newsfirstkannada.com

×

ದರ್ಶನ್​​ಗೆ ಕಾಡ್ತಿರೋದು ಅದೊಂದೇ ವಿಚಾರ; ವಿಜಯಲಕ್ಷ್ಮಿ ಭೇಟಿ ಬಳಿಕ ಕೊಂಚ ಸಮಾಧಾನಗೊಂಡ ದಾಸ

Share :

Published September 18, 2024 at 12:37pm

    ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಆರೋಪಿ ದರ್ಶನ್​ಗೆ ಕಾಡುತ್ತಿದೆ ಆ ಚಿಂತೆ

    ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ

    ದರ್ಶನ್ ವಿರುದ್ಧ ಸಿಕ್ಕಿರುವ ಪ್ರಭಲ ಸಾಕ್ಷಿಗಳ ಬಗ್ಗೆ ಗಮನಕ್ಕೆ ತಂದಿರುವ ಪತ್ನಿ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಸೆಂಟ್ರಲ್ ಜೈಲಿಗೆ ಶಿಫ್ಟ್​ ಆಗಿರೋ ದರ್ಶನ್​​ಗೆ ಬರೀ ಜಾಮೀನಿನದ್ದೇ ಚಿಂತೆಯಾಗಿದೆ. ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್ ಆದಾಗಿನಿಂದ ಇಲ್ಲಿಯವರೆಗೂ ​ಒಟ್ಟು 4 ಬಾರಿ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೀರಿಯಲ್​ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್​ನ್ಯೂಸ್ ಕೊಡ್ತಾರಾ?

ಪತ್ನಿ ಪ್ರತಿ ಸಲ ಬಂದಾಗಲೂ ಇದೇ ವಿಚಾರವಾಗಿ ದರ್ಶನ್ ಚರ್ಚೆ ಮಾಡಿದ್ದಾರಂತೆ. ಜಾಮೀನಿಗೆ ಅರ್ಜಿ ಹಾಕೋದು ಯಾವಾಗ ಎಂದು ಕೇಳುತ್ತಿದ್ದಾರಂತೆ. ಸಾಧಕ, ಬಾಧಕಗಳನ್ನ ನೋಡಿಕೊಂಡು ಜಾಮೀನಿಗೆ ಅರ್ಜಿ ಹಾಕೋದಾಗಿ ಪತ್ನಿ ವಿಜಯಲಕ್ಷ್ಮಿ ತಿಳಿಸಿದ್ದಾರೆ ಎನ್ನಲಾಗಿದೆ. ದರ್ಶನ್ ವಿರುದ್ಧ ಸಿಕ್ಕಿರುವ ಪ್ರಭಲ ಸಾಕ್ಷಿಗಳ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಗಮನಕ್ಕೆ ತಂದಿದ್ದಾರೆ. ಏನೇ ಎವಿಡೆನ್ಸ್ ಸಿಕ್ಕಿದ್ರೂ ನಮ್ಮ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡ್ತಿದ್ದಾರೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕೋಣ. ಅದರ ಬಗ್ಗೆಯೇ ನಾನು ವಕೀಲರ ಜೊತೆ ಸಂಪರ್ಕದಲ್ಲಿದ್ದೇನೆ. ಯಾವುದಕ್ಕೂ ಆತಂಕ ಪಡಬೇಡಿ, ಆದಷ್ಟು ಬೇಗ ಜಾಮೀನಿಗೆ ಅರ್ಜಿ ಹಾಕ್ತೀವಿ ಎಂದು ವಿಜಯಲಕ್ಷ್ಮಿ ಧೈರ್ಯ ನೀಡಿದ್ದಾರೆ. ಬಹುತೇಕ ಇನ್ನೆರಡು ದಿನಗಳಲ್ಲಿ ಜಾಮೀನಿಗೆ ಅರ್ಜಿ ಹಾಕೋ ಸಾಧ್ಯತೆ ಇದೆ. ನಿನ್ನೆ ಕೂಡ ಅರ್ಧ ಗಂಟೆ ದರ್ಶನ್ ಜೊತೆ ವಿಜಯಲಕ್ಷ್ಮಿ ಚರ್ಚೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ಗೆ ಕಾಡ್ತಿರೋದು ಅದೊಂದೇ ವಿಚಾರ; ವಿಜಯಲಕ್ಷ್ಮಿ ಭೇಟಿ ಬಳಿಕ ಕೊಂಚ ಸಮಾಧಾನಗೊಂಡ ದಾಸ

https://newsfirstlive.com/wp-content/uploads/2024/09/dharshan.jpg

Load More