newsfirstkannada.com

ವಿಶ್ವಕಪ್​ನಲ್ಲಿ ಸೋತು ತಲೆ ತಗ್ಗಿಸಿ ನಿಂತಿದ್ದ ಕಿಂಗ್ ಕೊಹ್ಲಿಯನ್ನು ತಬ್ಬಿ ಸಂತೈಸಿದ ಪತ್ನಿ ಅನುಷ್ಕಾ ಶರ್ಮಾ

Share :

20-11-2023

    ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

    ಸೋಲಿನ ಬೆನ್ನಲ್ಲೇ ಬಹುತೇಕ ಆಟಗಾರರು ಅಪ್​ಸೆಟ್ ಆಗಿದ್ದಾರೆ

    ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ 765 ರನ್ ಚಚ್ಚಿರುವ ಕೊಹ್ಲಿ

ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾಗೆ ಶರಣಾಗಿದೆ. ಈ ಮೂಲಕ ಆಸಿಸ್ ಪಡೆ 6ನೇ ಬಾರಿಗೆ ವಿಶ್ವಕಪ್ ಎತ್ತಿ ಕ್ರಿಕೆಟ್ ಜಗತ್ತಿನ ಮುಂದೆ ಗೆದ್ದು ಬೀಗಿದೆ. 2023ರ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡ ಫೈನಲ್​ನಲ್ಲಿ ಸೋತಿರೋದು ತುಂಬಾನೇ ಬೇಸರ ಉಂಟು ಮಾಡಿದೆ.

ಆಸ್ಟ್ರೇಲಿಯಾ ಕಪ್​ಗೆ ಮುತ್ತಿಡುತ್ತಿದ್ದಂತೆಯೇ ಭಾರತ ತಂಡದ ಆಟಗಾರರ ಕಣ್ಣಾಲೆಗಳು ಒದ್ದೆ ಆಗಿದ್ದವು. ರೋಹಿತ್ ಶರ್ಮಾ, ಸಿರಾಜ್ ಮೈದಾನದಲ್ಲಿ ಕಣ್ಣೀರಿಟ್ಟು ಹೊರ ನಡೆದರು. ಕಿಂಗ್ ಕೊಹ್ಲಿ ಕೂಡ ತುಂಬಾ ನೊಂದು ಕೊಂಡರು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದೆ. ವಿಶ್ವಕಪ್​ ಸೋತು ಬೇಸರದಲ್ಲಿದ್ದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಎದುರಾಗಿದ್ದಾರೆ. ಪತಿ ಕುಗ್ಗಿ ಹೋಗಿದ್ದನ್ನು ನೋಡಿದ ಅನುಷ್ಕಾ, ಕೊಹ್ಲಿಯನ್ನು ತಬ್ಬಿ ಸಂತೈಸುತ್ತಿರುವ ಫೋಟೋ ಅದಾಗಿದೆ.

ಅಂದ್ಹಾಗೆ ವಿರಾಟ್ ಕೊಹ್ಲಿ ವಿಶ್ವಕಪ್​​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 11 ಪಂದ್ಯಗಳನ್ನು ಆಡಿರುವ ಅವರು 765 ರನ್​ಗಳಿಸಿದ್ದಾರೆ. ಈ ಮೂಲಕ ವಿಶ್ವಕಪ್​​ನಲ್ಲಿ ಅತ್ಯಧಿಕ ರನ್ ಗಳಿಸಿದ ಏಕೈಕ ಆಟಗಾರ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ನಲ್ಲಿ ಸೋತು ತಲೆ ತಗ್ಗಿಸಿ ನಿಂತಿದ್ದ ಕಿಂಗ್ ಕೊಹ್ಲಿಯನ್ನು ತಬ್ಬಿ ಸಂತೈಸಿದ ಪತ್ನಿ ಅನುಷ್ಕಾ ಶರ್ಮಾ

https://newsfirstlive.com/wp-content/uploads/2023/11/ANUSKA-SHARMA.jpg

Load More