ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡಗಳು ನಾಶ
ಅರ್ಧ ಎಕೆರೆಯಲ್ಲಿ ಬೆಳೆದಿದ್ದ ಶುಂಠಿಯೂ ನಾಶ
ತೋಟದ ಮಾಲೀಕ ಕಂಗಾಲ್, ಕ್ರಮಕ್ಕೆ ಆಗ್ರಹ
ಮೈಸೂರು: ಮಗಳನ್ನ ಕೊಟ್ಟು ಮದುವೆ ಮಾಡಲಿಲ್ಲ ಎಂಬ ದ್ವೇಷಕ್ಕೆ ಬರೋಬ್ಬರಿ 850 ಅಡಿಕೆ ಗಿಡಗಳನ್ನು ನಾಶ ಮಾಡಿರುವ ಆರೋಪ ಕೇಳಿಬಂದಿದೆ.
ಜಿಲ್ಲೆ ಹುಣಸೂರು ತಾಲೂಕು ಕಡೇ ಮನುಗನಹಳ್ಳಿ ಗ್ರಾಮದಲ್ಲಿದ್ದ ಅಡಿಕೆ ಗಿಡಗಳ ಮಾರಣಹೋಮ ನಡೆದಿದೆ. ಗ್ರಾಮದ ವೆಂಕಟೇಶ್ ಎಂಬುವವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಹಾಕಿದ್ದರು.
ಆರೋಪ ಏನು..?
ವೆಂಕಟೇಶ್ ಪುತ್ರಿಯನ್ನು ಅದೇ ಗ್ರಾಮದ ಅಶೋಕ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಲು ಮಾತುಕತೆ ನಡೆದಿತ್ತು. ಆದರೆ ಕೊನೆ ಗಳಿಗೆಯಲ್ಲಿ ವೆಂಕಟೇಶ್ ಪುತ್ರಿ ‘ಹುಡುಗ ಸರಿಯಿಲ್ಲ’ ಎಂದು ಮದುವೆಗೆ ಒಪ್ಪಿರಲಿಲ್ಲ
ಇದರಿಂದ ಆರಂಭಗೊಂಡ ದ್ವೇಷವು ಮೊದಲಿಗೆ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿಯನ್ನು ಅಶೋಕ್ ನಾಶ ಮಾಡಿದ್ದಾನಂತೆ. ನಿನ್ನೆ ರಾತ್ರಿ ಮತ್ತೆ ಜಮೀನಿಗೆ ನುಗ್ಗಿ ಅಡಿಕೆ ಗಿಡಗಳ ನಾಶ ಮಾಡಿದ್ದಾನೆಂದು ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ