newsfirstkannada.com

62 ಬಾಲ್​​ನಲ್ಲಿ ಸ್ಫೋಟಕ 100 ರನ್ ಬಾರಿಸ್ತಿದ್ದಂತೆ ರೋಮ್ಯಾಂಟಿಕ್ ಮೂಡಿಗೆ ಜಾರಿದ್ದ ಕೊಹ್ಲಿ..!

Share :

19-05-2023

    4 ಸಿಕ್ಸರ್, 12 ಬೌಂಡರಿ ಚಚ್ಚಿದ ಕಿಂಗ್ ಕೊಹ್ಲಿ

    ಕೊಹ್ಲಿ-ಫಾಫ್ ಮನರಂಜನೆಯ ರಸದೌತಣ

    ಬೌಂಡರಿ ಹಾಗೂ ಸಿಕ್ಸರ್​ಗಳು ರೋಮಾಂಚನ

ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ವಿರಾಟ ರೂಪವನ್ನು ನೋಡಲು ಒಂದು ಅದ್ಭುತ ಅವಕಾಶ ಸಿಕ್ಕಿತು. 187 ರನ್​ಗಳ ಬಿಗ್ ಟಾರ್ಗೆಟ್ ಮಾಡಿದ ಕೊಹ್ಲಿ-ಫಾಫ್ ಮನರಂಜನೆಯ ರಸದೌತಣವನ್ನು ನೀಡಿದರು. ಕೊಹ್ಲಿಯ ಒಂದೊಂದು ಬೌಂಡರಿ ಹಾಗೂ ಸಿಕ್ಸರ್​ಗಳು, ನೋಡುಗರಿಗೆ ರೋಮಾಂಚನವನ್ನು ತಂದುಕೊಟ್ಟಿತ್ತು.

4 ಸಿಕ್ಸರ್, 12 ಬೌಂಡರಿ ಚಚ್ಚಿದ ವಿರಾಟ್..!
158.73 ಸ್ಟ್ರೈಕ್​​ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ವಿರಾಟ್, ಕೇವಲ 62 ಬಾಲ್​ನಲ್ಲಿ ತಮ್ಮ ಐಪಿಎಲ್​ನ 6ನೇ ಶತಕವನ್ನು ಪೂರ್ಣಗೊಳಿಸಿದರು. ಈ ಅಮೋಘ ಕ್ಷಣಕ್ಕೆ ಹೈದ್ರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂ ಸಾಕ್ಷಿಯಾಗಿತ್ತು.

ಇತ್ತ ವಿರಾಟ್ ಶತಕ ಬಾರಿಸಿ ಸಂಭ್ರಮಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡುತ್ತಿದ್ದಂತೆಯೇ ಪತ್ನಿ, ಅನುಷ್ಕಾ ಶರ್ಮಾ ವಿಡಿಯೋ ಕಾಲ್ ಮಾಡಿ ಖುಷಿ ಪಟ್ಟಿದ್ದಾರೆ. ಮಾತ್ರವಲ್ಲ, ವಿರಾಟ್​ಗೆ ಅನುಷ್ಕಾ ಶುಭಕೋರಿದ್ದಾರೆ. ಮಾತ್ರವಲ್ಲ, ಇನ್​ಸ್ಟಾ ಸ್ಟೋರಿಸ್​ನಲ್ಲಿ ಹಾಕಿಕೊಂಡಿದ್ದಾರೆ.

ಸದ್ಯ ವಿರಾಟ್​ ಶತಕ ಬಾರಿಸುತ್ತಿದ್ದಂತೆಯೇ ಅನುಷ್ಕಾ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿ ಆರ್​​ಸಿಬಿ ಪಂದ್ಯವನ್ನು ಸ್ಟೇಡಿಯಂ ಪೆವಿಲಿಯನ್​ನಲ್ಲಿ ವೀಕ್ಷಣೆ ಮಾಡ್ತಿದ್ದ ಅನುಷ್ಕಾ, ನಿನ್ನೆ ಬಂದಿರಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ  8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

62 ಬಾಲ್​​ನಲ್ಲಿ ಸ್ಫೋಟಕ 100 ರನ್ ಬಾರಿಸ್ತಿದ್ದಂತೆ ರೋಮ್ಯಾಂಟಿಕ್ ಮೂಡಿಗೆ ಜಾರಿದ್ದ ಕೊಹ್ಲಿ..!

https://newsfirstlive.com/wp-content/uploads/2023/05/Virat-kohli-2.jpg

Load More