newsfirstkannada.com

ಆಸ್ಟ್ರೇಲಿಯಾವನ್ನು ಕಾಡುವ ಭಾರತದ ಸ್ಟಾರ್​​ ಆಟಗಾರರನ್ನು ಹೆಸರಿಸಿದ ಆರೋನ್​ ಫಿಂಚ್​​!

Share :

05-06-2023

    ಆಸ್ಟ್ರೇಲಿಯಾಗೆ ಮಾಜಿ ಕ್ಯಾಪ್ಟನ್​​ ಆರೋನ್​ ಫಿಂಚ್​ ಎಚ್ಚರಿಕೆ

    ಟೀಂ ಇಂಡಿಯಾದ ಈ ಇಬ್ಬರು ಪ್ಲೇಯರ್ಸ್​ ಡೇಂಜರ್ಸ್​- ಫಿಂಚ್​​​

    ಆಸ್ಟ್ರೇಲಿಯಾಗೆ ಕಾಡುವ ಭಾರತದ ಆಟಗಾರರು ಯಾರು..?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ. ಜೂನ್​​ 7ನೇ ತಾರೀಕಿನಿಂದ ನಡೆಯೋ ಈ ಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ? ಎಂಬ ಚರ್ಚೆಗಳು ಜೋರಾಗಿವೆ. ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಮಾಜಿ ಕ್ಯಾಪ್ಟನ್​ ಆರೋನ್​​ ಫಿಂಚ್​​​ ಎಚ್ಚರಿಕೆ ನೀಡಿದ್ದಾರೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಅಪಾಯವನ್ನುಂಟು ಮಾಡೋ ಇಬ್ಬರು ಭಾರತದ ಆಟಗಾರರನ್ನು ಹೆಸರಿಸಿದ್ದಾರೆ.

ಈ ಸಂಬಂಧ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾತಾಡಿದ ಆರೋನ್ ಫಿಂಚ್, ಭಾರತದ ಈ ಇಬ್ಬರು ವೇಗಿಗಳು ಆಸ್ಟ್ರೇಲಿಯಾ ತಂಡವನ್ನು ಕಾಡಬಹುದು. ಟೀಂ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇಬ್ಬರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರಿಗೆ ಇಡೀ ಆಸ್ಟ್ರೇಲಿಯಾ ತಂಡವನ್ನೇ ಒತ್ತಡಕ್ಕೆ ಸಿಲುಕಿಸೋ ಸಾಮರ್ಥ್ಯ ಇದೆ ಎಂದರು.

ಸಿರಾಜ್​ ಬೌಲಿಂಗ್​ಗೆ ಬ್ಯಾಟಿಂಗ್​ ಮಾಡುವುದು ಕಷ್ಟ. ಯಾವುದೇ ಮ್ಯಾಚ್​ ಇರಲಿ ಬ್ಯಾಟ್ಸ್​​ಮನ್​​ ಯಾರೇ ಆಗಿರಲಿ ಸಿರಾಜ್​​ಗೆ ಹಿಡಿತ ಸಾಧಿಸುವಷ್ಟು ಕ್ಯಾಪಸಿಟಿ ಇದೆ. ಇನ್ನು ಶಮಿ ಫಾರ್ಮ್ ನಂಬಲು ಅಸಾಧ್ಯ ಎಂದರು.

ಟೀಂ ಇಂಡಿಯಾವನ್ನು ರೋಹಿತ್​​ ಶರ್ಮಾ ಮುನ್ನಡೆಸಿದರೆ, ಆಸ್ಟ್ರೇಲಿಯಾ ತಂಡ ಪ್ಯಾಟ್​​ ಕಮಿನ್ಸ್ ನಾಯಕತ್ವದಲ್ಲೇ ಕಣಕ್ಕಿಳಿಯಲಿದೆ. ಎರಡು ತಂಡಗಳು ಚಾಂಪಿಯನ್​​​ ಪಟ್ಟಕ್ಕಾಗಿ ಕಾದಾಡಲಿದ್ದು, ಇಂಗ್ಲೆಂಡ್​​ನ ಓವರ್​ ಕ್ರಿಕೆಟ್​ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಆಸ್ಟ್ರೇಲಿಯಾದ ವಿರುದ್ಧದ ಟೀಂ ಇಂಡಿಯಾ ಹೀಗಿದೆ..!

ರೋಹಿತ್ ಶರ್ಮಾ(ನಾಯಕ), ಶುಭ್ಮನ್​​ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಯ್‌ದೇವ್ ಉನಾದ್ಕಟ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಟ್ರೇಲಿಯಾವನ್ನು ಕಾಡುವ ಭಾರತದ ಸ್ಟಾರ್​​ ಆಟಗಾರರನ್ನು ಹೆಸರಿಸಿದ ಆರೋನ್​ ಫಿಂಚ್​​!

https://newsfirstlive.com/wp-content/uploads/2023/06/Test-Team-India.jpg

Load More