ಕಾರಣಂತರಗಳಿಂದ ಧಾರಾವಾಹಿಯಿಂದ ಹೊರ ಬಂದರು. ನಂತರ ಯಾವುದೇ ಪ್ರಾಜೆಕ್ಟ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಅವರ ನಿಜ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.

ಇನ್ನು ನಟಿ ಅನುಷಾ ಅವಿನಾಶ್​ ಎಂಬುವವರನ್ನ ಮದುವೆಯಾಗಿದ್ದಾರೆ. ಅವಿನಾಶ್​ ಅವರು ಕೂಡ ವೃತ್ತಿಯಲ್ಲಿ ರಂಗಭೂಮಿ ಕಲಾವಿದರಾಗಿದ್ದು, ಹಲವು ಶಾರ್ಟ್​ ಫಿಲಂ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರದ್ದೂ ಪ್ರೇಮ ವಿವಾಹ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಎಲ್ಲಾ ಪ್ರೇಮಿಗಳಂತೆ ಹಲವು ಕುಟುಂಬದ ವಿಚಾರಗಳು ಅಡ್ಡಿ ಆಗಿದ್ವಂತೆ. ಆದರೆ ಅದಲ್ಲವನ್ನ ದಾಟಿ ಕುಟುಂಬದವರನ್ನು ಒಪ್ಪಿಸಿ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದೆ ಜೋಡಿ. ನಟಿ ಅನುಷಾ ಹಾಗೂ ನಟ ಅವಿನಾಶ್​ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅನುಷಾ ರಮೇಶ್​​.. ಹುಡುಗ ಯಾರು?

https://newsfirstlive.com/wp-content/uploads/2024/07/anusha.jpg

Load More