MLA ಆಗಿ 3 ವರ್ಷಕ್ಕೆ ಮಿನಿಸ್ಟರ್, 4ನೇ ವರ್ಷಕ್ಕೆ ಸಿಎಂ ಆದ ಅತಿಶಿ
ಸಿಎಂ ಅತಿಶಿ ಗಂಡ ಯಾರು, ಸಾರ್ವಜನಿಕರಿಂದ ದೂರ ದೂರಾನಾ?
ಅತಿಶಿ ಸಿಎಂ ಸ್ಥಾನಕ್ಕೆ ಏರಿದ್ದಾರೆ ಅಂದ್ರೆ, ಕಾರಣ ಅದೊಂದು ಭೇಟಿ
ಸಿಎಂ ಕುರ್ಚಿಗಾಗಿ ರಾಜಕಾರಣಿಗಳು ರಣರಣ ಯುದ್ಧವನ್ನೇ ಮಾಡ್ತಾರೆ. ಒಮ್ಮೆ ಆ ಚೇರ್ ಮೇಲೆ ಕುಳಿತ್ರು ಅಂದ್ರೆ ಫೆವಿಕಲ್ ಗಮ್ ಹಾಕಿ ಕೊಳಿತಂತೆ ಗಟ್ಟಿಯಾಗಿ ಹಿಡ್ಕೊಂಡ್ ಇರ್ತಾರೆ. ಅಂತಾದ್ರಲ್ಲಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಹಾಗಾದ್ರೆ, ರಾಜಕೀಯವಾಗಿ ಕೇಜ್ರಿವಾಲ್ ರಣತಂತ್ರ ಏನು? ಡೆಲ್ಲಿಗೆ ಲೇಡಿ ಬಾಸ್ ಆಗಿರೋ ಅತಿಶಿ ರಾಜಕೀಯ ಪ್ರವೇಶ ಹೇಗಿತ್ತು? ಅತಿಶಿ ಘಟಾನುಘಟಿಗಳನ್ನು ರೇಸ್‌ನಲ್ಲಿ ಹಿಂದಿಕ್ಕಿ ಸಿಎಂ ಸ್ಥಾನಕ್ಕೇರಿದ್ದು ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.
ಬದಲಾವಣೆ.. ದೇಶದ ರಾಜಕೀಯ ಇತಿಹಾಸ ಪುಟಗಳ ಸೇರಲಿರುವ ಮಹತ್ವದ ಬದಲಾವಣೆ. ಬಹುಶಃ ರಾಷ್ಟ್ರದ ರಾಜಧಾನಿಯಲ್ಲಿ ಇಂಥದ್ದೊಂದು ಕ್ಷಿಪ್ರ ಬದಲಾವಣೆ ಆಗುತ್ತೆ ಅಂತಾ ಅಲ್ಲಿನ ಜನರಾಗಲಿ, ಅಥವಾ ದೇಶದ ಜನರಾಗಲಿ ಅಂದುಕೊಂಡಿರಲಿಲ್ಲ. ಹತ್ತಿರ ಹತ್ತಿರ 6 ತಿಂಗಳು. ಬರೋಬ್ಬರಿ 6 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿ ಜೈಲಿಂದ ವಾಪಾಸಾದ್ಮೇಲೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಯಾರೂ ಊಹಿಸಿರಲೂ ಸಾಧ್ಯವಿಲ್ಲದಂತ ಕ್ರೇಜಿ ಫಾರ್ಮುಲಾ ಒಂದನ್ನ ರಾಜಕೀಯ ಅಖಾಡದಲ್ಲಿ ಪ್ರಯೋಗ ಮಾಡಿದ್ದಾರೆ. ಬಹಳ ವಿದ್ಯಾವಂತ, ಬುದ್ಧಿವಂತ, ಕಾಮನ್ ಸಿಎಂ ಎನಿಸಿಕೊಂಡಿರುವ ಕೇಜ್ರಿವಾಲ್ ಮಾಡಿರೋ ಈ ಪ್ರಯೋಗ ಇಡೀ ದೇಶದ ಜನರ ಹುಬ್ಬೇರುವಂತೆ ಮಾಡಿದೆ. ರಾಜಕಾರಣಿಗಳಿಗೇ ಶಾಕ್ ಕೊಟ್ಟಿದೆ. ಜೈಲಿಂದ ಬಂದ್ಮೇಲೆ ನ್ಯಾಯಾಲಯದ ತೀರ್ಪಿನಿಂದ ಅಕ್ಷರಶಃ ಹಲ್ಲು ಕಿತ್ತ ಹಾವಿನಂತಾಗಿರುವ ಕೇಜ್ರಿವಾಲ್ ದಿಢೀರ್ ಅಂತಾ ಸಿಎಂ ಹುದ್ದೆಗೇ ರಾಜೀನಾಮೆ ಕೊಟ್ಟಿದ್ದಾರೆ.. ರಾಜೀನಾಮೆ ಕೊಡೋದಷ್ಟೇ ಅಲ್ಲ, ತಮ್ಮ ಉತ್ತರಾಧಿಕಾರಿ ಯಾರು ಅನ್ನೋದನ್ನ ಜನರ ಮುಂದೆ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಅತ್ಯಂತ ಕಿರಿಯ ಮುಖ್ಯಮಂತ್ರಿ… ಅತಿಶಿ ಯಾರು? ಮಾರ್ಕ್ಸ್ & ಲೆನಿನ್‌ಗೂ ಸ್ಕೂಲ್ ಟೀಚರ್‌ಗೂ ಲಿಂಕ್ ಏನು?
ರಾಜಕೀಯ ಪ್ರವೇಶ ಮಾಡೋ ಬಹುತೇಕ ರಾಜಕಾರಣಿಗಳು ಕಾಣೋ ಕನಸು ಒಂದೇ.. ತಾವೂ ಕೂಡ ತಮ್ಮ ರಾಜ್ಯಕ್ಕೆ ಸಿಎಂ ಆಗ್ಬೇಕು ಅನ್ನೋದು. ಸಿಎಂ ಗದ್ದುಗೆಗಾಗಿ ಅದೆಷ್ಟೋ ರಾಜ್ಯಗಳಲ್ಲಿ ಇವತ್ತಿಗೂ ಯುದ್ಧಗಳೇ ನಡೀತಿವೆ. ಸ್ನೇಹಿತರು ಶತ್ರುಗಳಾಗಿದ್ದಾರೆ, ಶತ್ರುಗಳು ಸ್ನೇಹಿತರಾಗಿದ್ದಾರೆ. ಕೆಲವರು ಜೀವನ ಪರ್ಯಂತ ಕನಸು ಕಟ್ಟಿಕೊಂಡು ಆ ಹುದ್ದೆ ಸಿಗದೇ ಜೀವನದ ಯಾತ್ರೆಯನ್ನೇ ಮುಗಿಸಿದ್ದಾರೆ. ಅಷ್ಟೊಂದು ಪವರ್ ಫುಲ್ ಹುದ್ದೆ ಸಿಎಂ ಹುದ್ದೆ. ಅಂತಹ ಹುದ್ದೆಯನ್ನ ಅರವಿಂದ್ ಕೇಜ್ರಿವಾಲ್ ದಿಢೀರ್ ಅಂತ ತ್ಯಜಿಸಿಬಿಟ್ಟಿದ್ದಾರೆ. ಜೊತೆಗೆ ಯಾರೂ ಕಲ್ಪನೆಯನ್ನೂ ಮಾಡಲಾಗದಂತ ವ್ಯಕ್ತಿಯನ್ನ ಮುಖ್ಯಮಂತ್ರಿ ಗಾದಿಗೆ ಏರಿಸಿದ್ದಾರೆ.
ಡೆಲ್ಲಿಗೆ ಇನ್ಮುಂದೆ ಲೇಡಿ ಬಾಸ್.. 10 ವರ್ಷಗಳ ಬಳಿಕ ರಾಷ್ಟ್ರರಾಜಧಾನಿಗೆ ಮತ್ತೆ ಲೇಡಿ ಬಾಸ್. ಇಲ್ಲಿಯವರೆ ದೆಹಲಿಯ ಗದ್ದುಗೆಯನ್ನ ಶೀಲಾ ದೀಕ್ಷಿತ್ ಮತ್ತು ಸುಷ್ಮಾ ಸ್ವರಾಜ್ ಎಂಬ ದೈತ್ಯ ನಾಯಕಿಯರು ಅಲಂಕರಿಸಿದ್ರು. ಇದೀಗ ಆ ಸಾಲಿಗೆ ಅತಿಶಿ ಮಾರ್ಲೆನಾ ಎನ್ನುವ ಯುವನಾಯಕಿ ಸೇರ್ಪಡೆಯಾಗಿ ದಾಖಲೆ ಬರೀತಿದ್ದಾರೆ. ಅಂದಹಾಗೇ ದೆಹಲಿ ಸಿಎಂ ಸ್ಥಾನಕ್ಕೆ ಈಕೆಯ ಹೆಸ್ರು ಕೇಳಿಬರ್ತಿದ್ದಂತೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ತಿದೆ. ಈ ಅತಿಶಿ ಯಾರು ಈಕೆ ರಾಜಕೀಯಕ್ಕೆ ಎಂಟ್ರಿಯಾಗಿದ್ದು?. ಪಾಲಿಟಿಕ್ಸ್‌ಗೆ ಬಂದ್ಮೇಲೆ ಸಿಎಂ ಸ್ಥಾನಕ್ಕೇರಿದ ಬಿರುಗಾಳಿಯ ವೇಗ ಎಲ್ಲರೂ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.
ಸಿಎಂ ಸ್ಥಾನಕ್ಕೆ ಅತಿಶಿ ಹೆಸ್ರು ಘೋಷಣೆ ಮಾಡಿದ ಕೇಜ್ರಿ!
ರಾಜಕೀಯಕ್ಕೆ ಎಂಟ್ರಿಯಾಗಿ ಇನ್ನೇನ್ ರಾಜಕಾರಣದಿಂದ ನಿವೃತ್ತಿಯಾಗ್ಬೇಕು ಅನ್ನೋ ಟೈಮ್‌ನಲ್ಲಿ ನಮಗೊಂದು ಸಚಿವ ಸ್ಥಾನಕೊಡಿ ಅಂತಾ ಗೊಳಾಡೋರನ್ನ ನೋಡಿದ್ದೇವೆ. ನಾನೇ ಸೀನಿಯರ್ ನಾನು ಸಿಎಂ ರೇಸ್‌ನಲ್ಲಿದ್ದೀನಿ ಅಂತಾ ಹೇಳೋರನ್ನೂ ಕಂಡಿದ್ದೀವಿ. ಆದ್ರೆ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ, ಸಿಎಂ ಆಗ್ಬೇಕು ಅನ್ನೋ ಆಸೆಯನ್ನ ಎಲ್ಲೂ ವ್ಯಕ್ತಪಡಿಸದೇ. ಸಾಮಾನ್ಯ ಕುಟುಂಬದ ಕುಡಿಯೊಂದು ಎಮ್‌ಎಲ್‌ಎ ಆಗಿ ಮೂರೇ ವರ್ಷಕ್ಕೆ ಮಿನಿಸ್ಟರ್ ಆಗಿರೋದು ಅದಾಗಿ 4ನೇ ವರ್ಷಕ್ಕೆ ಸಿಎಂ ಸ್ಥಾನಕ್ಕೇರೋದು ಇದ್ಯಲ್ಲ, ಇದು ನಿಜಕ್ಕೂ ಅಚ್ಚರಿಯ ವಿಚಾರ.
ಅತಿಶಿ 2020ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಕಿಜಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರು. ಬಟ್, 2023 ರಲ್ಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅಬಕಾರಿ ಹಗರಣದಲ್ಲಿ ಸಿಲುಕಿ ಜೈಲು ಸೇರ್ತಾರೆ. ಆ ಸಂದರ್ಭದಲ್ಲಿ ಅತಿಶಿಗೆ ಶಿಕ್ಷಣ ಖಾತೆಯ ಜವಾಬ್ದಾರಿ ಒಲಿದು ಬರುತ್ತೆ. ಯಾರೂ ನಿರೀಕ್ಷೆ ಮಾಡಲಾಗಷ್ಟು ಬದಲಾವಣೆಯನ್ನು ತಂದು ತೋರಿಸ್ತಾರೆ ಅತಿಶಿ. ಅದಾಗಿ ಒಂದೇ ವರ್ಷಕ್ಕೆ ಸಿಎಂ ಸ್ಥಾನ ಹುಡ್ಕೊಂಡ್ ಬಂದಿದೆ. ರಾಜಕೀಯದಲ್ಲಿ ಕಠಿಣ ಪರಿಶ್ರಮ, ಬುದ್ದಿವಂತಿಕೆ, ಅದೃಷ್ಟ ಇದ್ರೆ ಯಾವುದೂ ಅಸಾಧ್ಯವಲ್ಲ ಅನ್ನೋದನ್ನು ಇದು ಸಾರಿ ಸಾರಿ ಹೇಳ್ತಿದೆ.
ಇದನ್ನೂ ಓದಿ: atishi marlena: ದೆಹಲಿಯಲ್ಲಿ ಮತ್ತೆ ಮಹಿಳಾ ದರ್ಬಾರ್; ಕೇಜ್ರಿವಾಲ್ ಅತಿಶಿಗೆ ಸಿಎಂ ಪಟ್ಟ ಕಟ್ಟಲು ಕಾರಣವೇನು?
ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸ ಅಧ್ಯಯನ
ಅತಿಶಿ ಜೂನ್ 8, 1981 ರಂದು ದೆಹಲಿಯ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ್ರು. ಇನ್ನು ಅವರ ತಂದೆಯ ಹೆಸ್ರು ವಿಜಯ್ ಸಿಂಗ್ ಮತ್ತು ತಾಯಿ ತ್ರಿಪ್ತಾವಾಹಿ ಇಬ್ಬರೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅತಿಶಿ ಪಂಜಾಬಿ ರಜಪೂತ ಕುಟುಂಬಕ್ಕೆ ಸೇರಿದವರು ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ. ಇದಲ್ಲದೇ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸ ಅಧ್ಯಯನ ಮಾಡಿದ್ದಾರೆ.
ಅತಿಶಿ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಏಳು ವರ್ಷಗಳ ಕಾಲ ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ವಾಸವಿದ್ದಾರೆ. ಅಲ್ಲಿ ಸಾವಯವ ಕೃಷಿ ಮತ್ತು ಪ್ರಗತಿಶೀಲ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಯದಲ್ಲಿ ನಿರತರಾಗಿದ್ರು. ಹಾಗೇ ಹಲವಾರು ಎನ್‌ಜಿಒಗಳಲ್ಲಿಯೂ ಕೆಲಸ ಮಾಡ್ತಿದ್ರು. ಸಾಮಾಜಿಕ ಹೋರಾಟದಲ್ಲಿಯೂ ಭಾಗಿಯಾಗ್ತಿದ್ರು. ಇದೇ ಸಂದರ್ಭದಲ್ಲಿ ಕೆಲವು ಎಎಪಿ ಸದಸ್ಯರ ಭೇಟಿಯಾಗಿದೆ. ಅದು ಅತಿಶಿ ಲೈಫ್‌ಗೆ ಟರ್ನಿಂಗ್ ಪಾಯಿಂಟ್. ಇಂದು ಸಿಎಂ ಸ್ಥಾನಕ್ಕೆ ಏರಿದ್ದಾರೆ ಅಂದ್ರೆ ಅದ್ಕೆ ಕಾರಣವೇ ಅದೊಂದು ಭೇಟಿ.
ಹೀಗಿದ್ದ ಅತಿಶಿ ದೆಹಲಿಯಲ್ಲಿ ರಾಜಕೀಯ ಕ್ರಾಂತಿ ಮಾಡಿದ ಆಮ್ ಆದ್ಮಿ ಪಕ್ಷದ ಆಪ್ ಸಂಪರ್ಕಕ್ಕೆ ಬರ್ತಾರೆ. 2015ರಿಂದ 2018ರವರೆಗೆ ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸ್ತಾರೆ. ಅದ್ಯಾವಾಗ ಮನೀಶ್ ಸಿಸೋಡಿಯಾ ಜೈಲು ಸೇರುತ್ತಾರೋ ಶಿಕ್ಷಣ ಖಾತೆ ಯಾರಿಗೆ ಕೊಡುವುದು ಅನ್ನೋ ಚರ್ಚೆ ಇರುತ್ತೆ. ಆವಾಗ ಕೇಜ್ರಿವಾಲ್ ಕಣ್ಣಿಗೆ ಬಿದ್ದವರೇ ಅತಿಶಿ. ಯಾಕಂದ್ರೆ, ಇವರೊಬ್ಬರು ಕ್ರಾಂತಿಕಾರಿ ಮಹಿಳೆ ಅನ್ನೋದ್ ಕೇಜ್ರಿವಾಲ್‌ಗೆ ಅರ್ಥವಾಗಿತ್ತು. ಕೇಜ್ರಿವಾಲ್ ನಿರೀಕ್ಷೆ ಅಂತೆ ಅತಿಶಿ ಶಿಕ್ಷಣ ಖಾತೆ ನಿರ್ವಹಿಸಿದ್ದ ರೀತಿ ಇಡೀ ದೇಶದ ಗಮನ ಸೆಳೆಯುತ್ತೆ. ಇನ್ನು ಇದ್ಕೂ ಮುನ್ನ ಒಂದ್ ಬೆಳವಣಿಗೆ ನಡೆಯುತ್ತೆ. ಅಂದೇನ್ ಅಂದ್ರೆ, 2019 ರಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ. ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಬರೋಬ್ಬರಿ 4.77 ಲಕ್ಷ ಅಂತರದಲ್ಲಿ ಸೋಲು ಕಾಣ್ತಾರೆ. ಆದ್ರೆ, ತಮ್ಮ ಬುದ್ದಿವಂತಿಕೆಯಿಂದ ಅರವಿಂದ್ ಕೇಜ್ರಿವಾಲ್ ಆಪ್ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿ ಇರ್ತಾರೆ.
ತಮ್ಮ ಹೆಸ್ರಲ್ಲಿದ್ದ ‘ಮರ್ಲೆನಾ’ ಹೆಸ್ರು ಕೈಬಿಟ್ಟ ಕಥೆ ಏನು?
ಡೆಲ್ಲಿ ಲೇಡಿ ಬಾಸ್ ತಂದೆಯ ಹೆಸರು ವಿಜಯ್ ಸಿಂಗ್ ಮತ್ತು ತಾಯಿಯ ಹೆಸರು ತ್ರಿಪ್ತ ಸಿಂಗ್. ಮೊದಲು ಆತಿಶಿ ತನ್ನ ಪೂರ್ಣ ಹೆಸರನ್ನು ‘ಆತಿಶಿ ಮರ್ಲೆನಾ’ ಅಂತಾ ಬರೆಯುತ್ತಿದ್ರು. ಅವರ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ. ವರದಿಗಳ ಪ್ರಕಾರ, ಆಕೆಯ ತಂದೆ ಮಾರ್ಕ್ಸ್ ಮತ್ತು ಲೆನಿನ್ ಅವರಿಂದ ಪ್ರಭಾವಿತರಾಗಿದ್ದರು ಮತ್ತು ಎರಡನ್ನೂ ಸಂಯೋಜಿಸುವ ಮೂಲಕ ತನ್ನ ಮಗಳ ಹೆಸರಿಗೆ ‘ಮರ್ಲೆನಾ’ ಎಂದು ಸೇರಿಸಿದ್ರು. ಆದಾಗ್ಯೂ, 2019ರ ಲೋಕಸಭೆ ಚುನಾವಣೆಗೆ ಮೊದಲು, ಅವರು ತಮ್ಮ ಹೆಸರಿನಿಂದ ಮರ್ಲೆನಾ ಹೆಸರನ್ನು ತೆಗೆದುಹಾಕಿದರು, ಈ ಮೂಲಕ ತಾನು ಕ್ರಿಶ್ಚಿಯನ್ ಎಂಬ ಗೊಂದಲ ಜನರಿಂದ ದೂರ ಮಾಡಿದರು.
ಅತಿಶಿ ಪತಿ ಪಂಜಾಬಿ ರಜಪೂತ ಕುಟುಂಬಕ್ಕೆ ಸೇರಿದ್ದು ಅವ್ರ ಹೆಸ್ರು ಪ್ರವೀಣ್ ಸಿಂಗ್. ಪ್ರವೀಣ್ ಸಂಶೋಧಕ ಮತ್ತು ಶಿಕ್ಷಣ ತಜ್ಞರಾಗಿದ್ದಾರೆ. ಅವರು ಸದ್ಭಾವನಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿಯಂತ ಸಂಸ್ಥೆ ಜೊತೆಗೆ ನೇರ ಸಂಪರ್ಕ ಹೊಂದಿದ್ದಾರೆ. ಅವ್ರು ದೆಹಲಿಯ ಐಐಟಿಯಲ್ಲಿ ಓದಿದ್ದಾರೆ ಮತ್ತು ನಂತರ ಐಐಎಂ ಅಹಮದಾಬಾದ್‌ನಲ್ಲಿಯೂ ಅಧ್ಯಯನ ಮಾಡಿದ್ದಾರೆ. ಸುಮಾರು 8 ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು. ಭಾರತ ಮತ್ತು ಅಮೆರಿಕದ ಸಲಹಾ ಸಂಸ್ಥೆಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದಾದ ನಂತರ ಸಮಾಜ ಸೇವೆ ಮಾಡ್ತಿದ್ದಾರೆ. ಆದ್ರೆ, ಸಾರ್ವಜನಿಕವಾಗಿ ಕಾಣಿಸ್ಕೊಳ್ಳುವುದು ವಿರಳ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ