newsfirstkannada.com

ಶಿವಮೊಗ್ಗದಲ್ಲಿ ಅನಾಮಧೇಯ ಬಾಕ್ಸ್ ಇಟ್ಟ ಓರ್ವನ ಬಂಧನ​; ಕಬ್ಬಿಣದ ಬಾಕ್ಸ್‌ನಲ್ಲಿ ಏನಿತ್ತು?

Share :

06-11-2023

    ಸ್ಥಳೀಯ ಆಟೋ ಚಾಲಕನಿಂದ ಬಾಕ್ಸ್‌ ಇರೋ ಬಗ್ಗೆ ಮಾಹಿತಿ

    ಬಾಂಬ್ ನಿಷ್ಕ್ರಿಯ ದಳದ ಎಕ್ಸ್‌ರೇನಲ್ಲಿ ಪತ್ತೆಯಾದ ವಸ್ತು ಯಾವುದು?

    ಬಾಂಗ್ಲಾದೇಶದಿಂದ ಈ ಬಾಕ್ಸ್​ ಬಂಧಿರೋದು ನಿಜಾನಾ?

ಶಾಂತವಾಗಿರೋ ಮಲೆನಾಡಿನಲ್ಲಿ ಅದೆರಡು ಬಾಕ್ಸ್ ಕಳೆದ ಎರಡು ದಿನಗಳಿಂದ ಭಾರೀ ಭಯ ಹುಟ್ಟಿಸಿತ್ತು. ಸಿಟಿಯ ಮಧ್ಯದಲ್ಲಿ ಇದ್ದ ಪೆಟ್ಟಿಗೆಗಳಲ್ಲಿ ಬಾಂಬ್ ಇರೋ ಶಂಕೆ ವ್ಯಕ್ತವಾಗಿತ್ತು. ರಾತ್ರಿಯಿಡೀ ಬಾಂಬ್ ನಿಷ್ಟ್ರಿಯದಳ ಕಾರ್ಯಾಚರಣೆ ನಡೆಸ್ತು. ಮಳೆಯ ಮಧ್ಯೆದಲ್ಲೂ ಬಾಂಬ್‌ ಇದೆಯೋ? ಇಲ್ಲವೋ? ಪೆಟ್ಟಿಗೆಯೊಳಗೆ ಏನಿದೆ ಎಂಬ ಭೀತಿಯ ಜೊತೆಗೆ ಕೌತುಕವೂ ಹೆಚ್ಚಾಗಿತ್ತು.

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಾಂಬ್ ನಿಷ್ಕ್ರಿಯದಳ ಆ್ಯಕ್ಟಿವ್ ಆಗಿತ್ತು. ಎಲ್ಲೆಲ್ಲೂ ಸರ್ಚಿಂಗ್‌. ಮಳೆಯ ನಡುವೆಯೂ ಹುಡುಕಾಟ. ರಾತ್ರಿಯಿಡೀ ಕಾರ್ಯಾಚರಣೆ ಜೋರಾಗಿತ್ತು. ಇಷ್ಟೆಲ್ಲಾ ಸಾಹಸ ನಡೆಯೋಕೆ ಕಾರಣವಾಗಿದ್ದು ಇವೆರಡು ಬಾಕ್ಸ್‌.

ಶಿವಮೊಗ್ಗ ರೈಲ್ವೆನಿಲ್ದಾಣದಲ್ಲಿ ಅನಾಮಧೇಯ ಬಾಕ್ಸ್ ಪತ್ತೆ

ಶಿವಮೊಗ್ಗ ರೇಲ್ವೇ ನಿಲ್ದಾಣ ಅಂದ್ರೆ ಅದು ಜನನಿಬಿಡ ಪ್ರದೇಶ. ಇಲ್ಲಿ ಸಾವಿರಾರು ಪ್ರಯಾಣಿಕರು ನಿತ್ಯ ಇದೇ ರೈಲ್ವೇ ಸ್ಟೇಷನ್‌ನಿಂದ ಪ್ರಯಾಣಿಸ್ತಾರೆ. ಜೊತೆಗೆ ಅದೆಷ್ಟೋ ರೈಲುಗಳು ಓಡಾಟವಿರುತ್ತೆ. ಇಂತಹ ಜನರ ಓಡಾಟವಿರೋ ಪ್ರದೇಶದಲ್ಲಿ ಜನರ ಕಣ್ಣಿಗೆ ಬಿದ್ದಿದ್ದ ಎರಡು ಬಾಕ್ಸ್‌ಗಳು ಭಾರೀ ಅನುಮಾನಕ್ಕೆ ಕಾರಣವಾಗಿದ್ವು. ಶಿವಮೊಗ್ಗ ರೇಲ್ವೇ ನಿಲ್ದಾಣದ ಪಾರ್ಕಿಂಗ್ ಪ್ಲೇಸ್‌ನಲ್ಲಿ ದೊಡ್ಡ ಗಾತ್ರದ ಎರಡು ಬಾಕ್ಸ್‌ಗಳು ಬಿದ್ದಿದ್ದವು. ಈ ಬಾಕ್ಸ್‌ಗಳ ಮೇಲೆ ಫುಡ್ ಗ್ರೈನ್ಸ್ ಅಂಡ್ ಶುಗರ್ಸ್ ಅಂತ ಬರೆಯಲಾಗಿದ್ದು, ಬಾಂಗ್ಲಾದೇಶದಿಂದ ಬಂದಿರೋ ಶಂಕೆ ವ್ಯಕ್ತವಾಗಿತ್ತು.

ಇನ್ನೂ ಸ್ಥಳೀಯ ಆಟೋ ಚಾಲಕನಿಂದ ಬಾಕ್ಸ್‌ ಇರೋ ಬಗ್ಗೆ ಮಾಹಿತಿ ಬಂದ ತಕ್ಷಣ ಶಿವಮೊಗ್ಗ ಪೊಲೀಸರು ಹಾಗೂ RTF ಪೊಲೀಸರು ಅಲರ್ಟ್ ಆಗಿದ್ರು. ಬಾಕ್ಸ್‌ಗಳಲ್ಲಿ ಬಾಂಬ್ ಇರೋ ಅನುಮಾನ ದಟ್ಟವಾಗಿತ್ತು. ಹೀಗಾಗಿ ನಿನ್ನೆ ಮಧ್ಯಾಹ್ನದಿಂದಲೇ ಈ ಪ್ರದೇಶದಲ್ಲಿ ಜನರು ಓಡಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ಬಾಕ್ಸ್‌ಗಳಿರೋ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನ ಹಾಕಿ ಪೊಲೀಸರು ಭದ್ರತೆ ಕೈಗೊಂಡಿದ್ರು. ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಾಂಬ್ ಸ್ಕ್ವಾಡ್‌ ಕೂಡಾ ಎಂಟ್ರಿ ಕೊಟ್ಟಿತ್ತು.

ಬೆಂಗಳೂರಿಂದ 8 ಜನರ ಬಾಂಬ್ ಪತ್ತೆ ತಂಡ ಎಂಟ್ರಿ ಕೊಟ್ಟು ರಾತ್ರಿಯಿಡೀ ಕಾರ್ಯಾಚರಣೆಯನ್ನೂ ನಡೆಸ್ತು. ಆದರೆ, ಮಳೆರಾಯನ ಕಾಟದಿಂದ ಶೋಧಕ್ಕೆ ಆಗಾಗ ಅಡ್ಡಿ ಉಂಟಾಗುತ್ತಿತ್ತು. ಇದರ ಮಧ್ಯೆಯೇ ಬಾಂಬ್ ನಿಷ್ಕ್ರಿಯ ದಳ ರಾತ್ರಿಯಿಡಿ ಕಾರ್ಯಾಚರಣೆ ನಡೆಸ್ತು. ಆಗಾಗ ಸಾಧನಗಳು ಕೈ ಕೊಡುತ್ತಿದ್ದಿದ್ದು, ಬಾಂಬ್ ಪತ್ತೆ ವಿಳಂಬಕ್ಕೆ ಕಾರಣವಾಗಿತ್ತು. ಇನ್ನೂ ಬಾಂಬ್ ಆತಂಕ ಒಂದ್ಕಡೆಯಾದ್ರೆ, ಬಾಂಬ್​ ಸ್ಕ್ವಾಡ್​ ನೋಡಲು ನೂರಾರು ಜನರು ಸ್ಥಳದಲ್ಲಿ ಜಮಾವಣೆಯಾಗಿತ್ತು. ಇನ್ನೂ ಡಿಟೋನೇಟರ್ ಬಳಸಿ ಕಬ್ಬಿಣದ ಬಾಕ್ಸ್‌ಗೆ ಹಾಕಿದ್ದ ಬೀಗಗಳನ್ನ ತೆಗೆಯಲಾಯ್ತು..

ಕಬ್ಬಿಣದ ಬಾಕ್ಸ್‌ನೊಳಗಿನ ಚೀಲದೊಳಗಿತ್ತು ಪೌಡರ್‌!

ಬಾಂಬ್ ನಿಷ್ಕ್ರಿಯ ದಳದ ಎಕ್ಸ್‌ರೇನಲ್ಲಿ ಯಾವುದೇ ವಸ್ತು ಪತ್ತೆಯಾಗದ ಕಾರಣ ಎರಡೂ ಬಾಕ್ಸ್‌ಗಳನ್ನ ಸ್ಫೋಟಗೊಳಿಸಲಾಯ್ತು. ತಡರಾತ್ರಿ 2.40ಕ್ಕೆ ಮೊದಲನೆಯ ಬಾಕ್ಸ್ ಸ್ಫೋಟ ಮಾಡಿದ್ರೆ, 3.24ಕ್ಕೆ ಮತ್ತೊಂದು ಬಾಕ್ಸ್‌ನ ಬ್ಲಾಸ್ಟ್ ಮಾಡಲಾಯ್ತು. ಈ ವೇಳೆ ಪ್ರತಿ ಟ್ರಂಕ್‌ನಲ್ಲಿ ತಲಾ ಎರಡು ಚೀಲದಲ್ಲಿ ಪೌಡರ್‌ ರೀತಿಯ ವಸ್ತು ಪತ್ತೆಯಾಗಿದೆ. ಎರಡೂ ಟ್ರಂಕ್‌ನಲ್ಲಿ ನಾಲ್ಕು ಚೀಲಗಳಲ್ಲಿ ಪೇಪರ್‌ಗಳ ಮೂಲಕ ಪೌಡರ್ ರೀತಿಯ ವಸ್ತುವನ್ನ ಸುತ್ತಿ ಇಡಲಾಗಿತ್ತು. ಇದೀಗ ಬಾಕ್ಸ್‌ನಲ್ಲಿ ಸಿಕ್ಕ ವಸ್ತುವನ್ನ ಸ್ಫೋಟಕ್ಕೆ ಬಳಸಲು ಕೊಂಡೊಯ್ಯಲಾಗುತ್ತಿತ್ತಾ ಎಂಬ ಅನುಮಾನ ಹುಟ್ಟಿದೆ. ಹೀಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಪೌಡರ್‌ನ ರವಾನಿಸುವ ಸಾಧ್ಯತೆ ಇದೆ.

ಬಾಕ್ಸ್ ಇಟ್ಟವರ ಪೈಕಿ ತಿಪಟೂರಿನಲ್ಲಿ‌ ಓರ್ವನ ಬಂಧನ

ಅನಾಮಧೇಯ ಬಾಕ್ಸ್‌ ಪತ್ತೆಯಾಗ್ತಿದ್ದಂತೆ ಶಿವಮೊಗ್ಗದ ಜಯನಗರ ಪೊಲೀಸರು ಅಲರ್ಟ್ ಆಗಿದ್ರು. ಈ ಬಾಕ್ಸ್‌ಗಳನ್ನ ತಂದು ಇಟ್ಟವರ್ಯಾರು? ಇಲ್ಲಿ ಇಟ್ಟು ಹೋಗಿದ್ದೇಕೆ ಅಂತ ಕಿಡಿಗೇಡಿಗಳ ಪತ್ತೆಗೆ ಬಲೆಬೀಸಿದ್ರು. ಈ ವೇಳೆ ಘಟನಾ ಸ್ಥಳಕ್ಕೆ ಓಮಿನಿ ಕಾರೊಂದು ಬಂದು ಹೋಗಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣವೇ ಆರೋಪಿಯೊಬ್ಬ ತಿಪಟೂರಿನಲ್ಲಿ ಇರೋದು ಗೊತ್ತಾಗಿತ್ತು. ಖಚಿತ ಮಾಹಿತಿ ಮೇರೆಗೆ ಬಾಕ್ಸ್‌ ಇಟ್ಟು ಹೋಗಿದ್ದ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.

ಒಟ್ಟಾರೆ, ಆ ಬಾಕ್ಸ್‌ನಲ್ಲಿ ಇರೋದೇನು? ಬಾಕ್ಸ್‌ ಇಟ್ಟಿರೋದೇಕೆ? ಅದರಲ್ಲಿ ಏನಿದೆ ಎಂಬ ಕೌತುಕ. ಆತಂಕ ಹೆಚ್ಚಾಗಿತ್ತು. ಇದೀಗ ಎರಡು ಕಬ್ಬಿಣದ ಬಾಕ್ಸ್‌ನಲ್ಲಿ ಸ್ಫೋಟಕವಿಲ್ಲ ಎಂಬ ಸಮಾಧಾನಕರ ಮಾಹಿತಿ ಸಿಕ್ಕಿದೆ. ಆದರೆ, ಅದರಲ್ಲಿರೋ ಪೌಡರ್ ರೀತಿಯ ವಸ್ತು ಏನು ಅನ್ನೋದೇ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗದಲ್ಲಿ ಅನಾಮಧೇಯ ಬಾಕ್ಸ್ ಇಟ್ಟ ಓರ್ವನ ಬಂಧನ​; ಕಬ್ಬಿಣದ ಬಾಕ್ಸ್‌ನಲ್ಲಿ ಏನಿತ್ತು?

https://newsfirstlive.com/wp-content/uploads/2023/11/Shivamogga-Bomb.jpg

Load More