newsfirstkannada.com

ಕೇಂದ್ರದ ಸುಗ್ರಿವಾಜ್ಞೆ ವಿರುದ್ಧ ಕೇಜ್ರಿವಾಲ್ ದೇಶಾದ್ಯಂತ ಯಾತ್ರೆ; ದೀದಿ ಭೇಟಿಯಾಗಿ ಬೆಂಬಲ ಪಡೆದ ದೆಹಲಿ CM

Share :

23-05-2023

  ದೀದಿಗೆ ಭೇಟಿಯಾಗಿ ಬೆಂಬಲ ಪಡೆದ ದೆಹಲಿ CM

  ಕೇಂದ್ರದ ಸುಗ್ರಿವಾಜ್ಞೆ ವಿರುದ್ಧ ಕೇಜ್ರಿವಾಲ್ ಯಾತ್ರೆ

  ದೆಹಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ಮತ್ತೆ ಹಿಡಿತ

ದೆಹಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ಮತ್ತೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೊಚ್ಚಿಗೆದ್ದಿದ್ದಾರೆ. ಕೇಂದ್ರದ ನಡೆಯನ್ನು ಪ್ರಶ್ನಿಸಿ, ದೇಶಾದ್ಯಂತ ಪ್ರವಾಸ ಕೈಗೊಂಡು ವಿಪಕ್ಷಗಳ ಬೆಂಬಲ ಕೋರುತ್ತಿದ್ದಾರೆ.  ನಿನ್ನೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್​ರನ್ನು ಭೇಟಿಯಾಗಿದ್ದ ಕೇಜ್ರಿವಾಲ್ ಇವತ್ತು ಕೋಲ್ಕತ್ತಾ ಸಿಎಂ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇಂದು ಮಧ್ಯಾಹ್ನ ಮಮತಾ ಬ್ಯಾನರ್ಜಿಯನ್ನು ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆಪ್ ನಾಯಕ ರಾಘವ ಚಡ್ಡಾ ಸೇರಿದಂತೆ ಅನೇಕ ಹಿರಿಯ ನಾಯಕರು ಕೋಲ್ಕತ್ತದಲ್ಲಿ ಭೇಟಿಯಾಗಿ ಕೇಂದ್ರ ಸರ್ಕಾರದ ಸುಗ್ರಿವಾಜ್ಞೆ ವಿರುದ್ಧ ಬೆಂಬಲ ಕೋರಿದರು.

ದೆಹಲಿ ನಾಗರಿಕರ ಹಕ್ಕು ಕಿತ್ತುಕೊಳ್ತಿದೆ

ಮಮತಾ ಬೆನ್ನಲ್ಲೇ ಕೇಜ್ರಿವಾಲ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಮತಾ ಭೇಟಿ ಬೆನ್ನಲ್ಲೇ ಕೇಜ್ರಿವಾಲ್ ಟ್ವೀಟ್ ಮಾಡಿ, ದೆಹಲಿ ನಾಗರಿಕರ ಹಕ್ಕಿಗಾಗಿ ಇವತ್ತಿನಿಂದ ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಸುಪ್ರೀಂ ಕೋರ್ಟ್ ದೆಹಲಿ ನಾಗರಿಕರಿಗೆ ನ್ಯಾಯ ನೀಡಿದ್ದರೂ, ಕೇಂದ್ರ ಸರ್ಕಾರ ಅದನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡ್ತಿದೆ ಎಂದು ಕುಟುಕಿದ್ದಾರೆ.

ದೆಹಲಿಯಲ್ಲಿರುವ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಪ್ರಕ್ರಿಯೆ ಉಸ್ತುವಾರಿಗಾಗಿ ‘ರಾಷ್ಟ್ರ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರವನ್ನು ಕೇಂದ್ರ ರಚನೆ ಮಾಡಿ, ಸುಗ್ರೀವಾಜ್ಞೆ ಹೊರಡಿಸಿದೆ. ದೆಹಲಿಯ ಸೇವಾ ವಲಯದ ಮೇಲಿನ ಅಧಿಕಾರವನ್ನು ದೆಹಲಿ ಸರ್ಕಾರದ ಸುಪರ್ದಿಗೆ ಸುಪ್ರೀಂಕೋರ್ಟ್ ನೀಡಿತ್ತು. ಸುಪ್ರೀಂ ಕೋರ್ಟ್​ ತೀರ್ಪು ಪ್ರಕಟಿಸಿ ಒಂದು ವಾರ ಕಳೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರಾಧಿಕಾರವನ್ನು ರಚಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದ ಸುಗ್ರಿವಾಜ್ಞೆ ವಿರುದ್ಧ ಕೇಜ್ರಿವಾಲ್ ದೇಶಾದ್ಯಂತ ಯಾತ್ರೆ; ದೀದಿ ಭೇಟಿಯಾಗಿ ಬೆಂಬಲ ಪಡೆದ ದೆಹಲಿ CM

https://newsfirstlive.com/wp-content/uploads/2023/05/KEJRIWAL-1.jpg

Load More