newsfirstkannada.com

ಮದುವೆ ಊಟದಲ್ಲಿ ರಸಗುಲ್ಲಾ ಕಡಿಮೆ ಹಾಕಿದ್ದಕ್ಕೆ ಹೊಡೆದಾಟ.. ಆರು ಮಂದಿಗೆ ಗಂಭೀರ ಗಾಯ

Share :

21-11-2023

  ಮದುವೆಯ ಊಟಕ್ಕೆ ರಸಗುಲ್ಲಾ ಕಡಿಮೆ ಬಿದ್ದಿದ್ದಕ್ಕೆ ಹೊಡೆದಾಟ

  ರಸಗುಲ್ಲಾಕ್ಕಾಗಿ ಆರಂಭವಾದ ಜಗಳದಲ್ಲಿ ಆರು ಮಂದಿಗೆ ಗಾಯ

  ಮದುವೆ ಮನೆಯಿಂದ ಆಸ್ಪತ್ರೆಗೆ ದಾಖಲಾದ ಸಂಬಂಧಿಕರು

ಆಗ್ರಾ: ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಮದುವೆ ಮನೆ ಅಂದ್ರೆ ಬಂಧು ಬಾಂಧವರು ಖುಷ್, ಖುಷಿಯಾಗಿ ಬಂದು ಶುಭಾಶಯ ಕೋರುವುದೇ ಒಂದು ಸಂಭ್ರಮ. ಮದುವೆ ಸಂತೋಷದಿಂದ ಆದ್ರೆ ಸಂಗಾತಿಯೊಂದಿಗೆ ಸಂಸಾರ. ಆದರೆ ಉತ್ತರ ಪ್ರದೇಶದ ಮದುವೆ ಮನೆಯಲ್ಲೊಂದು ಅವಾಂತರ ನಡೆದು ಹೋಗಿದೆ.

ಆಗ್ರಾದ ಮದುವೆಯಲ್ಲಿ ಊಟಕ್ಕೆ ರಸಗುಲ್ಲಾ ಕಡಿಮೆ ಬಿದ್ದಿದ್ದಕ್ಕೆ ಹೊಡೆದಾಟ ನಡೆದಿದೆ. ರಸಗುಲ್ಲಾದಿಂದ ಶುರುವಾದ ಜಗಳ ಮದುವೆ ಮನೆಯಲ್ಲಿ ಮಾರಾಮಾರಿಯನ್ನೇ ಸೃಷ್ಟಿಸಿದೆ. ರಸಗುಲ್ಲಾಕ್ಕಾಗಿ ಆರಂಭವಾದ ಜಗಳದಲ್ಲಿ ಆರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಭಾನುವಾರ ಆಗ್ರಾದ ಶಂಸಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸಗುಲ್ಲಾಕ್ಕಾಗಿ ಕಿತ್ತಾಟ ನಡೆಸಿದವರು ಮದುವೆ ಸಂಭ್ರಮದಿಂದ ಆಸ್ಪತ್ರೆ ಪಾಲಾದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಅಪಾಯದಿಂದ ಪಾರಾಗಿದ್ದಾರೆ ಎಂದು ಶಂಸಾಬಾದ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಊಟದಲ್ಲಿ ರಸಗುಲ್ಲಾ ಕಡಿಮೆ ಹಾಕಿದ್ದಕ್ಕೆ ಹೊಡೆದಾಟ.. ಆರು ಮಂದಿಗೆ ಗಂಭೀರ ಗಾಯ

https://newsfirstlive.com/wp-content/uploads/2023/11/Marriage-Hall.jpg

Load More