ದೆಹಲಿಯ CM ಅರವಿಂದ್ ಕೇಜ್ರಿವಾಲ್ ಮುಖದಲ್ಲಿ ಸಮಾಧಾನ
ಮಗುವಿನ ಆರೋಗ್ಯ ಸುಧಾರಣೆ, ಕೈ ಕಾಲುಗಳಲ್ಲಿ ಚಲನವಲನ ಶುರು
ಆ ಮುದ್ದಾದ ಮಗುವಿಗೆ ಇದ್ದ ಅಂತಹ ಕಾಯಿಲೆಯಾದರೂ ಏನು..?
ಇದೊಂದು ಮನಮಿಡಿಯುವ ಕಥೆ. ಮೊದಲನೇ ಭಾಗದಲ್ಲಿ ನೋವು, ಹತಾಶೆ, ಭಯ ಎಲ್ಲವೂ ಇರುತ್ತೆ. 2ನೇ ಭಾಗದಲ್ಲಿ ಹೊಸ ಇತಿಹಾಸ ಕ್ರಿಯೇಟ್ ಆಗಿಬಿಡುತ್ತೆ. ಪ್ರತಿಯೊಬ್ಬರು ಕೈಜೋಡಿಸಿದರೇ ಎಂತಹ ಸಂಕಷ್ಟವನ್ನು ಗೆಲ್ಲಬಹುದು ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗು ಈಗ ರಿಕವರ್ ಆಗ್ತಿದೆ. ಆ ಮಗುವಿಗೆ 17.5 ಕೋಟಿ ರೂಪಾಯಿ ಇಂಜೆಕ್ಷನ್ ಕೊಡಿಸಲಾಗಿದೆ. ಎಷ್ಟು ಹೇಳಿ ಹದಿನೇಳುವರೆ ಕೋಟಿ ರೂಪಾಯಿಯ ಇಂಜೆಕ್ಷನ್. ಅಷ್ಟಕ್ಕೂ ಆ ಕುಟುಂಬ ಇಷ್ಟೊಂದು ದೊಡ್ಡ ಮೊತ್ತದ ಇಂಜೆಕ್ಷನ್ ಕೊಡಿಸಿದ್ದು ಹೇಗೇ?
ದೆಹಲಿಯ CM ಅರವಿಂದ್ ಕೇಜ್ರಿವಾಲ್ ಮುಖದಲ್ಲೊಂದು ಸಮಾಧಾನವಿತ್ತು. ಕೇವಲ ಅವರ ಮುಖದಲ್ಲಿ ಮಾತ್ರವಲ್ಲ, ಇಡೀ ಕುಟುಂಬದ ಸದಸ್ಯರ ಮುಖದಲ್ಲೂ ಕೂಡ. ಇವರೆಲ್ಲರ ನಿರಾತಂಕಕ್ಕೆ ಕಾರಣ ಈ ಮಗುವಿನ ಚಲನವಲನ.
ಹೌದು, ದೆಹಲಿಯ ಕನವ್ ಜಂಗ್ರಾ. ಒಂದು ವರ್ಷದ 8 ತಿಂಗಳ ಮಗುವಿದು. ಈ ಮಗು ಇಷ್ಟೊಂದು ಖುಷಿಯಿಂದ ಇರಲೇ ಇಲ್ಲ. ಇವ್ರ ಪೋಷಕರು ಕೂಡ. ಇಡೀ ಕುಟುಂಬದ ಮೇಲೆ ಕಾರ್ಮೋಡ ಕವಿದಿತ್ತು.
ಈಗ ಈ ಮಗುವಿನ ಆರೋಗ್ಯ ಸುಧಾರಿಸುತ್ತಿದೆ. ಕೈ ಕಾಲುಗಳ ಚಲನವಲನ ಶುರುವಾಗಿದೆ. ಅದಕ್ಕೆ ಕಾರಣ ಈ ಹದಿನೇಳುವರೆ ಕೋಟಿ ರೂಪಾಯಿಯ ಈ ಇಂಜೆಕ್ಷನ್.
ಹದಿನೇಳುವರೆ ಕೋಟಿ ರೂಪಾಯಿಯ ಇಂಜೆಕ್ಷನ್‌ನ ಒಂದು ಶಾಟ್ ಕೊಡಿಸಿದ ಮೇಲೆ ಈ ಮಗು ಚೇತರಿಸಿಕೊಳ್ತಿದೆ. ಮೊದಲಿನಂತೆ ಇಲ್ಲ. ಕೈಕಾಲುಗಳು ಸ್ವಾಧೀನಪಡೆದುಕೊಂಡಿವೆ. ಇಡೀ ಕುಟುಂಬ ನಿರಾಳವಾಗಿದ್ದು, ಹೊಸದೊಂದು ಇತಿಹಾಸವೇ ಕ್ರಿಯೇಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಮಗುವಿನ ಮನೆಗೆ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿ ಕೊಟ್ಟು, ಪೋಷಕರ ಜೊತೆ ಮಾತುಕತೆ ನಡೆಸಿದರು.
ಅಷ್ಟಕ್ಕೂ ಮಗುವಿಗೆ ಏನಾಗಿತ್ತು?
ಅಂದ್ಹಾಗೇ, ಕನವ್ ಹುಟ್ಟಿ 7 ತಿಂಗಳಾದ್ರೂ ನಡೆಯುತ್ತಿರಲಿಲ್ಲ. ಕೈ ಕಾಲಿನಲ್ಲಿ ಸ್ವಾಧೀನವಿರಲಿಲ್ಲ. ತಂದೆ ಅಮಿತ್‌ಗೆ ಚಿಂತೆ ಶುರುವಾಯ್ತು. ಮಗನಿಗೆ ಆಗಿರುವ ಸಮಸ್ಯೆ ಏನು ಅಂತಾ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿದಾಗ ಇಡೀ ಕುಟುಂಬ ಆಘಾತಕ್ಕಿಡಾಯಿತು. ಯಾಕಂದ್ರೆ, ಕನವ್ ಸ್ಪೈನಲ್ ಮಸ್ಕುಲರ್ ಅರ್ಥೋಫಿ ಅನ್ನೋ ಅಪರೂಪದ ಜೆನೆಟಿಕ್ ಕಾಯಿಲೆಯಿಂದ ಬಳಲುತ್ತಿದ್ದಾನೆ ಅಂತಾ ಹೇಳ್ತಾರೆ. ಕಾಯಿಲೆ ಇದ್ರೆ, ಗುಣಪಡಿಸಬಹುದು. ಒಂದಷ್ಟು ವರ್ಷ ಟ್ರೀಟ್‌ಮೆಂಟ್ ಕೊಡಿಸಿದರೇ ಮಗ ಹುಷಾರಾಗ್ತಾನೆ ಅಂತಾ ಅಂದುಕೊಂಡಿದ್ದ ಪೋಷಕರಿಗೆ ವೈದ್ಯರು ಮತ್ತೊಂದು ಆಘಾತದ ಸುದ್ದಿ ಹೇಳ್ತಾರೆ.
ಇಂಜೆಕ್ಷನ್ 17.5 ಕೋಟಿ ರೂಪಾಯಿ ಫ್ಯಾಮಿಲಿಗೆ ಚಿಂತೆ
ಇಡೀ ದೇಶದಲ್ಲಿ ಕೆಲವೇ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದೆ. ದೆಹಲಿಯಲ್ಲಿ ಪತ್ತೆಯಾದ ಮೊದಲ ಪ್ರಕರಣವಿದು ಅಂತಾ ವೈದ್ಯರು ಹೇಳ್ತಾರೆ. ಜೊತೆಗೆ ನಿಮ್ಮ ಮಗ ನಾರ್ಮಲ್ ಮಕ್ಕಳಂತೆ ಓಡಾಡಬೇಕಾದ್ರೆ, ಒಂದು ಇಂಜೆಕ್ಷನ್ ಕೊಡಿಸಬೇಕು. ಅದು ನಮ್ಮ ದೇಶದಲ್ಲಿಲ್ಲ. ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕು. ಅದರ ಬೆಲೆ 17.5 ಕೋಟಿ ಅಂತಾ ವೈದ್ಯರು ಹೇಳಿಬಿಡ್ತಾರೆ. ಆ ವಿಚಾರ ತಿಳಿದು ಪೋಷಕರು ಅಕ್ಷರಶಃ ಕುಸಿದುಬೀಳ್ತಾರೆ.
ಇದನ್ನು ಓದಿ: ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ; ಮಠದಿಂದಲೇ ಹೊರ ಹಾಕಲು ತೀರ್ಮಾನ!
ಮಗುವಿನ ತಂದೆ ಟ್ಯಾಕ್ಸ್ ಕಲೆಕ್ಟರ್ ಕೆಲ್ಸ ಮಾಡ್ತಿದ್ದಾರೆ. ಹೇಳಿ ಕೇಳಿ ಮಿಡಲ್ ಕ್ಲಾಸ್ ಫ್ಯಾಮಿಲಿ ಇವರದ್ದು. ಹದಿನೇಳುವರೆ ಕೋಟಿ ರೂಪಾಯಿ ಇಂಜೆಕ್ಷನ್ ಹೇಗೆ ಖರೀದಿಸೋದು ಅನ್ನೋದೇ ಈ ಫ್ಯಾಮಿಲಿಗೆ ಚಿಂತೆಯಾಗಿಬಿಡುತ್ತೆ. ಆಗ ಮಗುವಿನ ತಂದೆ ಅಮಿತ್‌ಗೆ ಹೊಳೆದದ್ದೇ ಕ್ರೌಡ್ ಫಂಡಿಂಗ್.
ಮಗುವಿನ ತಂದೆ ಹದಿನೇಳುವರೆ ಕೋಟಿ ರೂಪಾಯಿಯ ಇಂಜೆಕ್ಷನ್ ಕೊಡಿಸಲು ಕ್ರೌಡ್ ಫಂಡಿಂಗ್ ಶುರು ಮಾಡ್ತಾರೆ. ಇವರ ಅದೃಷ್ಟವೋ ಏನೋ ಗೊತ್ತಿಲ್ಲ. ಈ ಕುಟುಂಬದ ಮನವಿಗೆ ಹಲವರು ಸಹಕರಿಸಿದರು. ಕೇವಲ ಜನ ಸಾಮಾನ್ಯರು ಮಾತ್ರವಲ್ಲ, ಬಾಲಿವುಡ್ ಮತ್ತು ಕ್ರಿಕೆಟ್ ಸೆಲಬ್ರೇಟಿಗಳು ಕೂಡ ಸಾಥ್ ಕೊಟ್ಟರು.
10.5 ಕೋಟಿ ರೂಪಾಯಿ ಸಂಗ್ರಹ
ವಿಶೇಷ ಅಂದ್ರೆ, ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಇವರಿಗೆ ಸಾಥ್ ಕೊಡ್ತಾರೆ. ಇವರಿಗೆ ಇತರೆ ಪಕ್ಷದ ಎಂಪಿಗಳು ಸಹ ಸಹಾಯ ಮಾಡ್ತಾರೆ. ಎಲ್ಲರೂ ಧನ ಸಹಾಯ ಮಾಡಿದ ಪರಿಣಾಮ 10.5 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಆಗ ಇಂಜೆಕ್ಷನ್ ತಯಾರಿಸಿರೋ ಕಂಪನಿಯ ಜೊತೆ ಇವ್ರು ಮಾತುಕತೆ ನಡೆಸುತ್ತಾರೆ. ನಾವು ಜನರಿಂದ ಹತ್ತೂವರೆ ಕೋಟಿ ರೂಪಾಯಿ ಸಂಗ್ರಹ ಮಾಡಿದ್ದೇವೆ. ನಮ್ಮ ಕೈಯಲ್ಲಿ ಆಗಿದ್ದಿಷ್ಟು ದಯವಿಟ್ಟು ಈ ಮೊತ್ತಕ್ಕೆ ಇಂಜೆಕ್ಷನ್ ಕೊಡಿ ಅಂತಾ ಕೇಳ್ತಾರೆ. ಇದಕ್ಕೆ ಆ ಕಂಪನಿಯವರು ಓಕೆ ಅಂತಾರೆ. ಜೊತೆಗೆ ಸಂಸದರ ಸಹಾಯದಿಂದ ಆಮದು ತೆರಿಗೆಯನ್ನ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಸಮ್ಮತಿ ವ್ಯಕ್ತಪಡಿಸುತ್ತದೆ. ಎಲ್ಲ ವಿಧವಾದ ಮಾರ್ಗಗಳು ಫಲ ಕೊಟ್ಟ ನಂತರ ಜುಲೈ 13ರಂದು ಇಂಜೆಕ್ಷನ್ ಕೊಡಿಸಲಾಗುತ್ತದೆ.
दिल्ली के डेढ़ साल के कनव को जन्म से ही SMA नाम की गंभीर बीमारी है। देश में अब तक ऐसे कुल 9 मामले ही हैं। इस बच्चे को 17.5 करोड़ का इंजेक्शन लगना था जो अमेरिका से आना था।
इस छोटे बच्चे को एक नई ज़िंदगी देने के लिए हमारे सांसद संजीव अरोड़ा जी और संजय सिंह जी के प्रयासों और जनता… pic.twitter.com/m8bkrffDt1
— Arvind Kejriwal (@ArvindKejriwal) September 12, 2023
ಸದ್ಯ, ಮಗು ಕುಳಿತುಕೊಳ್ಳೋಕೆ ಪ್ರಯತ್ನಿಸುತ್ತಿದ್ದು, ಪಾಸಿಟಿವ್ ಬೆಳವಣಿಗೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಭೇಟಿ ಕೊಟ್ಟು, ಪೋಷಕರ ಜೊತೆ ಮಾತುಕತೆ ನಡೆಸಿದರು. ಎಲ್ಲರೂ ಸಹಾಯ ಹಸ್ತ ಚಾಚಿದಕ್ಕಷ್ಟೇ ಈ ಮಗು ಈಗ ದೊಡ್ಡ ಗಂಡಾಂತರದಿಂದ ಬಚಾವ್ ಆಗಿದೆ. ಇಡೀ ಭಾರತ ಆ ಮಗುವಿನ ಪರ ನಿಂತು, ಗೆದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ