newsfirstkannada.com

20 ಆಲ್​ ರೌಂಡರ್​ಗಳಿಗೆ BCCI ದಿಢೀರ್ ಬುಲಾವ್; ಕಿಟ್​​ ಜೊತೆಗೆ ಬೆಂಗಳೂರಿಗೆ ಓಡೋಡಿ ಬಂದ್ರು ಕ್ರಿಕೆಟರ್ಸ್..!

Share :

15-06-2023

    WTC ಫೈನಲ್ ಸೋಲಿನ ಬಳಿಕ ಬಿಸಿಸಿಐ ಪ್ಲಾನ್​ ಚೇಂಜ್

    ಸಚಿನ್ ಪುತ್ರ ಅರ್ಜುನ್ ಬಂದಿದ್ದಾರಾ ಬೆಂಗಳೂರಿಗೆ..?

    ವಿವಿಎಸ್​ ಲಕ್ಷ್ಮಣ್​ಗೆ ಮುಂದೆ ಬಿಗ್​ ಟಾಸ್ಕ್​..!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸೋಲಿನ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ 20 ಯುವ ಆಲ್​​​​​​​​ರೌಂಡರ್​ಗಳಿಗೆ ಬೆಂಗಳೂರಿನಲ್ಲಿರುವ ನ್ಯಾಷನಲ್​ ಕ್ರಿಕೆಟ್​ ಅಕಾಡೆಮಿ (NCA) ಗೆ ಬರುವಂತೆ ಕರೆ ನೀಡಿದೆ. ಮೂರು ವಾರಗಳ ಶಿಬಿರಕ್ಕೆ ಮುಂಬೈ ಇಂಡಿಯನ್ಸ್​ ಆಲ್​ ರೌಂಡರ್​ ಅರ್ಜನ್​ ತೆಂಡೂಲ್ಕರ್​ ಸೇರಿದಂತೆ ಕೆಲ ಯುವ ಆಟಗಾರರಿಗೆ ಬುಲಾವ್ ನೀಡಿದೆ.

ಇದನ್ನು ಓದಿ: ವೆಸ್ಟ್​ ಇಂಡೀಸ್​​ ವಿರುದ್ಧ ಸೀರೀಸ್​​.. ಟೀಂ ಇಂಡಿಯಾಗೆ ಬಿಗ್​ ಶಾಕ್​​.. ಮತ್ತೆ ಕೈಕೊಟ್ಟ ಸ್ಟಾರ್​ ಪ್ಲೇಯರ್​!

ಮುಂದಿನ ಕ್ರಿಕೆಟ್​ ಭವಿಷ್ಯದಲ್ಲಿ ಹಾರ್ದಿಕ್​ ಪಾಂಡ್ಯ ರಿಪ್ಲೇಸ್​ಮೆಂಟ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರರನ್ನ ಗುರುತಿಸಿ ಈಗ ಬಿಸಿಸಿಐ ಆಹ್ವಾನ ನೀಡಿದೆ. ಅರ್ಜುನ್ ತೆಂಡುಲ್ಕರ್, ಹರ್ಷಿತ್ ರಾಣಾ ಒಳಗೊಂಡ ಆಟಗಾರರಿಗೆ ಬೆಂಗಳೂರಿಗೆ ಬರುವಂತೆ ಹೇಳಲಾಗಿದೆ. ಭಾರತದ ತಂಡದ ಮಾಜಿ ಆಟಗಾರ ಹಾಗೂ NCA ಆಧ್ಯಕ್ಷ ವಿವಿಎಸ್ ಲಕ್ಷ್ಮಣ್​​​​​​​​​​​​, ಅಂಡರ್-23 ಏಷ್ಯಾಕಪ್​ ದೃಷ್ಟಿಯಲ್ಲಿಟ್ಟುಕೊಂಡು 20 ದಿನ ಅಂದರೆ ಮೂರು ವಾರಗಳ ಕ್ಯಾಂಪ್ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಈ ಕ್ಯಾಂಪ್​ನಲ್ಲಿ ಕೆಲ ಆಲ್​ರೌಂಡರ್​ಗಳಿಗೂ ಕರೆ ನೀಡಲಾಗಿದ್ದು ಅರ್ಜುನ್​ ತೆಂಡೂಲ್ಕರ್​ ಕೂಡ ಒಬ್ಬರಾಗಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಜೂನ್ 7 ರಿಂದ 11ವರೆಗೆ ನಡೆದಿತ್ತು. ಈ ಮೆಗಾ ಟೂರ್ನಿಯಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿದೆ. ಸೋಲು ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್​ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನ ಶುರುವಾಗಿದೆ. ಯುವಕರ ನೇತೃತ್ವದಲ್ಲಿ ಹೊಸ ಟೆಸ್ಟ್ ತಂಡ ಕಟ್ಟಲು ಬಿಸಿಸಿಐ ಪ್ಲಾನ್ ಮಾಡ್ತಿದೆ. ಅದರ ಮುಂದುವರಿದ ಭಾಗವಾಗಿ 20 ಯುವ ಆಟಗಾರರನ್ನು ಕರೆಸಿಕೊಂಡಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

20 ಆಲ್​ ರೌಂಡರ್​ಗಳಿಗೆ BCCI ದಿಢೀರ್ ಬುಲಾವ್; ಕಿಟ್​​ ಜೊತೆಗೆ ಬೆಂಗಳೂರಿಗೆ ಓಡೋಡಿ ಬಂದ್ರು ಕ್ರಿಕೆಟರ್ಸ್..!

https://newsfirstlive.com/wp-content/uploads/2023/06/arjun_tendulkar.jpg

Load More