ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ
ಬಾಯಿ ತಪ್ಪಿನಿಂದ ಖಂಡ್ರೆ ಎಂದು ಹೇಳುವ ಬದಲು ಖರ್ಗೆ ಎಂದಿದ್ದೇನೆ!
‘ಖರ್ಗೆಯವರಿಗಾಗಲಿ, ಖಂಡ್ರೆಯವರಿಗಾಗಲಿ ನಾನು ಅವಮಾನ ಮಾಡಿಲ್ಲ’
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಮಾಜಿ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಈಗ ಯೂಟರ್ನ್ ಹೊಡೆದಿದ್ದಾರೆ. ತನ್ನ ಹೇಳಿಕೆ ವಿರುದ್ಧ ಇಡೀ ರಾಜ್ಯಾದ್ಯಂತ ಭಾರೀ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಎಚ್ಚೆತ್ತ ಆರಗ ಜ್ಞಾನೇಂದ್ರ ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನ್ಯೂಸ್ಫಸ್ಟ್ ಜತೆಗೆ ಮಾತಾಡಿದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ನಾನು ನಿನ್ನೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಂಬಂಧ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲಿ ಈಗಿನ ಸರ್ಕಾರದ ನಡೆಯ ಬಗ್ಗೆ ಹೇಳಿಕೆ ನೀಡುತ್ತಿದೆ. ಆಗ ಬಯಲು ಸೀಮೆಗೆ ಸಂಬಂಧಿಸಿದ ಜನಪ್ರತಿನಿಧಿ ಇಂದು ಅರಣ್ಯ ಇಲಾಖೆಯ ಸಚಿವರಾಗಿದ್ದಾರೆ. ಆ ಭಾಗದಲ್ಲಿ ಮರವೂ ಇಲ್ಲ, ಗಿಡವೂ ಇಲ್ಲ. ಅಲ್ಲಿ ಕೇವಲ ಬರಡು ಭೂಮಿ. ಅಲ್ಲಿ ಬಿಸಿಲು ಜಾಸ್ತಿ. ಹೀಗಾಗಿ, ಅಲ್ಲಿನ ಜನರಿಗೆ ಮರ, ಗಿಡದ ಬಗ್ಗೆ ಗೊತ್ತಿರುವುದಿಲ್ಲ ಎಂದೇ. ಬಳಿಕ ಖಂಡ್ರೆ ಎಂದು ಹೇಳುವ ಬದಲು ಖರ್ಗೆ ಎಂದಿದ್ದೆ. ಇದು ಬಾಯಿ ತಪ್ಪಿನಿಂದ ಆಗಿರುವುದು. ಇದಕ್ಕೆ ಯಾರು ಅನ್ಯಥಾ ಭಾವನೆಯಿಂದ ತಿಳಿಯಬಾರದು. ನಾನು ಖರ್ಗೆಯವರಿಗಾಗಲೀ, ಖಂಡ್ರೆಯವರಿಗಾಗಲೀ ಅವಮಾನ ಮಾಡುವ ಉದ್ದೇಶದಿಂದ ಹಾಗೇ ಹೇಳಿಲ್ಲ. ಪಶ್ಚಿಮ ಘಟ್ಟಗಳ ಬಗ್ಗೆ ನಿಗಾವಹಿಸಿ ಎಂಬುದಷ್ಟೇ ನನ್ನ ಮಾತಾಗಿತ್ತು. ಒಂದು ವೇಳೆ ಅವರಿಗೇನಾದ್ರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಇದನ್ನು ಓದಿ: ಮಲ್ಲಿಕಾರ್ಜುನ್ ಖರ್ಗೆ ಮೈಬಣ್ಣದ ಬಗ್ಗೆ ನಾಲಿಗೆ ಹರಿಬಿಟ್ಟ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ -Video
ಏನಿದು ವಿವಾದ?
ಮಲೆನಾಡಿನ ಬಗ್ಗೆ ಗೊತ್ತಿರದ ಆ ಕಡೆಯ ಮಿನಿಸ್ಟರ್ ಸಾಹೇಬ್ರು ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನು ನೋಡಿದ್ರೆ ಗೊತ್ತಾಗುತ್ತೆ. ಸ್ವಲ್ಪ ತಲೆ ಕೂದಲು ಮುಚ್ಚಿಕೊಂಡಿರುವುದೇ ಅವರಿಗೆ ಅದೇ ನೆರಳಂತೆ ತಿಳಿದಿರುತ್ತಾರೆ ಎಂದು ಈ ಹಿಂದೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ನೀಡಿದ್ದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆರಗ ಜ್ಞಾನೇಂದ್ರ ಅವರ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಬೇಕು. ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ರೇಸ್ಕೋರ್ಸ್ನ ಕಾಂಗ್ರೆಸ್ ಭವನದ ಬಳಿ ಕೈ ಕಾರ್ಯಕರ್ತರು ಆರಗ ಜ್ಞಾನೇಂದ್ರ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ