ಇನ್ನೂ ಬದುಕಿ ಬಾಳ ಬದುಕಬೇಕಿದ್ದ
ಅಪಘಾತದಲ್ಲಿ ಪ್ರಾಣಬಿಟ್ಟ ಕಿರಣ್!
ಅಂಗಾಗ ದಾನ ಮಾಡಿ ಹೀರೋ ಆದ
ಆ ಜೀವ ಬದುಕಿ ಬಾಳಬೇಕಿತ್ತು.. ಎಲ್ಲರಂತೆ ನಗ್ತ ನಗ್ತಾ ಓಡಾಡ್ತಾ.. ಇನ್ನೇನು ಜೀವನ ಮೊದಲ ಅಧ್ಯಾಯವನ್ನ ಶುರು ಮಾಡುವಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು.. ಶರುವಾಗಬೇಕಾದ ಅಧ್ಯಾಯ ಅರ್ಧದಲ್ಲೇ ನಿಂತು ಹೋಗಿತ್ತು… ಮನೆಯ ಆಧಾರ ಸ್ತಂಭ ಕುಸಿದು ಬಿತ್ತು.. ಆದ್ರೆ ಆ ಕೊನೆ ಕ್ಷಣದಲ್ಲೂ ಆ ಜೀವ ಹೊಸದೊಂದು ಅಧ್ಯಾಯವನ್ನ ಶುರು ಮಾಡಿ ಎಲ್ಲರಿಗೂ ಮಾದರಿಯಾಯ್ತು.. He is the real hero ಅನ್ನೋ ಟೈಟಲ್ ಕೂಡ ಸಿಕ್ತು..
ಹೀಗೆ ಕುಟುಂಬದ ಜೊತೆ ನಿಂತು ‘ನಿಮ್ಮ ಜೊತೆ ನಾನಿದ್ದೇನೆ ಅಪ್ಪ, ಅಮ್ಮ’ ಅಂತ ಫೋಟೋ ಕ್ಲಿಕಿಸಿಕೊಂಡಿರೋ ಈತನೇ ನಮ್ಮ ಈ ಸ್ಟೋರಿಯ ರಿಯಲ್ ಹೀರೋ.. ಹೆಸರು ಕಿರಣ್, 21 ವರ್ಷ. ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರದ ಅರಳಹಳ್ಳಿಯ ಕಿರಣ್, ಬೆಂಗಳೂರಿನ ಬಾಗಲಗುಂಟೆಯಲ್ಲಿ ಸ್ವಂತ ಉದ್ಯಮ ನಡೆಸ್ತಿದ್ದ. ದಿವಂಗತ, ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ.. ಆದ್ರೆ ಕಳೆದ ಭಾನುವಾರ ವಿಧಿಯಾಟಕ್ಕೆ ಈ ಜೀವ ಬಲಿಯಾಗಿತ್ತು..
ಆಗಸ್ಟ್ 6ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ರಿಯಲ್ ಸ್ಟಾರ್ ಕಿರಣ್ ಜೀವನ್ಮರಣ ಹೋರಾಟ ನಡೆಸ್ತಾ, ಪ್ರಕ್ರಿಯಾ ಆಸ್ಪತ್ರೆಗೆ ದಾಖಲಾಗಿದ್ದ.. ವೈದ್ಯರು ಪರೀಕ್ಷಿಸಿದಾಗ ಕಿರಣ್ ಬ್ರೈನ್ ಡೆಡ್ ಆಗಿತ್ತು… ನಾವ್ ಮೊದಲೇ ಹೇಳಿದಂತೆ ಅಪ್ಪು ಅಪ್ಪಟ ಅಭಿಮಾನಿಯಾಗಿದ್ದ ಕಿರಣ್ ಪವರ್ ಸ್ಟಾರ್ ಹಾದಿಯಲ್ಲೇ ನಡೆದಿದ್ದ.. ಅವರಂತೆ ದೇಹದಾನ ಮಾಡುವುದಾಗಿ ನೋಂದಣಿ ಮಾಡಿಸಿಕೊಂಡಿದ್ದ… ವೈದ್ಯರು ಪೋಷಕರ ಸಮ್ಮತಿಯಂತೆ ಅಂಗಾಂಗದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ..
ಎರಡು ಕಿಡ್ನಿ, ಲಿವರ್, ಹಾರ್ಟ್, ಕಣ್ಣು ಸೇರಿ ವಿವಿಧ ಅಂಗಗಳ ದಾನ ಮಾಡಿ 6 ಜೀವವನ್ನ ಉಳಿಸಿ, ಉಸಿರು ಚೆಲ್ಲಿದ್ದಾನೆ.. ಅದೇನೇ ಇರಲಿ ಸಾವಿನಲ್ಲೂ 6 ಜೀವಕ್ಕೆ ಜೀವದಾನ ಮಾಡಿ ಹುಟ್ಟಿನ ಸಾರ್ಥಕತೆ ಮರೆದಿರೋ ಕಿರಣ್ ಹಾಗೂ ಆತನ ಪೋಷಕರಿಗೆ ಹ್ಯಾಟ್ಸಾಪ್ ಹೇಳಲೇಬೇಕು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ