/newsfirstlive-kannada/media/post_attachments/wp-content/uploads/2024/08/Appu-School.jpg)
ಅಪ್ಪು, ಪುನೀತ್ ಅಂದ ತಕ್ಷಣವೇ ನೆನಪಾಗೋದು ಕಾಫಿ ನಾಡಿನ ಈ ಶಾಲೆ. ಶರ್ಲಿ ಮೇಡಂಗೆ ಹೂವು ತರ್ತಿನಿ ಅಂತಾ ಸ್ಕೂಲ್ ನಲ್ಲಿ ಹೇಳ್ತಿದ್ದ ಸ್ಕೂಲ್ ಅದು. ಆ ಶಾಲೆಗೆ ಈಗ ವರುಣಾಘಾತವಾಗಿದೆ. ಇರೋ ಎರಡು ಕೊಠಡಿಗಳು ಸೋರುತ್ತಿದ್ದು ಟಾರ್ಪಲ್ ಹಾಕಿ ಪಾಠ ಕೇಳ್ತಿದ್ದಾರೆ.
ಡಾ.ಪುನೀತ್​ ರಾಜ್​ ಅಭಿನಯದ ಬೆಟ್ಟದ ಹೂವು ಚಿತ್ರ ಯಾರಿಗೆ ತಾನೇ ನೆನಪು ಇಲ್ಲ ಹೇಳಿ. 1985ರಲ್ಲಿ ತೆರೆಕಂಡು, ರಾಷ್ಟ್ರ ಪ್ರಶಸ್ತಿ ಪಡೆದ ಬೆಟ್ಟದ ಹೂವು ಚಿತ್ರದಲ್ಲಿ ಅಪ್ಪು ಓದಿದ ಪಾಠ ಶಾಲೆ ಇವತ್ತಿಗೂ ಇದೆ. ಆದ್ರೆ ಆ ಶಾಲೆಯ ಪರಿಸ್ಥಿತಿಯನ್ನು ನೋಡಿದ್ರೆ ನಿಜಕ್ಕೂ ಬೇಸರವಾಗುತ್ತೆ.
/newsfirstlive-kannada/media/post_attachments/wp-content/uploads/2024/08/Appu-School-1.jpg)
ಕಟ್ಟಡಕ್ಕೆ ಟಾರ್ಪಲ್ ಹೊದಿಕೆ.. ಶಾಲೆ ಉಳಿಸುವಂತೆ ಗ್ರಾಮಸ್ಥರ ಮನವಿ
ಹೀಗೆ ಟಾರ್ಪಲ್​ನಿಂದ ಮುಚ್ಚಿರುವ ಇದೇ ಶಾಲೆಯಲ್ಲಿ ಬೆಟ್ಟದ ಹೂವು ಚಿತ್ರದಲ್ಲಿ ಅಪ್ಪು ವಿದ್ಯಾಭ್ಯಾಸದ ಚಿತ್ರೀಕರಣ ನಡೆದಿದ್ದು, ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನ ಅತ್ತಿಗುಂಡಿಯಲ್ಲಿರೋ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸದ್ಯ ವರುಣಾಘಾತಕ್ಕೆ ತತ್ತರಿಸಿ ಹೋಗಿದೆ. ಸದ್ಯ ಎರಡು ಕೊಠಡಿ ಇರುವ ಈ ಶಾಲೆ ಮಳೆಯಿಂದ ಸೋರುತ್ತಿದ್ದು ಟಾರ್ಪಲ್​ನಿಂದ ಮುಚ್ಚಿನಿಂದ ಮುಚ್ಚಲಾಗಿದೆ.
/newsfirstlive-kannada/media/post_attachments/wp-content/uploads/2024/08/Appu-School-2.jpg)
ರಾಜ್ಯದ ಎತ್ತರ ಸ್ಥಳದಲ್ಲಿರೋ ಅತ್ತಿಗುಂಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆಯಾಗುತ್ತೆ. ಇದಲ್ಲದೆ ಅತೀ ಮಂಜಿನಿಂದ ಕೂಡಿರುತ್ತದೆ. ಈ ಹಿಂದೆ ಮಕ್ಕಳ ಹಾಜರಾತಿ ಇಲ್ಲದ ಕಾರಣ ಶಾಲೆಯನ್ನು ಬಂದ್​ ಮಾಡಲಾಗಿತ್ತು. ಆದ್ರೆ ಅಪ್ಪು ನೆನಪು ಎಂದೆಂದಿಗೂ ಶಾಶ್ವತವಿರಬೇಕು ಎಂದು ಗ್ರಾಮಸ್ಥರೇ ಹೇಗೋ ಇರೋ ಮಕ್ಕಳನ್ನ ಸೇರಿಸಿ ಮತ್ತೆ ಶಾಲೆ ತೆರೆಯುವಂತೆ ನೋಡಿಕೊಂಡಿದ್ರು.
/newsfirstlive-kannada/media/post_attachments/wp-content/uploads/2024/08/Appu-School-3.jpg)
ಎರಡು ಕೊಠಡಿ ಇರುವ ಈ ಶಾಲೆಯಲ್ಲಿ ಸದ್ಯ 9 ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಆದ್ರೆ ಶಾಲಾ ಕಟ್ಟಡ ಮಳೆಯಿಂದಾಗಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ಅಪ್ಪು ನೆನಪಿಗಾಗಿ ಇರುವ ಈ ಶಾಲೆಯನ್ನು ದುರಸ್ಥಿಗೊಳಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us