newsfirstkannada.com

ಪತಿಯ ವಿರಾಟ ರೂಪವನ್ನು ಕೊಂಡಾಡಿದ ಅನುಷ್ಕಾ ಶರ್ಮಾ.. ಕೊಹ್ಲಿ ಶತಕವನ್ನು ಕಂಡು ಏನಂದ್ರು ಗೊತ್ತಾ?

Share :

06-11-2023

  ವಿಶ್ವಕಪ್​ ಎಡಿಷನ್​ನಲ್ಲಿ 2ನೇ ಬಾರಿಗೆ ಶತಕ ಬಾರಿಸಿದ ಕೊಹ್ಲಿ

  ಪತಿಯ ಸಾಧನೆ ಕಂಡು ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್​ ಹಾಕಿಕೊಂಡ ಅನುಷ್ಕಾ

  ಹುಟ್ಟುಹಬ್ಬದ ದಿನದಂದೇ ಸಾಧನೆ ಬರೆದ ವಿರಾಟ್​ ಕೊಹ್ಲಿ, ಫ್ಯಾನ್ಸ್​ ಫುಲ್​ ಖುಷ್​

ಪತಿ ವಿರಾಟ್​​ ಕೊಹ್ಲಿ ವಿಶ್ವಕಪ್​ ಸಿರೀಸ್​ನಲ್ಲಿ ಎರಡನೇ ಬಾರಿಗೆ ಸೆಂಚುರಿ ಬಾರಿಸಿ ಸಾಧನೆ ಮೆರೆದಿರುವುದನ್ನು ಪತ್ನಿ ಅನುಷ್ಕಾ ಶರ್ಮಾ ಕೊಂಡಾಡಿದ್ದಾರೆ. ಬಾಲಿವುಡ್​​ ನಟಿ ವಿರಾಟ್​ ಕೊಹ್ಲಿ ಫೋಟೋವನ್ನು ಸ್ಟೇಟಸ್​ ಹಾಕಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ನಿನ್ನೆ 35ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂತಸದ ಕ್ಷಣದಲ್ಲಿ ಸೌತ್​ ಆಫ್ರಿಕಾದ ವಿರುದ್ಧ ಕಿಂಗ್​ ಕೊಹ್ಲಿ ಶತಕ ಸಿಡಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಅಂದಹಾಗೆಯೇ ಕೊಹ್ಲಿ ಒಡಿಐನಲ್ಲಿ 49ನೇ ಶತಕ ಮತ್ತು ವಿಶ್ವಕಪ್​ ಎಡಿಷನ್​ನಲ್ಲಿ 2ನೇ ಬಾರಿಗೆ ಶತಕ ಬಾರಿಸಿದ್ದಾರೆ. ಆ ಮೂಲಕ ಕ್ರಿಕೆಟ್​ ದೇವರು ಸಚಿನ್​ ದಾಖಲೆಯ ಗೆರೆ ದಾಟಿದ್ದಾರೆ.

ಬಾಲಿವುಡ್​ ಬ್ಯೂಟಿ ಅನುಷ್ಕಾ ಶರ್ಮಾ ತನ್ನ ಪತಿಯ ಸಾಧನೆ ಕಂಡು ಇನ್​ಸ್ಟಾಗ್ರಾಂನಲ್ಲಿ ಕೊಹ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ‘‘ ಸ್ವತಃ ಉಡುಗೊರೆ’’ ಎಂದು ಬರೆದುಕೊಂಡಿದ್ದಾರೆ.

ಇನ್ನು ಅನೇಕ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಫೋಟೋ ಜೊತೆಗೆ ಸ್ಟೇಟಸ್​ ಹಂಚಿಕೊಂಡಿದ್ದಾರೆ. ಶತಕ ಸಿಡಿಸಿದ ವಿರಾಟ್​ಗೆ ಶುಭಾಶಯ ತಿಳಿಸಿದ್ದಾರೆ. ನಟ ಸಿದ್ದಾರ್ಥ್​, ಸಮಂತಾ ರುತ್​ ಪ್ರಭು ಸೇರಿ ಅನೇಕ ತಾರೆಯರು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಕಂಗ್ರಾಜ್ಯುಲೇಷನ್​ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪತಿಯ ವಿರಾಟ ರೂಪವನ್ನು ಕೊಂಡಾಡಿದ ಅನುಷ್ಕಾ ಶರ್ಮಾ.. ಕೊಹ್ಲಿ ಶತಕವನ್ನು ಕಂಡು ಏನಂದ್ರು ಗೊತ್ತಾ?

https://newsfirstlive.com/wp-content/uploads/2023/11/Kohli-Anushka.jpg

Load More