newsfirstkannada.com

ಅರ್ಜುನ್‌ ಸರ್ಜಾ ಪುತ್ರಿಯ ಅದ್ಧೂರಿ ನಿಶ್ಚಿತಾರ್ಥ ಹೇಗಿತ್ತು? ಸುಂದರ ವರ ಯಾರು? ಮದುವೆ ಯಾವಾಗ?

Share :

28-10-2023

  ಸಿನಿಮಾ ನಟನನ್ನು ಅಳಿಯ ಮಾಡಿಕೊಂಡರು ನಟ ಅರ್ಜುನ್ ಸರ್ಜಾ!

  ಐಶ್ವರ್ಯ ಅರ್ಜುನ್ - ಉಮಾಪತಿ ರಾಮಯ್ಯ ಮದುವೆ ಯಾವಾಗ..?

  ಕೊನೆಗೂ ಪ್ರೀತಿಸಿದ ಹುಡುಗನ ಕೈ ಹಿಡಿದ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ ಕಳೆಕಟ್ಟಿದೆ. ಇಷ್ಟು ದಿನ ಸರ್ಜಾ ಪುತ್ರಿ ತಮಿಳು ನಟನ ಜೊತೆ ಪ್ರೀತಿಯಲ್ಲಿದ್ದಾರೆ ಅನ್ನೋ ಸುದ್ದಿ ಮಾತ್ರ ಸದ್ದು ಮಾಡ್ತಿತ್ತು. ಆದ್ರೀಗ ಈ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಿದೆ. ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥ ಸದ್ದಿಲ್ಲದೇ ಅದ್ಧೂರಿಯಾಗಿ ನೆರವೇರಿದ್ದು, ನವಜೋಡಿಗೆ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಕೊನೆಗೂ ತಾನು ಇಷ್ಟ ಪಟ್ಟ ಯುವಕನ ಜೊತೆ ಹೊಸ ಜೀವನ ಆರಂಭಿಸೋಕೆ ಸಜ್ಜಾಗಿದ್ದಾರೆ.

ಇಷ್ಟು ದಿನ ಪ್ರೀತಿ ವಿಷಯವನ್ನ ಹೇಗೆ ರಿವೀಲ್ ಮಾಡೋದು ಯೋಚಿಸ್ತಿದ್ದ ಐಶ್ವರ್ಯಾ ಒಂದೇ ಸಲ ನಿಶ್ಚಿತಾರ್ಥ ಮಾಡ್ಕೊಂಡು ಸರ್ಪ್ರೈಸ್​ ಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಹಿರಿಯ ಮಗಳು ಐಶ್ವರ್ಯ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಅಕ್ಟೋಬರ್ 27, ಶುಕ್ರವಾರ ಚೆನ್ನೈನಲ್ಲಿ ಐಶ್ವರ್ಯ ಮತ್ತು ಉಮಾಪತಿ ರಾಮಯ್ಯ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಕುಟುಂಬಸ್ಥರ, ಆಪ್ತರು ಹಾಗೂ ಕೆಲವು ಸ್ನೇಹಿತರು ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಸಹ ಈ ಎಂಗೇಜ್​ಮೆಂಟ್​ನಲ್ಲಿ ಭಾಗಿಯಾಗಿದ್ದು, ಬಿಳಿ ಪಂಚೆ, ಬಿಳಿ ಶರ್ಟ್​ನಲ್ಲಿ ರಾರಾಜಿಸಿರೋ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.

ಐಶ್ವರ್ಯ ಕೈ ಹಿಡಿಯಲಿರುವ ಆ ಸುಂದರ ವರ ಯಾರು?
ಸರ್ಜಾ ಪುತ್ರಿಯ ಲವ್​ ಸ್ಟೋರಿ ಶುರುವಾಗಿದ್ದು ಎಲ್ಲಿ?

ಐಶ್ವರ್ಯ ಭಾವಿ ಪತಿಯ ಹೆಸರು ಉಮಾಪತಿ ರಾಮಯ್ಯ. ತಮಿಳು ಇಂಡಸ್ಟ್ರಿಯ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ. ತಂಬಿ ರಾಮಯ್ಯ ಕಾಲಿವುಡ್​ನಲ್ಲಿ ದೊಡ್ಡ ಹೆಸರು ಹೊಂದಿದ್ದಾರೆ. ನಟನೆ ಮಾತ್ರವಲ್ಲ ಕೆಲವು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಅಪ್ಪನಂತೆ ಮಗ ಉಮಾಪತಿ ಕೂಡ ಇಂಡಸ್ಟ್ರಿಯಲ್ಲೇ ಭವಿಷ್ಯ ಕಂಡುಕೊಳ್ಳೋಕೆ ನಿರ್ಧರಿಸಿ ಹೀರೋ ಆಗಿ ಎಂಟ್ರಿ ಕೊಟ್ಟು ಸಿನಿ ಬದುಕು ಮುಂದುವರಿಸಿದ್ದಾರೆ. 2017ರಲ್ಲಿ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ಉಮಾಪತಿ ಇದುವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಮರ್ಷಿಯಲ್ ಆಗಿ ದೊಡ್ಡ ಸಕ್ಸಸ್​ ಕೊಟ್ಟಿಲ್ಲ ಅಂದ್ರು ಉಮಾಪತಿ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ರು. ಡ್ಯಾನ್ಸ್​ನಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದ ಉಮಾಪತಿ ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ. ಆ್ಯಕ್ಷನ್ ಅಡ್ವಂಚರ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕೊನೆ ಸ್ಟೇಜ್​ವರೆಗೂ ಬಂದು ಗಮನ ಸೆಳೆದಿದ್ದರು. ಮತ್ತೊಂದು ವಿಶೇಷ ಅಂದ್ರೆ ಸ್ವತಃ ಅರ್ಜುನ್ ಸರ್ಜಾ ನಿರೂಪಣೆ ಮಾಡ್ತಿದ್ದ ಶೋವೊಂದರಲ್ಲೂ ಉಮಾಪತಿ ಸ್ಪರ್ಧಿಯಾಗಿದ್ದರಂತೆ. ಆ ಶೋನಲ್ಲಿ ಅರ್ಜುನ್ ಸರ್ಜಾ ಅವರಿಂದ ಉಮಾಪತಿ ಭೇಷ್​ ಸಹ ಅನಿಸಿಕೊಂಡಿದ್ದರು. ಆಗಿಂದಲೇ ಉಮಾಪತಿ ಸರ್ಜಾ ಕುಟುಂಬಕ್ಕೆ ಪರಿಚಯ ಇದ್ದಾರೆ. ಅದಕ್ಕೂ ಮಿಗಿಲಾಗಿ ಉಮಾಪತಿ ಅವರ ತಂದೆ ತಂಬಿ ರಾಮಯ್ಯ ಸಹ ಅರ್ಜುನ್ ಸರ್ಜಾ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು.

ಕಳೆದ ಜೂನ್ ತಿಂಗಳಿಂದ ಐಶ್ವರ್ಯ ಮತ್ತು ಉಮಾಪತಿ ಮದುವೆ ಮಾತುಕತೆ ಆರಂಭವಾಗಿದೆ. ಉಮಾಪತಿಗೆ ಮದುವೆ ಮಾಡ್ಬೇಕು ಅಂತ ನಿರ್ಧರಿಸಿದ ತಂಬಿ ರಾಮಯ್ಯ ಒಳ್ಳೆ ವರ ಬೇಕು ಅಂತ ಹುಡುಕೋಕೆ ಶುರು ಮಾಡಿದ್ರಂತೆ. ಈ ವಿಷ್ಯ ಗೊತ್ತಾಗಿ ಮಗ ಉಮಾಪತಿ, ಐಶ್ವರ್ಯ ಜೊತೆಗಿನ ಪ್ರೀತಿ ಬಗ್ಗೆ ಬಹಿರಂಗಪಡಿಸಿದ್ದಾರೆ. ತಂದ ನಂತರ ಮಗನ ಒಳ್ಳೆ ಸಂಬಂಧ ಅಂತ ನಿರ್ಧರಿಸಿದ ತಂಬಿ ರಾಮಯ್ಯ, ಅರ್ಜುನ್ ಸರ್ಜಾ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆ ಮಾಡಿದ್ದಾರೆ. ಈ ಕಡೆ ಅರ್ಜುನ್ ಸರ್ಜಾನೂ ಮಗಳ ಆಸೆ ಹಾಗೂ ಉಮಾಪತಿ ಬಗ್ಗೆ ಗೊತ್ತಿದ್ದರಿಂದ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಮನೆ ನೋಡೋ ಶಾಸ್ತ್ರವೂ ಮುಗಿಸಿ ನಿಶ್ಚಿತಾರ್ಥ ಫಿಕ್ಸ್​ ಮಾಡಿದ್ದರು. ಗುರು-ಹಿರಿಯರು ನಿಶ್ಚಿಯಿಸಿದಂತೆ ಈಗ ನಿಶ್ಚಿತಾರ್ಥ ಮುಗಿದಿದ್ದು, ಆದಷ್ಟೂ ಬೇಗ ಮದುವೆ ಊಟ ಹಾಕಿಸೋಕೆ ನಿರ್ಧರಿಸಿದ್ದಾರೆ.

2013ರಲ್ಲಿ ನಟ ವಿಶಾಲ್ ಜೊತೆ ಹೀರೋಯಿನ್​ ಜರ್ನಿ ಆರಂಭಿಸಿದ ಐಶ್ವರ್ಯ ಇದುವರೆಗೂ ಮಾಡಿರೋದು ಕೇವಲ ಎರಡು ಸಿನಿಮಾ.. ಇನ್ನು 2018ರಲ್ಲಿ ‘ಪ್ರೇಮ ಬರಹ’ ಚಿತ್ರದೊಂದಿಗೆ ಸ್ಯಾಂಡಲ್​ವುಡ್​ ಪ್ರವೇಶಿಸಿದ ಐಶ್ವರ್ಯ ಆಮೇಲೆ ಯಾವುದೇ ಹೊಸ ಸಿನಿಮಾ ಮಾಡಿಲ್ಲ. ಇದೇ ಚಿತ್ರವನ್ನ ತಮಿಳಿನಲ್ಲೂ ಮಾಡಿ ಸುಮ್ಮನಾಗಿದ್ರು. ಈ ನಡುವೆ ತೆಲುಗಿನಲ್ಲಿ ವಿಶ್ವಾಸ್​ ಸೇನ್ ಜೊತೆ ಹೊಸ ಚಿತ್ರ ಆರಂಭಿಸಿದ್ರು ಕೆಲವು ವೈಯಕ್ತಿಕ ಕಾರಣಗಳಿಂದ ಈ ಚಿತ್ರ ಅರ್ಧಕ್ಕೆ ನಿಂತು ಹೋಗಿದೆ. ಇನ್ನು ನಡುವೆ ಮಗಳ ಜೊತೆ ಮತ್ತೊಂದು ಸಿನಿಮಾ ಮಾಡೋಕೆ ಆ್ಯಕ್ಷನ್ ಕಿಂಗ್ ರೆಡಿಯಾಗ್ತಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನನ್ನಾಗಿಸಿ ಹೊಸ ಸಿನಿಮಾ ಮಾಡೋಕೆ ಸರ್ಜಾ ಪ್ಲಾನ್ ಮಾಡಿದ್ದು, ಈ ಚಿತ್ರಕ್ಕೆ ತನ್ನ ಮಗಳನ್ನೇ ಹೀರೋಯಿನ್ ಆಗಿಸಲು ನಿರ್ಧರಿಸಿದ್ದಾರಂತೆ.

ಪ್ರಿ-ಪ್ರೊಡಕ್ಷನ್ ಕೆಲಸವೂ ನಡೀತಿದ್ದು, ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗ್ತಿದೆ. ಈ ನಡುವೆ ಮಗಳ ಕಲ್ಯಾಣಕ್ಕೂ ಸರ್ಜಾ ರೆಡಿಯಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್​ ಕೊನೆಯಲ್ಲಿ ಅಥವಾ ಜನವರಿ ಆರಂಭದಲ್ಲಿ ಐಶ್ವರ್ಯ ಅವರ ಮದುವೆ ನಡೆಯಲಿದೆ. ಬಹಳ ದೊಡ್ಡ ಮಟ್ಟದಲ್ಲಿ ಮದುವೆ ಮಾಡುವ ಯೋಜನೆಯಿದ್ದು, ದಕ್ಷಿಣ ಭಾರತದ ಸೂಪರ್​ಸ್ಟಾರ್ಸ್​ ಹಾಗೂ ರಾಜಕಾರಣಿಗಳು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರ್ಜುನ್‌ ಸರ್ಜಾ ಪುತ್ರಿಯ ಅದ್ಧೂರಿ ನಿಶ್ಚಿತಾರ್ಥ ಹೇಗಿತ್ತು? ಸುಂದರ ವರ ಯಾರು? ಮದುವೆ ಯಾವಾಗ?

https://newsfirstlive.com/wp-content/uploads/2023/10/sarja.jpg

Load More