newsfirstkannada.com

ನಂಬಿದ್ರೆ ನಂಬಿ.. 40 ವರ್ಷದ ವ್ಯಕ್ತಿಯ ಜೀವ ಉಳಿಸಿದ್ದು ಮತ್ತ್ಯಾರು ಅಲ್ಲ, ಆ್ಯಪಲ್​ ವಾಚ್!​ 

Share :

13-11-2023

    ಪ್ರಜ್ಞಾಹೀನರಾಗಿ ನೆಲಕ್ಕುರುಳಿ ಬಿದ್ದ ವ್ಯಕ್ತಿ

    ಜಿಪಿಎಸ್​​ ಹಿಂಬಾಲಿಸಿ ವ್ಯಕ್ತಿಗೆ ಚಿಕಿತ್ಸೆ

    ವ್ಯಕ್ತಿಯ ಪ್ರಾಣ ಉಳಿಸಿದ ಆ್ಯಪಲ್​ ವಾಚ್​

ಆ್ಯಪಲ್​ ಸ್ಮಾರ್ಟ್​ ವಾಚ್​ನಿಂದ ವ್ಯಕ್ತಿಯೊಬ್ಬರ ಪ್ರಾಣ ಉಳಿದಿರೋ ಅಚ್ಚರಿಯ ಘಟನೆ ನಡೆದಿದೆ. ಅಮೆರಿಕಾ ಮೂಲದ 40 ವರ್ಷದ ಜೋಶ್ ಫರ್ಮನ್ ಆ್ಯಪಲ್​ ವ್ಯಾಚ್​ನಿಂದ ತಮ್ಮ ಜೀವ ಉಳಿಸಿದ್ದಾರೆ.

ಜೋಶ್ ಫರ್ಮನ್ ಮನೆಯಲ್ಲಿ ಒಬ್ಬರೇ ಇದ್ದಾಗ ರಕ್ತದಲ್ಲಿ ಶುಗರ್​ ಲೆವೆಲ್​​ ಕಡಿಮೆಯಾಗಿ ಪ್ರಜ್ಞಾಹೀನರಾಗಿ ನೆಲಕ್ಕುರುಳಿ ಬಿಳ್ತಾರೆ. ಹೇಗಾದ್ರೂ ಮಾಡಿ ಈ ವಿಷಯವನ್ನು ತಮ್ಮ ಮನೆಯವರಿಗೆ ತಿಳಿಸುವ ಪ್ರಯತ್ನ ಮಾಡ್ತಾರೆ, ತಕ್ಷಣ ಜೋಶ್​​ಗೆ ತಮ್ಮ ಸ್ಮಾರ್ಟ್ ವಾಚ್​​ ನೆನಪಾಗಿದೆ. ಮಾತನಾಡಲು ಸಾಧ್ಯವಾಗದೇ ಇದ್ದರೂ 911 ನಂಬರ್​ಗೆ ಎಮೆರ್​ಜೆನ್ಸಿ ಕರೆ ಮಾಡಿದ್ದಾರೆ.

ಪರಿಸ್ಥಿತಿಯನ್ನ ಅರಿತ 911 ಸಿಬ್ಬಂದಿ ವಾಚ್​ನಲ್ಲಿರುವ ಜಿಪಿಎಸ್​​ ಹಿಂಬಾಲಿಸಿ ವ್ಯಕ್ತಿಗೆ ಚಿಕಿತ್ಸೆ ನೀಡಿ ಪ್ರಾಣಪಾಯದಿಂದ ಕಾಪಾಡಿದ್ದಾರೆ. ನಂತರ ಚೇತರಿಸಿಕೊಂಡ ಜೋಶ್​​ ಸ್ಮಾರ್ಟ್​ವಾಚ್​​ ಇಲ್ಲದಿದ್ದರೇ ನಾನಿವತ್ತು ಜೀವಂತವಾಗಿ ಇರುತ್ತಿರಲಿಲ್ಲ ಎಂದು ಹೇಳ್ಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಬಿದ್ರೆ ನಂಬಿ.. 40 ವರ್ಷದ ವ್ಯಕ್ತಿಯ ಜೀವ ಉಳಿಸಿದ್ದು ಮತ್ತ್ಯಾರು ಅಲ್ಲ, ಆ್ಯಪಲ್​ ವಾಚ್!​ 

https://newsfirstlive.com/wp-content/uploads/2023/11/Apple-watch.jpg

Load More