ದಾಖಲೆಯ ಪ್ರಮಾಣದಲ್ಲಿ ಮಳೆ; ಎಲ್ಲೆಲ್ಲೂ ಪ್ರವಾಹ!
ನದಿಗಳಂತಾದ ರಸ್ತೆಗಳು.. ವಾಹನ ಸವಾರರ ಪರದಾಟ
50ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕರ್ನಾಟಕದಲ್ಲಿ ಮಳೆ ಇಲ್ಲದೇ ಇಳೆ ಬರಿದಾಗಿದೆ. ಉತ್ತರ ಭಾರತದಲ್ಲಿ ಮಳೆ ಎಲ್ಲವನ್ನೂ ತೊಳೆಯುತ್ತಿದೆ. ಅರ್ಜೆಂಟೀನಾದಲ್ಲಿ ವರುಣ ಆರ್ಭಟಿಸ್ತಿದ್ದಾನೆ. ಪ್ರವಾಹ ಪ್ರತಾಪ ತೋರಿದೆ. ರಸ್ತೆಗಳು, ಮನೆಗಳು ಮುಳುಗಿವೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ರಾಷ್ಟ್ರ ಅರ್ಜೆಂಟೀನಾ ವರುಣನ ಅಬ್ಬರಕ್ಕೆ ತತ್ತರಿಸಿದೆ. ರಾಜಧಾನಿ ಬ್ಯೂನಸ್ ಐರಿಸ್ ಸುತ್ತಮುತ್ತ ವರುಣ ಪ್ರತಾಪ ತೋರಿದ್ದು ಪರಿಸ್ಥಿತಿ ಅಯೋಮಯ ಆಗಿದೆ.
ಕಳೆದ 24 ಗಂಟೆಗಳಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ದಾಖಲೆಯ ಮಳೆಯಾಗಿದೆ. ವರುಣನ ಚೆಲ್ಲಾಟಕ್ಕೆ ರಾಜಧಾನಿ ಬ್ಯೂನಸ್ ಐರಿಸ್ ಮುಳುಗಿದೆ. ರಸ್ತೆಗಳು, ಮನೆಗಳು, ಕಟ್ಟಡಗಳು ಮುಳುಗಿವೆ. ನಿವಾಸಿಗಳು ಪರದಾಟ ನಡೆಸಿದ್ದಾರೆ. ರಸ್ತೆಗಳು ನದಿಗಳಂತಾಗಿದ್ದು ವಾಹನ ಸವಾರರು ಪರದಾಡಿದ್ದಾರೆ. ಬ್ಯೂನಸ್ ಐರಿಸ್ ಬಳಿಯ ಸಾಂತಾ ರೋಜಾದಲ್ಲಿ ಪ್ರವಾಹ ಏರ್ಪಟ್ಟಿದೆ. ರಸ್ತೆಗಳಲ್ಲಿ ನೀರು ಭೋರ್ಗರೆದು ಹರಿಯುತ್ತಿದೆ. ವಾಹನಗಳು ನೀರಿನಲ್ಲಿ ತೇಲಿ ಹೋಗಿವೆ.
ಇನ್ನು ನದಿಗಳು ಭೋರ್ಗರೆದು ಹರಿಯುತ್ತಿದ್ದು ನದಿಪಾತ್ರಗಳು ಮುಳುಗಿವೆ. ಬ್ಯೂನಸ್ ಐರಿಸ್ನ ಮೆರ್ಲೋ ಬಳಿ ಬಂಡೆಗಳ ಮೇಲಿಂದ ಹರಿಯುತ್ತಿರುವ ನೀರು ಭೋರ್ಗರೆಯುವ ಜಲಪಾತವನ್ನು ಸೃಷ್ಟಿಸಿದೆ. ಬ್ಯೂನಸ್ ಐರಿಸ್ ಸಿಟಿಯಲ್ಲಿ ಸಾರಿಗೆ ಬಸ್ಗಳು ಹೊಳೆಯಂತೆ ತುಂಬಿರುವ ರಸ್ತೆಯಲ್ಲೇ ಸಂಚರಿಸುತ್ತಿದ್ದು ಬಸ್ ಒಳಗೆ ನೀರು ಹರಿಯುತ್ತಿದೆ. ನೀರು ತುಂಬಿದ ಬಸ್ನಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಅರ್ಜೆಂಟೀನಾದಾದ್ಯಂತ ವಾಯುಸಂಚಾರದಲ್ಲಿ ವ್ಯತ್ಯಯವಾಗಿದೆ. ಸುಮಾರು 50ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.
ಇನ್ನು ಲಾ ಪ್ಲಾಟಾ ಸಿಟಿಯಲ್ಲಿ ರಾಜಕಾಲುವೆಗಳು ಹೂಳಿನಿಂದ ತುಂಬಿದ್ದ ಪರಿಣಾಮ ನೀರು ಸರಾಗವಾಗಿ ಹರಿದು ಹೋಗಲಾಗದೇ ಪ್ರವಾಹ ಸೃಷ್ಟಿಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಡ್ರೇನೇಜ್ ಕ್ಲೀನಿಂಗ್ ನಡೆಯುತ್ತಿದೆ. ಅರ್ಜೆಂಟೀನಾದೆಲ್ಲೆಡೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ನಡೀತಿದೆ. ಮಳೆ ಹೀಗೆ ಮುಂದುವರಿದ್ರೆ ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸುವ ಆತಂಕ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ