newsfirstkannada.com

ಬೆಂಗಳೂರಿಗೆ ಬಂದಿಳಿದ ಅನುಷ್ಕಾ.. ಕೊಹ್ಲಿ 50ನೇ ಸೆಂಚೂರಿ ಕಣ್ಣು ತುಂಬಿಸಿಕೊಳ್ತಾರಾ ನಟಿ..?

Share :

07-11-2023

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ನೇ ಸೆಂಚುರಿ ಬಾರಿಸ್ತಾರಾ ವಿರಾಟ್ ಕೊಹ್ಲಿ?

    ಐಷಾರಾಮಿ ಹೋಟೆಲ್​ನಲ್ಲಿ ತಂಗಿರುವ ಟೀಮ್ ಇಂಡಿಯಾ ಪ್ಲೇಯರ್ಸ್​

    ಗಂಡನ ಬ್ಯಾಟಿಂಗ್ ಉರಿದುಂಬಿಸಲು ಸಿಲಿಕಾನ್​ ಸಿಟಿಗೆ ಬಂದ ಅನುಷ್ಕಾ

ವಿಶ್ವಕಪ್​ ಟೂರ್ನಿ ಪಂದ್ಯಗಳು ಸುಗಮವಾಗಿ ನಡೆಯುತ್ತಿದ್ದು ವಿರಾಟ್​ ಕೊಹ್ಲಿ ಬ್ಯಾಟಿಂಗ್ ಕೂಡ ಅಮೋಘ ಸಾಧನೆಯತ್ತ ಸಾಗುತ್ತಿದೆ. ಈಗಾಗಲೇ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೆದೆ ಬಡಿದಿರುವ ಟೀಮ್ ಇಂಡಿಯಾ ನೆದರ್​ಲ್ಯಾಂಡ್ಸ್​ ವಿರುದ್ಧ ಭಾನುವಾರ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿಯ ಕೊನೆ ಲೀಗ್ ಮ್ಯಾಚ್​ ಆಡಲಿದೆ. ಹೀಗಾಗಿ ಪ್ಲೇಯರ್ಸ್​ ಸ್ಪೆಷಲ್ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಐಷಾರಾಮಿ ಹೋಟೆಲ್​ನಲ್ಲಿ ತಂಗಿದ್ದಾರೆ. ಈ ಎಲ್ಲದರ ಜೊತೆಗೆ ಕಿಂಗ್​ ಕೊಹ್ಲಿ ಬ್ಯಾಟಿಂಗ್ ವೀಕ್ಷಣೆಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ಸಿಲಿಕಾನ್​ ಸಿಟಿಗೆ ಆಗಮಿಸಿದ್ದಾರೆ.

ವಿರಾಟ್ ಕೊಹ್ಲಿ ಸೌತ್​ ಆಫ್ರಿಕಾ ವಿರುದ್ಧ 49ನೇ ಸೆಂಚುರಿಯನ್ನು ಸಿಡಿಸಿದ್ದು ಸದ್ಯ 50ನೇ ಶತಕದ ಹೊಸ್ತಿಲಲ್ಲಿದ್ದಾರೆ. ಕೊಹ್ಲಿಯ ಅಮೋಘ ಸಾಧನೆಗೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗುವ ನಿರೀಕ್ಷೆ ಇದೆ. ಪತಿಯ 50ನೇ ಸೆಂಚುರಿಯನ್ನು ಕಣ್ಣು ತುಂಬಿಕೊಳ್ಳಲು ಪತ್ನಿ ಅನುಷ್ಕಾ ಶರ್ಮಾ ಬೆಂಗಳೂರಿಗೆ ಬಂದಿದ್ದಾರೆ. ಮೊನ್ನೆ ವಿರಾಟ್ ಬರ್ತ್​ಡೇ ವೇಳೆಯು ಅನುಷ್ಕಾ ವಿಶೇಷವಾಗಿ ವಿಶ್ ಮಾಡಿದ್ದರು.

ವಿರಾಟ್ ಕೊಹ್ಲಿ ಬ್ಯಾಟಿಂಗ್

ಇನ್ನು ಕೊಹ್ಲಿ ಆರ್​ಸಿಬಿಯ ಸ್ಟಾರ್​ ಪ್ಲೇಯರ್​ ಆಗಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ ತವರು ಮೈದಾನ ಇದ್ದಂತೆ. ಇಲ್ಲಿ ಯಾವುದೇ ಭಯವಿಲ್ಲದೆ ನಿರಾಳವಾಗಿ ಸಿಕ್ಸ್​​, ಫೋರ್​ಗಳನ್ನು ಬಾರಿಸಲಿದ್ದಾರೆ. ಇದರಿಂದ ವಿರಾಟ್​ 50ನೇ ಶತಕ ಬಾರಿಸುವುದು ಪಕ್ಕಾ ಎಂದು ಕೆಲ ಕ್ರಿಕೆಟ್​ ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ.

ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ನವೆಂಬರ್​ 12, ಭಾನುವಾರದಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್​​ಲ್ಯಾಂಡ್ಸ್​ ವಿರುದ್ಧ ಪಂದ್ಯವಾಡಲಿದೆ. ಈಗಾಗಲೇ 8 ಮ್ಯಾಚ್​ಗಳಲ್ಲಿ 8 ಅನ್ನು ಗೆದ್ದಿರುವ ಭಾರತ ಪಾಯಿಂಟ್ಸ್​ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೇ ವಿಶ್ವಕಪ್​ ಗೆಲ್ಲುವ ಫೇವರಿಟ್​ ತಂಡ ಎನಿಸಿಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೆಂಗಳೂರಿಗೆ ಬಂದಿಳಿದ ಅನುಷ್ಕಾ.. ಕೊಹ್ಲಿ 50ನೇ ಸೆಂಚೂರಿ ಕಣ್ಣು ತುಂಬಿಸಿಕೊಳ್ತಾರಾ ನಟಿ..?

https://newsfirstlive.com/wp-content/uploads/2023/11/VIRAT_ANUSHKA.jpg

Load More