ವಿರುಷ್ಕಾ ಮನೆಯಲ್ಲಿ ಕಳೆಗಟ್ಟಿದ ಗೌರಿ-ಗಣೇಶ ಹಬ್ಬದ ಸಡಗರ
ವೈಟ್ ಆ್ಯಂಡ್ ಗೋಲ್ಡ್ ಕಲರ್ ಡ್ರೆಸ್ನಲ್ಲಿ ಕಾಣಿಸಿದ ವಿರುಷ್ಕಾ
ಗಣೇಶನಿಗೆ ಸ್ವರ್ಗವೇ ಧರೆಗೆ ಬಂದಂತೆ ಹೂವುಗಳಿಂದ ಸಿಂಗಾರ
ಕಳೆದ ಎರಡು ದಿನಗಳಿಂದ ದೇಶದ್ಯಾಂತ ಗೌರಿ-ಗಣೇಶ ಹಬ್ಬದ ಸಡಗರ ಸಂಭ್ರಮ ಕಳೆಗಟ್ಟಿದ್ದು, ವಿಘ್ನ ವಿನಾಶಕ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಆಫೀಸ್, ಮನೆ, ರಸ್ತೆಗಳಲ್ಲಿ, ದೇವಾಲಯಗಳಲ್ಲಿ ಸೇರಿದಂತೆ ಎಲ್ಲ ಕಡೆ ಗಣೇಶನ್ನು ಕೂರಿಸಿ ಪೂಜೆ ನೆರವೇರಿಸಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಕೂಡ ತಮ್ಮ ನಿವಾಸದಲ್ಲಿ ಗೌರಿ-ಗಣಪತಿಯನ್ನ ಪ್ರತಿಷ್ಠಾಪನೆ ಮಾಡಿ ವೈಟ್ ಆ್ಯಂಡ್ ಗೋಲ್ಡ್ ಕಲರ್ ಡ್ರೆಸ್ನಲ್ಲಿ ಸಖತ್ ಲುಕ್ನಲ್ಲಿ ಕಾಣಿಸಿದ್ದಾರೆ.
ಏಷ್ಯಾಕಪ್ ಗೆದ್ದ ಖುಷಿಯಲ್ಲಿರೋ ವಿರಾಟ್ ಕೊಹ್ಲಿ ಕೊಂಚ ಕ್ರಿಕೆಟ್ನಿಂದ ಬಿಡುವು ಮಾಡಿಕೊಂಡು ಮನೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಗಣೇಶ ಚತುರ್ಥಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಸುಂದರ ಗೌರಿ-ಗಣಪತಿಯನ್ನು ಮನೆಗೆ ತಂದು ಪ್ರತಿಷ್ಠಾಪನೆ ಮಾಡಿ ಸ್ವರ್ಗವೇ ಧರೆಗೆ ಬಂದಂತೆ ಹೂವುಗಳಿಂದ ಸಿಂಗಾರ ಮಾಡಿದ್ದಾರೆ. ಗಣಪತಿಗೆ ಇಷ್ಟವಾದಂತಹ ಸಿಹಿ ತಿನಿಸು ಹಾಗೂ ಹಣ್ಣುಗಳನ್ನಿಟ್ಟಿದ್ದಾರೆ. ಬಳಿಕ ಪತ್ನಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಜೋಡಿಯಾಗಿಯೇ ಗಣಪತಿಗೆ ಆರತಿ ಬೆಳಗಿದ್ದಾರೆ.
ಈ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿರುವ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಅವರು ಹ್ಯಾಪಿ ಗಣೇಶ್ ಚತುರ್ಥಿ ಎಂದು ಫ್ಯಾನ್ಸ್ಗೆ ಶುಭಾಶಯ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ಮೈದಾನದಲ್ಲಿ ಸದಾ ಬ್ಲೂ ಜರ್ಸಿ, ಪ್ಯಾಂಟ್ನಲ್ಲಿ ಕಾಣಿಸುತ್ತಿದ್ದವರು ಗಣೇಶ್ ಪೂಜೆ ಹಿನ್ನೆಲೆಯಲ್ಲಿ ಸಖತ್ ಆಗಿ ಮನೆ ಯಜಮಾನನಂತೆ ಕಾಣಿಸಿಕೊಂಡಿದ್ದಾರೆ. ಗೋಲ್ಡ್ ಕಲರ್ ಚುಕ್ಕೆಗಳಿರುವ ಬಿಳಿ ಬಣ್ಣದ ಕುರ್ತಾ, ಪ್ಯಾಂಟ್ ಹಾಕಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಯಾವಾಗಲೂ ಟೀ ಶರ್ಟ್, ಪ್ಯಾಂಟ್ ಧರಿಸುತ್ತಿದ್ದವರು ಹಬ್ಬದ ಹಿನ್ನೆಲೆಯಲ್ಲಿ ಗೋಲ್ಡ್ ಕಲರ್ ಸೀರೆಯಲ್ಲಿ ಸಂಪ್ರದಾಯ ಮಹಿಳೆಯಂತೆ ಕಾಣಿಸಿಕೊಂಡಿದ್ದಾರೆ.
View this post on Instagram
ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿರುವ ಈ ಸ್ಟಾರ್ ದಂಪತಿ ವಿವಿಧ ಭಂಗಿಯಲ್ಲಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಪರಿಸರಕ್ಕೆ ಹಾನಿ ಮಾಡಬಾರದು ಎಂದು ಜಾಗ್ರತೆ ವಹಿಸಿರುವ ವಿರುಷ್ಕಾ ದಂಪತಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದು ವಿಶೇಷ ಎನಿಸಿದೆ. ಸದ್ಯ ಇವುಗಳನ್ನು ಅನುಷ್ಕಾ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ