Advertisment

ಗಡಿಯಲ್ಲಿ ಪಾಕ್, ಚೀನಾಕ್ಕೆ ತಕ್ಕ ಉತ್ತರ ನೀಡಲು ಬಿಗ್ ಪ್ಲಾನ್​.. 400 ಹೊವಿಟ್ಜರ್‌, ಫಿರಂಗಿ ಖರೀದಿಗೆ ಸೇನೆಯಿಂದ ಪ್ರಸ್ತಾವನೆ

author-image
Bheemappa
Updated On
ಗಡಿಯಲ್ಲಿ ಪಾಕ್, ಚೀನಾಕ್ಕೆ ತಕ್ಕ ಉತ್ತರ ನೀಡಲು ಬಿಗ್ ಪ್ಲಾನ್​.. 400 ಹೊವಿಟ್ಜರ್‌, ಫಿರಂಗಿ ಖರೀದಿಗೆ ಸೇನೆಯಿಂದ ಪ್ರಸ್ತಾವನೆ
Advertisment
  • ಹೊವಿಟ್ಜರ್‌, ಫಿರಂಗಿಗಳನ್ನ ಯಾವ ದೇಶದಿಂದ ಸೇನೆ ಖರೀದಿಸುತ್ತಿದೆ?
  • ಫಿರಂಗಿಗಳಲ್ಲಿ ಧನುಷ್, ಶರಂಗ್, ಅಲ್ಟ್ರಾ ಲೈಟ್ ಬಂದೂಕು ಇರಲಿವೆ
  • ಪಾಕ್, ಚೀನಾಕ್ಕೆ ತಕ್ಕ ಉತ್ತರ ನೀಡಲು ಸೇನೆಯಿಂದ ಬಿಗ್ ಪ್ಲಾನ್..!

ನವದೆಹಲಿ: ಸ್ವದೇಶಿಯವಾಗಿ ನಿರ್ಮಿಸಿದ ಹೊಸ ತಲೆಮಾರಿನ 400 ಹೊವಿಟ್ಜರ್‌ ಮತ್ತು ಬಂದೂಕ್​ಗಳನ್ನ ಹೊಂದಿದ ಫಿರಂಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತೀಯ ಸೇನೆ ಸದ್ಯದಲ್ಲೇ ಟೆಂಡರ್ ಕರೆಯಲಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

Advertisment

ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಲಾದ ಹೊವಿಟ್ಜರ್‌ ಮತ್ತು ಫಿರಂಗಿಗಳನ್ನು ಖರೀದಿಸಲು ಆರ್ಮಿ ಇಚ್ಚೆ ವ್ಯಕ್ತಪಡಿಸಿದೆ. ಹೀಗಾಗಿ ಸ್ಥಳೀಯ ರಕ್ಷಣಾ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಂಪನಿಗಳಿಗೆ ಉತ್ತೇಜನ ನೀಡಲು ಸೇನೆ ಈ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು 750 ಮಿಲಿಯನ್ ರೂಪಾಯಿಗಳ ಒಪ್ಪಂದ ಇದಾಗಿದ್ದು ಯುದ್ಧ ವ್ಯವಸ್ಥೆಗಳ ವಸ್ತುಗಳನ್ನು ಖರೀದಿಸುವ ಬೃಹತ್ ಪ್ರಯತ್ನದ ಭಾಗವಾಗಿ ಭಾರತೀಯ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇವು ಹೊಸ ಟೆಕ್ನಾಲಾಜಿ ಹೊಂದಿದ್ದು ಸೇನೆ ಸುಲಭ ರೀತಿಯಲ್ಲಿ ಉಪಯೋಗಿಸುವಂತೆ ತಯಾರಿಸಲಾಗಿದೆ ಎಂದು ತಿಳಿದು ಬಂದಿದೆ.

[caption id="attachment_21012" align="alignnone" width="800"]publive-image ಫಿರಂಗಿ[/caption]

ಇನ್ನು ಭಾರತದ ಗಡಿಯಲ್ಲಿ ಚೀನಾ, ಪಾಕ್​ ಪದೇ ಪದೇ ಕಾಲು ಕೆದರಿ ಜಗಳಕ್ಕೆ ಬರುತ್ತಿವೆ. ಅಲ್ಲದೇ ಎತ್ತರದ ಪ್ರದೇಶಗಳಲ್ಲಿ ಉಗ್ರರು ಕುಳಿತು ದಾಳಿ ಮಾಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಈ ಫಿರಂಗಿಗಳಿಂದ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಪ್ಲಾನ್ ಮಾಡಿದೆ. ಫಿರಂಗಿಗಳಲ್ಲಿ ಧನುಷ್, ಶರಂಗ್, ಅಲ್ಟ್ರಾ ಲೈಟ್ ಹೊವಿಟ್ಜರ್ (ULH) ಮತ್ತು K-9 ವಜ್ರ ಎನ್ನುವ ಸ್ವಯಂ ಚಾಲಿತ ಬಂದೂಕುಗಳನ್ನು ಒಳಗೊಂಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment