newsfirstkannada.com

WATCH: ಅರಿಶಿನಗುಂಡಿ ಫಾಲ್ಸ್​ ಕೇಸ್​​; ಸಾಯೋ ಮುನ್ನ ಶರತ್​​ ರೀಲ್ಸ್​ಗಾಗಿ ಹುಚ್ಚಾಟ; ಅಸಲಿಗೆ ಆಗಿದ್ದೇನು?

Share :

31-07-2023

    ಅರಿಶಿನಗುಂಡಿಯಲ್ಲಿ ಅಂದು ಶರತ್​ ಮತ್ತು ಸ್ನೇಹಿತರ ಚೆಲ್ಲಾಟ

    ಜಲಪಾತದ ಹತ್ತಿರ ಹೋದ ಶರತ್ ಫ್ರೆಂಡ್ಸ್‌ ಮಾಡಿದ್ದೇನು?

    ಶರತ್ ಭಯಾನಕ ರೀಲ್ಸ್ ವಿಡಿಯೋಗಳ ಅಸಲಿ ವಿಷ್ಯ ಇಲ್ಲಿದೆ

ಶಿವಮೊಗ್ಗ: ಕೊಲ್ಲೂರಿನ ಅರಿಶಿನಗುಂಡಿ ಜಲಪಾತದಲ್ಲಿ ಜಾರಿ ಬಿದ್ದ ಶರತ್‌ 8 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನದ ಮಧ್ಯೆ ಇಂದು ಭದ್ರಾವತಿಯಲ್ಲಿ ಶರತ್ ಅಂತ್ಯಸಂಸ್ಕಾರವೂ ನೆರವೇರಿದೆ. ದೇವಸ್ಥಾನಕ್ಕೆ ಹೋದ ಮಗ ವಾಪಸ್ ಮನೆಗೆ ಬರುತ್ತಾನೆ ಎಂದು ಕಾಯುತ್ತಿದ್ದ ಶರತ್ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಭದ್ರಾವತಿಯಲ್ಲಿ ಸ್ನೇಹಿತರು, ಸಂಬಂಧಿಕರ ಗೋಳಾಟದ ದೃಶ್ಯ ಎಂಥವರ ಮನಸು ಕೊರಗುವಂತೆ ಮಾಡುತ್ತದೆ. ಅತ್ತ ಶರತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ರೆ, ಅಂತ್ಯ ಸಂಸ್ಕಾರದ ದಿನವೇ ಅಂದು ಅರಿಶಿನಗುಂಡಿ ಜಲಪಾತದ ಬಳಿ ನಡೆದಿದ್ದೇನು ಅನ್ನೋ ಭಯಾನಕ ಅಂಶಗಳು ಬಯಲಾಗಿವೆ.

ಕಳೆದ ಜುಲೈ 23ರಂದು ಶರತ್, ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದ. ಮನೆಯಲ್ಲಿ ದೇವಸ್ಥಾನಕ್ಕೆಂದು ಹೇಳಿದ್ದ ಶರತ್‌ನನ್ನು ಅರಿಶಿನಗುಂಡಿ ಫಾಲ್ಸ್‌ಗೆ ಅವರ ಸ್ನೇಹಿತರೇ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅಂದು ಅರಿಶಿನಗುಂಡಿ ಜಲಪಾತದಲ್ಲಿ ಶರತ್ ಹಾಗೂ ಆತನ ಸ್ನೇಹಿತರು ತೆಗೆದ ರೀಲ್ಸ್ ವಿಡಿಯೋಗಳು ಇಂದು ಬಯಲಾಗಿದೆ. ಆ ರೀಲ್ಸ್ ವಿಡಿಯೋಗಳಲ್ಲಿ ಶರತ್ ನಾಪತ್ತೆಯಾಗುವ ಮೊದಲು ರೀಲ್ಸ್​ ಮಾಡಿದ್ದ ಎನ್ನಲಾಗಿದೆ.

ಅರಿಶಿನಗುಂಡಿ ಫಾಲ್ಸ್‌ ಹತ್ತಿರ ಹೋಗಿದ್ದ ಶರತ್, ಜಾರುವ ಬಂಡೆ ಮೇಲೆ ನಿಂತು ರೀಲ್ಸ್ ಮಾಡಿದ್ದಾನೆ. ಶರತ್ ಜಾರಿ ಬೀಳುವಾಗ ಆತನ ಸ್ನೇಹಿತರು ಕೂಗಾಡುವ ಧ್ವನಿ ಆ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಇದಕ್ಕೂ ಮುನ್ನ ಶರತ್ ಸ್ನೇಹಿತ ಗುರು ಸೇರಿದಂತೆ ಕೆಲವರು ರೀಲ್ಸ್‌ಗಳನ್ನ ಮಾಡುತ್ತಾ ಚೆಲ್ಲಾಟವಾಡಿದ್ದಾರೆ. ಮೊದಲು ಸ್ನೇಹಿತ ಗುರುವಿನ ರೀಲ್ಸ್​ ಮಾಡಿದ್ದ ಶರತ್​. ಬಳಿಕ ಬಳಿಕ ಅದೇ ಸ್ಥಳಕ್ಕೆ ಶರತ್​ ಕೂಡ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ.

ಅರಿಶಿನಗುಂಡಿಯಲ್ಲಿ ಶರತ್‌ಗೂ ಮೊದಲು ರೀಲ್ಸ್ ಮಾಡಿದ ಗುರು

ಇದನ್ನೂ ಓದಿ: VIDEO: ಅರಿಶಿನಗುಂಡಿ ಫಾಲ್ಸ್‌ನಲ್ಲಿ ಜಾರಿ ಬಿದ್ದ ಶರತ್‌ಗೆ ಅಂತಿಮ ನಮನ; ಭದ್ರಾವತಿಯಲ್ಲಿ ಕುಟುಂಬಸ್ಥರ ಆಕ್ರಂದನ

ಈ ವಿಡಿಯೋಗಳಿಂದ ಧುಮ್ಮಿಕ್ಕುತ್ತಿರುವ ಜಲಪಾತದ ನೀರಿನಲ್ಲಿ ಸೆಲ್ಫಿ ರೀಲ್ಸ್​ ಮಾಡೋ ಹುಚ್ಚಾಟಕ್ಕೆ ಶರತ್ ಬಲಿಯಾಗಿದ್ದಾನೆ ಎನ್ನಲಾಗಿದೆ. ಶರತ್ ನಾಪತ್ತೆಯಾಗುವ ಮೊದಲು ತೆಗೆದ ರೀಲ್ಸ್​ ವಿಡಿಯೋಗಳು ಇದೀಗ ಬಿಡುಗಡೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅರಿಶಿನಗುಂಡಿ ಫಾಲ್ಸ್​ ಕೇಸ್​​; ಸಾಯೋ ಮುನ್ನ ಶರತ್​​ ರೀಲ್ಸ್​ಗಾಗಿ ಹುಚ್ಚಾಟ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/07/Sharath-Falls.jpg

Load More