newsfirstkannada.com

ಕಾರಿನಲ್ಲಿ ಆರು ಏರ್ ಬ್ಯಾಗ್ ಕಡ್ಡಾಯವೇ? ಕೇಂದ್ರ ಸಚಿವ ನಿತಿನ್ ಗಡ್ಕರಿ ಏನಂದ್ರು?

Share :

14-09-2023

    ಸುರಕ್ಷತೆಯ ದೃಷ್ಟಿಯಿಂದ ಕಾರಿನಲ್ಲಿ 6 ಏರ್ ಬ್ಯಾಗ್ ಅವಶ್ಯಕತೆ ಇದೆ

    ಕೇಂದ್ರ ಸಚಿವ ನಿತಿನ್​ ಗಡ್ಕರಿ ಏರ್​ ಬ್ಯಾಗ್​ ಬಗ್ಗೆ ಕೊಟ್ಟ ಸ್ಪಷ್ಟನೆ ಏನು?

    ಆರು ಏರ್​ ಬ್ಯಾಗ್​ ಕಡ್ಡಾಯವೇ? ವಾಹನ ಮಾಲೀಕರಿಗೆ ಇಲ್ಲಿದೆ ಮಹತ್ವದ ಸುದ್ದಿ

ಕಾರಿನಲ್ಲಿ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸುವ ನೀತಿ ಜಾರಿಗೆ ತರುವ ಯೋಚನೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಗಡ್ಕರಿ, ಕಾರಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಾರಿನಲ್ಲಿ 6 ಏರ್ ಬ್ಯಾಗ್ ಅವಶ್ಯಕತೆ ಇದೆ. ಆದರೆ ಈಗ ಜನರು ಜಾಗರೂಕರಾಗಿದ್ದಾರೆ. ಹೀಗಾಗಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರನ್ನು ತೆಗೆದುಕೊಳ್ಳುವ ಬಗ್ಗೆ ಜನರೇ ನಿರ್ಧರಿಸುತ್ತಾರೆ ಎಂದಿದ್ದಾರೆ.

ಕಾರಿನಲ್ಲಿ ಆರು ಏರ್​ಬ್ಯಾಗ್​ ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಅಲ್ಲದೆ ನಾವು ಕಡ್ಡಾಯಗೊಳಿಸಲು ಬಯಸುವುದಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ದೇಶದಲ್ಲಿ ಸುರಕ್ಷತೆಗಾಗಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರ ಜೊತೆಗೆ ಮಾಲಿನ್ಯವನ್ನು ಮಾಡುವ ವಾಹನಗಳಿಗೆ ಇತಿಶ್ರೀ ಹಾಡಲು ಕೇಂದ್ರ ಮುಂದಾಗಿದ್ದು, ಇಲೆಕ್ಟ್ರಿಕ್​ ವಾಹನದತ್ತ ಗ್ರಾಹಕರು ಚಿತ್ತ ನೆಡುವಂತೆ  ಕೇಂದ್ರ ಸರ್ಕಾರ ಹೆಚ್ಚು ಒತ್ತು ನಿಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿನಲ್ಲಿ ಆರು ಏರ್ ಬ್ಯಾಗ್ ಕಡ್ಡಾಯವೇ? ಕೇಂದ್ರ ಸಚಿವ ನಿತಿನ್ ಗಡ್ಕರಿ ಏನಂದ್ರು?

https://newsfirstlive.com/wp-content/uploads/2023/09/Nitin-Gadkari.jpg

Load More