newsfirstkannada.com

ಮಲತಂದೆ ಧೋರಣೆಯಿಂದ ಮದುವೆಗೆ ಸಜ್ಜಾದ ಆರಾಧನ; ಸಂಕಷ್ಟದಿಂದ ಪಾರು ಮಾಡುತ್ತಾನಾ ಗೆಳೆಯ?

Share :

28-07-2023

  ಮಲತಂದೆ ಧೋರಣೆಯಿಂದ ಹೇಗೆ ಆಚೆ ಬರುತ್ತಾಳೆ ಆರಾಧನಾ!

  ಆರಾಧನಾ ನಿಶ್ಚಿತಾರ್ಥವನ್ನ ನಿಲ್ಲಿಸುತ್ತಾನಾ ಗೆಳೆಯ ಸುಶಾಂತ್!

  ಆರಾಧನಾಗೆ ಆಗುತ್ತಿರುವ ಅನ್ಯಾಯ ತಪ್ಪಿಸ್ತಾನಾ ಸುಶಾಂತ್?

ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಥಾ ಹಂದರವನ್ನು ಹೊತ್ತು ಪ್ರತಿದಿನ ವೀಕ್ಷಕರನ್ನು ರಂಜಿಸುತ್ತಾ ಇರೋದು ಅಂತರಪಟ ಧಾರಾವಾಹಿ. ಮಲತಂದೆಯ ಧೋರಣೆಯಿಂದಾಗಿ ಆರಾಧನ ಕನಸುಗಳು ದಿನೇ ದಿನೇ ನುಚ್ಚು ನೂರಾಗುತ್ತಿವೆ. ಇತ್ತ ಸುಶಾಂತ್ ಮನೆ ಬಿಟ್ಟು ಆರಾಧನಳ ವಠಾರದಲ್ಲಿ ಆಕೆಯ ಸಲಹೆಯಂತೆ ಅವಳಿಗೆ ಒಳ್ಳೆ ಸ್ನೇಹಿತನಾಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾನೆ.

ಆದರೆ ಈ ಮಧ್ಯೆ ಮಹೇಶನ ಕಡೆಯಿಂದ ಆರಾಧನಗೆ ಬಾರಿ ಹೊಡೆತ ಬೀಳುತ್ತಿದೆ. ತಾನು ಅಂದುಕೊಂಡ ಕನಸು ಆಗಬೇಕು ಎಂಬ ಆಸೆಗೆ ಮಲತಂದೆ ತಣ್ಣೀರು ಎರಚಿದ್ದಾನೆ. ಇನ್ನು ಮಹೇಶನ ಒತ್ತಾಯದ ಮೇರೆಗೆ ಗಾರ್ಮೆಂಟ್ಸ್​​ ಕೆಲಸಕ್ಕೂ ಹೋಗುತ್ತಿದ್ದಾಳೆ ಆರಾಧನ. ಇದೆಲ್ಲಾ ಸಾಲದು ಅಂತಾ ತನ್ನ ತಮ್ಮ ಪುರ್ಷಿಯನ್ನೇ ನೀನು ಮದ್ವೆ ಆಗಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಈಗ ಹೇಳದೆ ಕೇಳದೆ ತಾಂಬೂಲ ಬದಲಾಯಿಸಿ ಎಂಗೇಜ್ಮೆಂಟ್​ಗೆ ​ರೆಡಿ ಮಾಡುತ್ತಿದ್ದಾರೆ. ಇದನ್ನು ಸಹಿಸಿದ ಆರಾಧನ ಮನಸ್ಸಿನಲ್ಲಿ ಕೊರಗಿ ಕೊರಗಿ ಸಾಯುವಂತ ಪರಿಸ್ಥಿಗೆ ಬಂದಿದ್ದಾಳೆ.

ಮಲತಂದೆಯ ಧೋರಣೆಯಿಂದ ಹೇಗೆ ಆಚೆ ಬರುತ್ತಾಳೆ ಅನ್ನೋದು ಮುಂಬರುವ ಸಂಚಿಕೆಗಳಲ್ಲಿ ಗೊತ್ತಾಗಲಿದೆ. ಇನ್ನೂ ಈ ಎಂಗೇಜ್ಮೆಂಟ್​​ನಿಂದ ತಪ್ಪಿಸಿಕೊಳ್ಳುವುದಕ್ಕೆ ಸುಶಾಂತ್​ನ ಸಹಾಯ ಪಡೆದುಕೊಳ್ತಾ? ಸುಶಾಂತ್ ಆರಾಧನಗೆ ಬೆನ್ನೆಲುಬಾಗಿ ನಿಲ್ಲುತ್ತಾಳಾ? ಇವೆಲ್ಲವನ್ನ ನಾವು ಮುಂಬರುವ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮಲತಂದೆ ಧೋರಣೆಯಿಂದ ಮದುವೆಗೆ ಸಜ್ಜಾದ ಆರಾಧನ; ಸಂಕಷ್ಟದಿಂದ ಪಾರು ಮಾಡುತ್ತಾನಾ ಗೆಳೆಯ?

https://newsfirstlive.com/wp-content/uploads/2023/07/antarapata-2.jpg

Load More