newsfirstkannada.com

AR​ ರೆಹಮಾನ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್​​.. ಕಣ್ಣೀರು ಹಾಕಿದ ಮಹಿಳೆಯರು, ಮಕ್ಕಳು, ಪೋಷಕರು!

Share :

13-09-2023

  ಸಿಂಗರ್​ ರೆಹಮಾನ್​ ಅವರ ವಿರುದ್ಧವೇ ರೊಚ್ಚಿಗೆದ್ದಿದ್ದು ಯಾಕೆ?

  ರೆಹಮಾನ್​ ಕಾರ್ಯಕ್ರಮ ಎಂದರೆ ಸಾವಿರಾರು ಜನ ಬರುತ್ತಾರೆ

  ಕಾರ್ಯಕ್ರಮದ ಒಳಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿ..!

ಸಂಗೀತ ನಿರ್ದೇಶಕ ಎ.ಆರ್​ ರೆಹಮಾನ್ ವಿರುದ್ಧ ಸಿಡಿದೆದ್ದ ಅಭಿಮಾನಿ ಬಳಗ. ಮಹಿಳೆಯರಂತೂ ರೆಹಮಾನ್​ಗೆ ಇಡೀ ದಿನ ಶಾಪ ಹಾಕ್ತಿದ್ದಾರೆ. ಆಕ್ರೋಶ ಹೊರ ಹಾಕ್ತಿದ್ದಾರೆ. ಇನ್ಮುಂದೆ ಅವ್ರ ಹಾಡುಗಳನ್ನ ನಾವು ಕೇಳಲ್ಲ ಅಂತ ಉಗ್ರಪ್ರತಾಪ ತೋರಿಸ್ತಿದ್ದಾರೆ. ಇದಕ್ಕೆಲ್ಲ ಕಾರಣ ಆ ಒಂದು ಕಾರ್ಯಕ್ರಮ. ಆ ಕಾರ್ಯಕ್ರಮದಿಂದ ಉಂಟಾದ ಅಲ್ಲೋಲ ಕಲ್ಲೋಲವಾದರು ಏನು?.

ಎ.ಆರ್ ರೆಹಮಾನ್ ಸಂಗೀತ ಕ್ಷೇತ್ರದಲ್ಲಿ ಇದೊಂದು ಬ್ರಾಂಡಿಂಗ್ ಹಾಗೂ ಟ್ರೆಂಡಿಂಗ್ ನೇಮ್.. ಇವತ್ತಿಗೂ ರೆಹಮಾನ್​ ಹಾಡುಗಳು ಮ್ಯೂಸಿಕ್ ಲೋಕದ ಮೈಲ್ ಸ್ಟೋನ್ಸ್. ಎ.ಆರ್.ಆರ್ ಟೀಮ್ ಸಂಗೀತಗೋಷ್ಠಿಗೆ ಬರ್ತಿದೆ ಅಂತ ಗೊತ್ತಾದ್ರೆ ಸಾಕು ಮೂಲೆ ಮೂಲೆಗಳಿಂದ ಸಾವಿರಾರು ಸಂಗೀತ ಪ್ರೇಮಿಗಳು ಅಲ್ಲಿ ಜಮಾಯಿಸಿಬಿಡ್ತಾರೆ. ಟಿಕೆಟ್ ಬೆಲೆ ಎಷ್ಟೇ ಆಗಿರ್ಲಿ ಯೋಚನೆ ಮಾಡದೇ ತಗೊಂಡು ಫಸ್ಟ್​ ಸಾಲಲ್ಲೇ ಸೀಟ್​ನಲ್ಲೇ ಕೂತ್ಕೋಬೇಕು ಅಂತ ರೆಡಿಯಾಗಿ ಬರ್ತಾರೆ. ಆದ್ರೀಗ ಇಂಥದ್ದೇ ಮ್ಯೂಸಿಕ್ ಕಾರ್ಯಕ್ರಮವೊಂದು ಚೆನ್ನೈನಲ್ಲಿ ನಡೆದಿದ್ದು, ಈ ಇವೆಂಟೂ ಸೆಲೆಬ್ರೇಷನ್​ಗಿಂತ ಸಮರಕ್ಕೆ ಸಾಕ್ಷಿ ಆಗಿದೆ.

ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳು ಅಳುತ್ತಿರುವುದು

ರೆಹಮಾನ್​ ವಿರುದ್ಧ ಮಹಿಳೆಯರು ತಿರುಗಿಬಿದ್ದಿದ್ದಾರೆ. ಪೋಷಕರಂತೂ ಅಕ್ಷರಃ ಉಗ್ರರೂಪ ತಾಳಿದ್ದಾರೆ. ರೆಹಮಾನ್​ ವಿರುದ್ಧ ಕ್ರಮ ಜರುಗಿಸಬೇಕು, ಇಂಥ ಕಾರ್ಯಕ್ರಮಗಳು ನಡೆಯಬಾರದು ಅಂತ ಭಾರಿ ಆಕ್ರೋಶ ಹೊರಹಾಕಿದ್ದಾರೆ.

ರೆಹಮಾನ್ ಮೇಲೆ ಇಷ್ಟೊಂದು ಆಕ್ರೋಶ ಹೊರಹಾಕ್ತಿರೋದೇಕೆ?

ಅಷ್ಟಕ್ಕೂ ರೆಹಮಾನ್​ ಸಂಗೀತ ಕೇಳಿ ಎಂಜಾಯ್ ಮಾಡೋಕೆ ಅಂತ ಬಂದಿದ್ದ ಈ ಮ್ಯೂಸಿಕ್ ಪ್ರೇಮಿಗಳು ಹೀಗೆ ರೆಹಮಾನ್​ ಅವರ ವಿರುದ್ಧವೇ ರೊಚ್ಚಿಗೆದ್ದಿದ್ದು ಯಾಕೆ? ರೆಹಮಾನ್ ಮೇಲೆ ಇಷ್ಟೊಂದು ಆಕ್ರೋಶ ಹೊರಹಾಕ್ತಿರೋದೇಕೆ ಅಂತ ನೋಡಿದ್ರೆ ಅದಕ್ಕೆ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಸೆಪ್ಟೆಂಬರ್ 10ನೇ ತಾರೀಖು ರಾತ್ರಿ ಚೆನ್ನೈನ ಅಧತ್ಯರಾಮ್ ಪ್ಯಾಲೆಸ್ ಸಿಟಿಯಲ್ಲಿ ರೆಹಮಾನ್ ಮ್ಯೂಸಿಕ್ ಕನ್ಸರ್ಟ್ ಆಯೋಜನೆ ಮಾಡಲಾಗಿತ್ತು. ಈ ಶೋಗೆ ಗರಿಷ್ಠ ಅಂದ್ರು 25 ಸಾವಿರ ಜನರಿಗೆ ಮಾತ್ರ ಅವಕಾಶ ಇತ್ತು. ಆದ್ರೆ ಆಯೋಜಕರು ಹೆಚ್ಚು ಕಡಿಮೆ 40 ಸಾವಿರ ಟಿಕೆಟ್​ ಸೇಲ್ ಮಾಡಿದ್ದಾರೆ. 25 ಸಾವಿರ ಸೇರಬೇಕಿರುವ ಜಾಗಕ್ಕೆ 40 ಸಾವಿರ ಜನ ಬಂದಿದ್ದಾರೆ. ಸೀಟ್​ಗಳು ಪೂರ್ತಿಯಾಗಿತ್ತು. ಜನ ನಿಲ್ಲೋಕೂ ಜಾಗ ಇರಲಿಲ್ಲ. ಆಗ್ಲೇ ನೋಡಿ ಪರಿಸ್ಥಿತಿ ಕಂಪ್ಲೀಟ್​ ಆಗಿ ಕೈ ತಪ್ಪಿ ಹೋಗಿದ್ದು.

ಉಸಿರುಗಟ್ಟಿದ ವಾತಾವರಣ.. ಮಕ್ಕಳಿಗೆ ನರಕ ದರ್ಶನ!

25 ಸಾವಿರ ಜನರಿಗೆ ಮಾತ್ರ ಅವಕಾಶ ಇತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ವ್ಯವಸ್ಥೆ ಎಲ್ಲವೂ ಅಸ್ತವ್ಯಸ್ತ ಆಯ್ತು.. ಒಳಗೆ ಸೀಟ್​ ಭರ್ತಿಯಾದರಿಂದ ಗೇಟ್​ಗಳನ್ನ ಕ್ಲೋಸ್ ಮಾಡಲಾಯ್ತು.. ಟಿಕೆಟ್​ ಪಡೆದಿದ್ದರೂ ಆಯೋಜಕರು ಒಳಗೆ ಬಿಡಲಿಲ್ಲ. ಜನಜಂಗುಳಿ ಉಂಟಾಯಿತು. ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಯಿತು.. ಮಕ್ಕಳಿಗಂತೂ ಅಕ್ಷರಃ ನರಕ ದರ್ಶನವಂತೆ. ತಳ್ಳಾಟ, ನೂಕಾಟ ಮಕ್ಕಳು ಬದುಕು ಉಳಿದಿದ್ದೇ ಹೆಚ್ಚು. ಟಿಕೆಟ್​ ಇದ್ದರೂ ಒಳಗೆ ಬಿಡಲಿಲ್ಲ, ಈ ಕಡೆ ಸಾವಿರಾರು ಜನ ಸೇರಿದ್ದರಿಂದ ವಾಪಸ್ ಹೋಗೋಕು ಆಗ್ಲಿಲ್ಲ. ಗೋಲ್ಡ್, ಪ್ಲಾಟಿನಂ, ಡೈಮಂಡ್​ ಅಂತ 30 ಸಾವಿರ, 40 ಸಾವಿರ ಕೊಟ್ಟು ಟಿಕೆಟ್​ ಪಡೆದಿದ್ದವರು ವಾಪಸ್ ಹೋಗೋಕು ರೆಡಿ ಇರಲಿಲ್ಲ. ಈ ಕೋಪಕ್ಕೆ ಗುರಿಯಾಗಿದ್ದು ಮಾತ್ರ ಎ.ಆರ್ ರೆಹಮಾನ್.

ಇದು ಹಣಕ್ಕಾಗಿ ಮಾಡಿದ್ದಾರೆ. ಒಬ್ಬ ಲೆಜೆಂಡ್​ ರೆಹಮಾನ್ ಅವರು ಹೀಗೆ ಮಾಡಿದ್ದು ಬೇಜಾರಿದೆ. ಒಳಗೆ ಜೀವಕ್ಕೆ ತೊಂದರೆ ಆಗ್ತಿದೆ. ತುಂಬ ಜನಕ್ಕೆ ಕಿರುಕುಳ ಆಗ್ತಿದೆ. ದುಡ್ಡು ಕೀಳೋಕೆ ಅಷ್ಟೆ ಇದು ಮಾಡಿದ್ದು. ಇದು ದೊಡ್ಡ ಸ್ಮ್ಯಾಮ್. ಟಿಕೆಟ್​ ಹೆಚ್ಚು ಮಾರಿದ್ದಾರೆ. ಹತ್ತು ನಿಮಿಷವೂ ನಿಲ್ಲೋಕೆ ಆಗಿಲ್ಲ. ಮಕ್ಕಳಂತೂ ಸುಸ್ತಾಗಿ ಬೀಳ್ತಿದ್ರು.. ಅವರನ್ನ ಎತ್ಕೊಂಡು ಸಹ ಹೋಗೋಕೆ ಆಗಿಲ್ಲ. ಆಂಬುಲೆನ್ಸ್​ ಸಹ ಇರಲಿಲ್ಲ. ಅರ್ಧಗಂಟೆ ಹೀಗೆ ಇದ್ರು ಪರಿಸ್ಥಿತಿ ಕೈ ಮೀರಿ ಹೋಗುತ್ತೆ.. ಪೊಲೀಸರಿಗೂ ನಾವು ಹೇಳಿದ್ದೀವಿ. ಜನರು ತುಂಬಾ ಕೋಪವಾಗಿದ್ದಾರೆ. ಒಳಗೆ ಹೋಗೋಕೆ ಆಗ್ಲಿಲ್ಲ ಅಂತ ಆಕ್ರೋಶದಲ್ಲಿದ್ದಾರೆ.

ಸಿಎಂ ಸ್ಟಾಲಿನ್​ಗೂ ಕೂಡ ಟ್ರಾಫಿಕ್​ ಬಿಸಿ

ಕೆಲವು ಮಹಿಳೆಯರಂತೂ ಲೈಂಗಿಕ ದೌರ್ಜನ್ಯವೂ ಆಯ್ತು ಅಂತ ಆರೋಪಿಸಿದ್ದಾರೆ. ಇನ್ನು ಪಾರ್ಕಿಂಗ್​ನಲ್ಲೂ ವ್ಯವಸ್ಥೆ ಕೈ ಕೊಟ್ಟ ಕಾರಣ ಸುತ್ತಮುತ್ತ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಆಗಿದೆ. ಅದ್ಯಾವ ಮಟ್ಟಕ್ಕೆ ಅಂದ್ರೆ ತಮಿಳುನಾಡು ಸಿಎಂ ಸ್ಟಾಲಿನ್ ಸಹ ತುಂಬಾವೊತ್ತು ಟ್ರಾಫಿಕ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರಂತೆ.

ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಯ್ತು. ಫೋಟೋಗಳು, ವಿಡಿಯೋಗಳು ವೈರಲ್ ಆದ್ವು. ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.. ಹೆಚ್ಚು ಟಿಕೆಟ್​ ಮಾರಾಟ ಮಾಡಿದ್ದೇಕೆ? ಇಂಥ ಅವ್ಯವಸ್ಥೆ ಯಾಕೆ ಸೃಷ್ಟಿಯಾಯ್ತು ಅಂತ ವಿಚಾರಣೆ ಆರಂಭಿಸಿದ್ದಾರೆ..

ಕ್ಷಮೆ ಕೇಳಿದ ರೆಹಮಾನ್.. ನಿಲ್ಲದ ಆಕ್ರೋಶ!

ಟಿಕೆಟ್​ ಇದ್ದರೂ ಒಳಗೆ ಬಿಟ್ಟಿಲ್ಲ ಅನ್ನೋರಿಗೆ ಟಿಕೆಟ್​ ಹಣ ವಾಪಸ್ ಕೊಡುವುದಾಗಿ ಆಶ್ವಾಸನೆ ಕೊಟ್ಟ ರೆಹಮಾನ್, ಮಹಿಳೆಯರಿಗೆ ಆದ ತೊಂದರೆಗೆ ಕ್ಷಮೆಯಾಚಿಸಿದ್ದಾರೆ. ವ್ಯವಸ್ಥೆಗಳ ಬಗ್ಗೆ ನನಗೆ ಅರಿವಿರಲಿಲ್ಲ ಅಂತ ಕೇಳಿಕೊಂಡಿದ್ದಾರೆ. ಇನ್ನು ರೆಹಮಾನ್ ಅವರ ಮ್ಯೂಸಿಕ್ ಕಾರ್ಯಕ್ರಮ ಆಯೋಜಿಸಿದ ಆಯೋಜಕರೇ ಖುದ್ದು ವಿಡಿಯೋ ಮಾಡಿ ಇದ್ರಲ್ಲಿ ರೆಹಮಾನ್ ಅವರದ್ದು ಯಾವುದೇ ತಪ್ಪಿಲ್ಲ, ನಾವೇ ಇದರ ಹೊಣೆ ಹೊರುತ್ತೇವೆ ಎಂದಿದ್ದಾರೆ.

ರೆಹಮಾನ್

ದುರ್ಘಟನೆ, ರೆಹಮಾನ್ ಅವರ ಪರ ಮತ್ತು ವಿರೋಧವಾಗಿ ಕ್ಯಾಂಪೇನ್

ರೆಹಮಾನ್ ಸರ್ ಲೆಜೆಂಡ್. ವೇದಿಕೆ ಮೇಲೆ ಕಾರ್ಯಕ್ರಮ ನಡೆಸಿಕೊಡುವುದಷ್ಟೇ ಅವರ ಜವಾಬ್ದಾರಿ ಆಗಿತ್ತು. ಅದನ್ನ ಮಾಡಿದ್ದಾರೆ. ಈ ಘಟನೆಗಳಿಗೂ ಅವರಿಗೂ ಸಂಬಂಧ ಇಲ್ಲ. ಸುಮ್ಮನೆ ರೆಹಮಾನ್ ಅವರನ್ನ ಗುರಿ ಮಾಡಿ ಮಾತಾಡ್ತಿರುವುದು ಬೇಡ. ಈ ತಪ್ಪಿನ ಜವಾಬ್ದಾರಿ ನಾವೇ ಹೊರುತ್ತೇವೆ.

ಈ ದುರ್ಘಟನೆ ಹಿನ್ನೆಲೆ ರೆಹಮಾನ್ ಅವರ ಪರ ಮತ್ತು ವಿರೋಧವಾಗಿ ಕ್ಯಾಂಪೇನ್ ನಡೆಯುತ್ತಿದೆ. ದುಡ್ಡಿಗಾಗಿ ಇಂಥಾ ಕಾರ್ಯಕ್ರಮ ಯಾಕೆ ಮಾಡಬೇಕು ಅಂತ ಕೆಲವ್ರು ರೆಹಮಾನ್ ವಿರುದ್ಧ ಕಿಡಿಕಾರ್ತಿದ್ದಾರೆ. ಇನ್ನು ಕೆಲವ್ರು ಇದ್ರಲ್ಲಿ ರೆಹಮಾನ್ ಅವರದ್ದು ತಪ್ಪಿಲ್ಲ ಅಂತಾ ಸಪೋರ್ಟ್ ಮಾಡ್ತಿದ್ದಾರೆ. ಎನಿ ವೇ.. ಇದುವರೆಗೂ ದೇಶ-ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳನ್ನ ಮಾಡಿರೋ ರೆಹಮಾನ್​ಗೆ ಇಂಥ ಅನುಭವ ಎಲ್ಲಿ ಆಗಿರಲಿಲ್ಲ. ಇದೇ ಮೊದಲು.. ಬಹುಶಃ ಇದ್ರ ಪರಿಣಾಮ ಅವ್ರ ಮುಂದಿನ ನಿರ್ಧಾರ ಏನಿರುತ್ತೋ ಕಾದುನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

AR​ ರೆಹಮಾನ್ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್​​.. ಕಣ್ಣೀರು ಹಾಕಿದ ಮಹಿಳೆಯರು, ಮಕ್ಕಳು, ಪೋಷಕರು!

https://newsfirstlive.com/wp-content/uploads/2023/09/AR_RAHEMAN.jpg

Load More