newsfirstkannada.com

ಇನ್​ಸ್ಟಾ ರೀಲ್ಸ್​ಗಾಗಿ ನಕಲಿ ಗನ್​ ಹಿಡಿದು ಶೋ ಕೊಡುತ್ತಿದ್ದ ಯುವಕ ಅರೆಸ್ಟ್​​.. ಯಾರು ಈ ಖತರ್ನಾಕ್​​?

Share :

Published July 1, 2024 at 7:24pm

    ರೀಲ್ಸ್​ ಸ್ಟಾರ್​ ಅರುಣ್ ಕಟಾರೆ ಶೋನಿಂದ ಬೆಚ್ಚಿ ಬಿದ್ದ ಸಾರ್ವಜನಿಕರು

    ರಸ್ತೆಯಲ್ಲಿ ರೀಲ್ಸ್ ಶೋಕಿ ಮಾಡಲು ಹೋಗಿ ಜೈಲು ಪಾಲಾದ ಯುವಕ

    ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ ಈತನ ವಿಡಿಯೋಸ್

ಬೆಂಗಳೂರು: ಈಗಂತೂ ಸಾಕಷ್ಟು ಯುವಕ ಹಾಗೂ ಯುವತಿಯರು ತನ್ನ ರೀಲ್ಸ್​ಗೆ ಹೆಚ್ಚಿನ ಲೈಕ್ಸ್​ ಹಾಗೂ ವೀವ್ಸ್​​ಗಳು ಬರಲಿ ಎಂದು ಏನೇನೋ ಸರ್ಕಸ್ ಮಾಡುತ್ತಾರೆ. ಹೀಗೆ ಯುವಕನೊಬ್ಬ ರೀಲ್ಸ್ ಶೋಕಿ ಮಾಡಲು ಹೋಗಿ ಜೈಲು ಪಾಲಾಗಿದ್ದಾನೆ.

ಇದನ್ನೂ ಓದಿ: ದೊಡ್ಮನೆಯಿಂದ ಆಚೆ ಬಂದ ಅರ್ಮಾನ್ ಮಲಿಕ್ ​ಹೆಂಡತಿ; ಅಸಲಿ ಕಾರಣ ಬಿಚ್ಚಿಟ್ಟ ಪಾಯಲ್ ಮಲಿಕ್

ಹೌದು, ರಿಲ್ಸ್ ಶೋಗಾಗಿ ಶೋಕಿ ಮಾಡುತ್ತಿದ್ದ ಈತ ಎಕೆ 47 ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿ ಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು. ಹೀಗೆ ಸಿಲಿಕಾನ್​ ಸಿಟಿಯಲ್ಲಿ ಶೋ ಕೊಡಲು ಹೋಗಿದ್ದ ರೀಲ್ಸ್ ಸ್ಟಾರ್ ಈಗ ಜೈಲು ಸೇರಿದ್ದಾನೆ.

ಅರುಣ್ ಕಟಾರೆ ಎಂಬಾತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ. ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋ ಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ.

View this post on Instagram

A post shared by Arun Kathare (@arun_kathare)

ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು, ಈತನ ರೀಲ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​ಸ್ಟಾ ರೀಲ್ಸ್​ಗಾಗಿ ನಕಲಿ ಗನ್​ ಹಿಡಿದು ಶೋ ಕೊಡುತ್ತಿದ್ದ ಯುವಕ ಅರೆಸ್ಟ್​​.. ಯಾರು ಈ ಖತರ್ನಾಕ್​​?

https://newsfirstlive.com/wp-content/uploads/2024/07/reels-star.jpg

Load More