ವಿಸರ್ಜನೆ ಬಳಿಕ ನಿಮ್ಮ ಮನೆ ಮುಂದೆ ಗಿಡವಾಗಿ ಬರಲಿದ್ದಾನೆ ಗಣಪ
ತಂತ್ರಜ್ಞಾನ, ಕಲೆ ಜೊತೆಗೆ ವಿದ್ಯಾರ್ಥಿಗಳ ಕೈಯ್ಯಲ್ಲಿ ಅರಳಿದ ಗಣೇಶ
ಗಣಪ ಅಲ್ಲ ಪ್ರಕೃತಿಗೆ ಕೊಡುಗೆಯಾಗಿ ಮಾರ್ಪಾಡಾಗುವ ಅದ್ಭುತ ಕಲೆ
ಈಗಿನ ಜನರೇಶನ್ನಲ್ಲಿ ಗಣಪತಿ ಹಬ್ಬ ಅಂದ್ರೆ ಅದು ಆಡಂಭರ ಆಗಿದೆ. ಕಾಸ್ಟ್ಲಿ ಗಣೇಶನ ಮೂರ್ತಿ ಕೂರಿಸಿದ್ರೆ ಅದೇ ದೊಡ್ಡ ಹಬ್ಬ ಅನ್ನೋರ ನಡುವೆ ಇಲ್ಲೊಂದು ತಂಡ ಪ್ಲಾಂಟ್ ಗಣೇಶನ ಮೂರ್ತಿ ತಯಾರಿಸಿದ್ದಾರೆ. ಇದು ಕೇವಲ ಗಣಪ ಅಲ್ಲ ಪ್ರಕೃತಿಗೆ ಕೊಡುಗೆಯಾಗಿ ಮಾರ್ಪಾಡಾಗುವ ಅದ್ಭುತ ಕಲೆ.
ಗೌರಿ ಗಣೇಶ ಹಬ್ಬಕ್ಕೆ ಇಕೋ ಫ್ರೆಂಡ್ಲಿ ಗಣೇಶನನ್ನ ಜನರಿಗೆ ನೀಡೋದೆ ಅರಿನಾ ಅನಿಮೇಷನ್ ವಿದ್ಯಾರ್ಥಿಗಳ ಮೂಲ ಉದ್ದೇಶವಾಗಿದೆ. ಮಂತ್ರ ಪಠಣೆ ಮಾಡ್ತಿರೋ ವಿದ್ಯಾರ್ಥಿಗಳು. ಜೇಡಿಮಣ್ಣಿನಲ್ಲಿ ವಿಧ ವಿಧವಾದ ಆಕೃತಿ ತಯಾರು ಮಾಡ್ತಿದ್ದಾರೆ.
ಪರಿಸರ ಸ್ನೇಹಿ ಗಣಪನನ್ನ ತಯಾರಿಸಿದ ವಿದ್ಯಾರ್ಥಿಗಳು
ಪರಿಸರ ಹಾನಿಕಾರಕ ಗಣೇಶನನ್ನ ಉಪಯೋಗಿಸಬೇಡಿ ಅಂತಾ ಕೂಗಿ ಹೇಳಿದ್ರೂ ಯಾರೂ ಕೇಳೋದಿಲ್ಲ. ಆದ್ರೆ, ಮಲ್ಲೇಶ್ವರಂನ ಅರಿನಾ ಅನಿಮೇಷನ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣಪನನ್ನ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಈ ಗಣೇಶನ ತಯಾರಿಗೆ ಯಾವುದೇ ರೀತಿಯ ಕೆಮಿಕಲ್ ಬಳಸಿಲ್ಲ ಅನ್ನೋದು ವಿಶೇಷ.
ಗಣಪನ ಹೊಟ್ಟೆಯೊಳಗೆ ತುಳಸಿ ಬೀಜ
ಪಾರ್ವತಿ ಪುತ್ರ ಗಣೇಶನ ಹಬ್ಬಕ್ಕೆ ನಾಲ್ಕು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಎಲ್ಲೆಡೆ ಗಣೇಶನ ತಯಾರಿ ಹಾಗೂ ಗಣೇಶನ ಖರೀದಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಈ ನಡುವೆ ಇಲ್ಲೊಂದು ತಂಡ ವಿಶೇಷವಾಗಿ ಪ್ಲಾಂಟ್ ಗಣೇಶನನ್ನ ತಯಾರಿಸಿದ್ದಾರೆ. ಈ ಗಣಪತಿ ಪರಿಸರ ಸ್ನೇಹಿ ಮಾತ್ರ ಅಲ್ಲದೇ ಈ ಗಣಪನ ಹೊಟ್ಟೆಯೊಳಗೆ ತುಳಸಿ ಬೀಜವನ್ನ ಇರಿಸಲಾಗಿದೆ. ಗಣಪತಿ ವಿಸರ್ಜನೆ ಬಳಿಕ ಈ ಗಣಪ ಗಿಡವಾಗಿ ನಿಮ್ಮ ಮನೆ ಮುಂದೆ ಬರಲಿದ್ದಾನೆ.
ಇತ್ತೀಚಿನ ವರ್ಷಗಳಲ್ಲಿ ಪರಿಸರ ಹಾನಿಕಾರಕ ಗಣೇಶನ ಮೂರ್ತಿಗಳೇ ಸಿದ್ಧವಾಗ್ತಿದೆ. ಅದನ್ನ ಬಳಕೆ ಮಾಡಿ ಪರಿಸರಕ್ಕೆ ಹಾನಿ ಮಾಡೋ ಬದಲು ಮಣ್ಣಿನಿಂದ ತಯಾರಾದ ಇಂತಹ ಗಣೇಶನನ್ನ ಪೂಜೆ ಮಾಡಿ ಪರಿಸರಕ್ಕೆ ಒಳಿತು ಮಾಡಿದರೆ ಪರಿಸವೂ ಉಳಿಯುತ್ತೆ. ಗಣೇಶ ಹಬ್ಬವೂ ಸಂಭ್ರಮದಿಂದ ಸಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ