ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಗುಂಡಿನ ಕಾಳಗ
ಓರ್ವ ಯೋಧ ಹುತಾತ್ಮ, ಇಬ್ಬರಿಗೆ ಗಂಭೀರ ಗಾಯ
ಓರ್ವ ಉಗ್ರನ ಹೊಡೆದುರುಳಿಸಿದ ಭಾರತೀಯ ಸೇನೆ
ಭಾರತೀಯ ಸೇನೆಗೆ ಕಾವಲು ಮತ್ತು ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದ 6 ವರ್ಷದ ಶ್ವಾನ, ಉಗ್ರರ ಗುಂಡೇಟಿಗೆ ಪ್ರಾಣಬಿಟ್ಟಿದೆ. ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಸೇನೆಯನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಭದ್ರತಾ ಪಡೆಯ ರಕ್ಷಣೆಗೆ ಶ್ವಾನ ಮುಂದಾಗಿತ್ತು. ಉಗ್ರರು ಹಾರಿಸಿದ ಗುಂಡು ಶ್ವಾನಕ್ಕೆ ತಗುಲಿ ಸಾವನ್ನಪ್ಪಿದೆ.
ಆರು ವರ್ಷದ ಹೆಣ್ಣು ಲ್ಯಾಬ್ರಡಾರ್ ಕೆಂಟ್ 21st Army Dog Unitನಲ್ಲಿ ಸೇವೆ ಸಲ್ಲಿಸುತ್ತಿತ್ತು. ತನ್ನ ಮಾರ್ಗದರ್ಶಕನನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರಾಣವನ್ನೇ ಅರ್ಪಿಸಿದೆ ಎಂದು ಸೇನಾಪಡೆ ತಿಳಿಸಿದೆ. ಈ ಹಿಂದೆ ಉಗ್ರರನ್ನು ಗುರುತಿಸೋದ್ರಲ್ಲಿ ಮತ್ತು ಹಲವು ಕಾರ್ಯಾಚರಣೆಯಲ್ಲಿ ಕೆಂಟ್ ಭಾಗಿಯಾಗಿತ್ತು.
ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ವಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್.. ರಜೌರಿಯ ನರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ಶುರುವಾಗಿತ್ತು. ಆಗ ಸೇನೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇದೇ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಹತ್ಯೆಯಾಗಿರುವ ಉಗ್ರ ಪಾಕಿಸ್ತಾನ ಮೂಲದವ ಎಂದು ಶಂಕಿಸಲಾಗಿದೆ ಅಂತಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ