newsfirstkannada.com

ಚಂದ್ರಯಾನ-3 ಬಗ್ಗೆ ವ್ಯಂಗ್ಯ; ನಟ ಪ್ರಕಾಶ್​ ರಾಜ್​ ಅರೆಸ್ಟ್​ ಮಾಡಿ ಎಂದು ಆಗ್ರಹ

Share :

23-08-2023

    ಚಂದ್ರಯಾನ-3 ಮಿಷನ್​​ ಬಗ್ಗೆ ವ್ಯಂಗ್ಯಭರಿತ ಟ್ವೀಟ್​​

    ಬಹುಭಾಷಾ ನಟ ಪ್ರಕಾಶ್​​ ರಾಜ್​​​ ಬಂಧನಕ್ಕೆ ಆಗ್ರಹ

    ಸೋಷಿಯಲ್​ ಮೀಡಿಯಾದಲ್ಲಿ #ArrestPrakashRaj​ ಟ್ರೆಂಡ್​​

ಬೆಂಗಳೂರು: ನಿಜವಾಗಲೂ ಭಾರತಕ್ಕೆ ಇಂದು ಐತಿಹಾಸಿಕ ದಿನ. ಈ ಹೆಮ್ಮೆಯ ದಿನಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಇಡೀ ದೇಶಾದ್ಯಂತ ಜನ ಚಂದ್ರಯಾನ-3 ಯಶಸ್ವಿಯಾಗಲಿ‌ ಎಂದು ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಇಸ್ರೋ ತಂಡದ ಪರಿಶ್ರಮಕ್ಕೆ ಫಲ ಸಿಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಇನ್ನೊಂದೆಡೆ ಚಂದ್ರಯಾನ-3 ಮಿಷನ್​​ ಬಗ್ಗೆ ವ್ಯಂಗ್ಯಭರಿತ ಟ್ವೀಟ್​​ ಮಾಡಿದ್ದ ಬಹುಭಾಷಾ ನಟ ಪ್ರಕಾಶ್​​ ರಾಜ್​​​ ಅವರನ್ನು ಬಂಧಿಸಿ ಎಂದು ಸೋಷಿಯಲ್​​ ಮೀಡಿಯಾದಲ್ಲಿ ಕ್ಯಾಂಪೇನ್​ ಮಾಡಲಾಗುತ್ತಿದೆ.

ಪ್ರಕಾಶ್​ ರಾಜ್​ ವಿರುದ್ಧ ಕೇಸ್​​

ಚಂದ್ರಯಾನ-3 ಬಗ್ಗೆ ಕುಹಕವಾಡಿದ್ದ ನಟ ಪ್ರಕಾಶ್‌ ರಾಜ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಪ್ರಕಾಶ್‌ ರಾಜ್‌ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಶ್ರೀರಾಮ ಸೇನೆ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶ್ರೀರಾಮ ಸೇನೆ ಮುಖಂಡ ಶಿವಾನಂದ ಗಾಯಕವಾಡ್ ದೂರು ನೀಡಿದ್ದು, ಪ್ರಕಾಶ್ ರಾಜ್ ಬಂಧನಕ್ಕೆ ಆಗ್ರಹಿಸಿದ್ದಾರೆ.

ಇನ್ನು, ಈ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದಲ್ಲಿ ಪ್ರಕಾಶ್​ ರಾಜ್​ ಬಂಧನಕ್ಕೆ ಒತ್ತಾಯಿಸಿ ಹಲವರು ಪೋಸ್ಟ್​ ಹಾಕಿದ್ದಾರೆ. ಹಿಂದೂ ಕಾರ್ಯಕರ್ತ ಅರುಣ್​ ಯಾದವ್​ ಎಂಬಾತ ತನ್ನ ಟ್ವಿಟರ್​​ನಲ್ಲಿ (X) ಬಂಧಿಸಿ ಎಂದು ಟ್ವೀಟ್​ ಮಾಡಿದ್ದಾರೆ. ಪ್ರಕಾಶ್​​ ರಾಜ್​ ದೇಶದ ಹೆಮ್ಮೆಯ ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ವಿಜ್ಞಾನಿಗಳಿಗೆ ಅಪಮಾನ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಹೀಗಾಗಿ ಕೂಡಲೇ ಅರೆಸ್ಟ್​ ಮಾಡಿ ಎಂದು ಆಗ್ರಹಿಸಲಾಗಿದೆ.

ಚಂದ್ರಯಾನ-3 ಬಗ್ಗೆ ವ್ಯಂಗ್ಯ; ನಟ ಪ್ರಕಾಶ್​ ರಾಜ್​ ಅರೆಸ್ಟ್​ ಮಾಡಿ ಎಂದು ಆಗ್ರಹ

https://newsfirstlive.com/wp-content/uploads/2023/08/Prakash-Raj.jpg

Load More