ಮಣಿಪುರದಲ್ಲಿ ಹಿಂಸಾಚಾರ ನಿಲ್ಲುವ ಲಕ್ಷಣ ಕಾಣ್ತಿಲ್ಲ
ಒಂದು ಡಜನ್ಗೂ ಹೆಚ್ಚು ಉಗ್ರರ ಸೆರೆ ಹಿಡಿದು ರಿಲೀಸ್
ಸೇನೆಯ ಈ ನಿರ್ಧಾರದ ಹಿಂದಿನ ಅಸಲಿ ಕಥೆ ಏನು?
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲುವ ಯಾವುದೇ ಲಕ್ಷಣ ಕಾಣ್ತಿಲ್ಲ. ನಾಗರಿಕರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ ನಿನ್ನೆ ಬಂಧಿತ 12 ಕೆವೈಕೆಎಲ್ (Kanglei Yawol Kanna Lup) ಉಗ್ರರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಈ ಬಗ್ಗೆ ಸೇನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಸುಮಾರು ಒಂದು ಡಜನ್ಗೂ ಹೆಚ್ಚು KYKL ಭಯೋತ್ಪಾದಕರು ಇಥಮ್ ಗ್ರಾಮದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ನಮ್ಮ ಸೇನೆ ಉಗ್ರರ ಗುಂಪಿನ ಮೇಲೆ ದಾಳಿ ಮಾಡಿತ್ತು. ಒಂದಷ್ಟು ಸಂಘರ್ಷದ ಬಳಿಕ ಸೇನೆ ಅವರನ್ನು ಸೆರೆ ಹಿಡಿದಿತ್ತು. ಈ ವೇಳೆ ಗ್ರಾಮದ ಮಹಿಳೆಯರು, ಸ್ಥಳೀಯ ನಾಯಕರ ನೇತೃತ್ವದಲ್ಲಿ ಸುಮಾರು 1500ಕ್ಕೂ ಹೆಚ್ಚು ಜನ ನಮ್ಮನ್ನು ಸುತ್ತುವರಿದು ಘರ್ಷಣೆಗೆ ಮುಂದಾಗಿತ್ತು.
ಈ ಉಗ್ರರು ಶಸ್ತ್ರಾಸ್ತ್ರಗಳನ್ನು ಅಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಸೇನೆಯು ಅದನ್ನು ತೆಗೆದುಕೊಳ್ಳಲು ಮುಂದಾದಾಗ ಅವರು ನಮ್ಮನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಸೇನೆ ಮಹತ್ವದ ಹೆಜ್ಜೆ ಇಟ್ಟಿದ್ದರೆ, ಭಾರೀ ಸಾವು-ನೋವುಗಳು ಸಂಭವಿಸುತ್ತಿದ್ದವು. ಆದರೆ ನಾಗರಿಕರಿಗೆ ಯಾವುದೇ ಸಮಸ್ಯೆ ಆಗಬಾರದು ಅನ್ನೋ ಉದ್ದೇಶಕ್ಕೆ 12 ಉಗ್ರರನ್ನು ಬಿಡಬೇಕಾಯಿತು ಎಂದು ತಿಳಿಸಿದೆ.
ನಮ್ಮ ಪಡೆಗಳು ಮತ್ತು ಮಾನವ ರಹಿತ ವಿಮಾನಗಳು (ಯುಎವಿ) ಈ ಪ್ರದೇಶದಲ್ಲಿ ನಿಗಾ ಇರಿಸುತ್ತಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತೀವ್ರ ನಿಗಾ ಇರಿಸಲಾಗಿದೆ. ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಜಂಟಿ ಕಾರ್ಯಾಚರಣೆಗಳು ನಡೆಯುತ್ತಿವೆ. ಆರಂಭಿಕ ಶೋಧ ಕಾರ್ಯಾಚರಣೆ ಸಮಯದಲ್ಲಿ, ಭದ್ರತಾ ಪಡೆಗಳು INSAS ಲೈಟ್ ಮೆಷಿನ್ ಗನ್ ಮತ್ತು INSAS ರೈಫಲ್ ವಶಪಡಿಸಿಕೊಂಡಿದ್ದಾರೆ ಅಂತಾ ಇನ್ನೊಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಮಣಿಪಾಲ್ನಲ್ಲಿ ಆಗ್ತಿರೋದೇನು..?
ಅಲ್ಲಿನ ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ.
ಮಣಿಪುರದ ಕಣಿವೆಗಳಲ್ಲಿ ವಾಸಿಸುತ್ತಿರುವ ಮೇಟಿಗಳ ಸಂಖ್ಯೆ ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟಿದೆ. ಅಲ್ಲಿರುವ ಪ್ರಸ್ತುತ ಕಾನೂನು ಪ್ರಕಾರ, ಈ ಮೇಟಿ ಜನಾಂಗ ಬುಡಕಟ್ಟು ಸಮುದಾಯವಲ್ಲದ ಕಾರಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಹೀಗಿರುವಾಗ ತಮಗೆ ಎಸ್ಟಿ ಸ್ಥಾನಮಾನ ನೀಡುವಂತೆ ಈ ಸಮುದಾಯ ಆಗ್ರಹಿಸಿಕೊಂಡು ಬಂದಿದೆ. ಒಂದು ವೇಳೆ ಎಸ್ಟಿ ಸ್ಥಾನಮಾನ ನೀಡಿದರೆ, ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಅದಕ್ಕೆ ಮೇಟಿಗಳಿಗೆ ST ಸ್ಥಾನಮಾನ ನೀಡುವುದನ್ನು ಆದಿವಾಸಿ ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.
ಮಣಿಪುರ ಬಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಈ ಸಮುದಾಯದ ಪ್ರತಿಭಟನೆ ನೇತೃತ್ವ ವಹಿಸಿಕೊಂಡಿತ್ತು. ಅದರಂತೆ ಮೊನ್ನೆ ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್’ ಹೆಸರಿನಲ್ಲಿ ಪ್ರತಿಭಟನೆ ನಡೆಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ