newsfirstkannada.com

×

ಸಿಎಂ ಅರವಿಂದ್​​ ಕೇಜ್ರಿವಾಲ್​​​ ದಿಢೀರ್​ ರಾಜೀನಾಮೆಗೆ ಮುಂದಾಗಿದ್ದೇಕೆ? ಇಲ್ಲಿವೆ 5 ಕಾರಣಗಳು!

Share :

Published September 17, 2024 at 6:08am

    ದೆಹಲಿಯಲ್ಲಿ ಹೊಸ ಬಿರುಗಾಳಿ ಎಬ್ಬಿಸಲಿದೆಯಾ ಕೇಜ್ರಿವಾಲ್ ರಾಜೀನಾಮೆ

    ಕಳೆದು ಹೋಗಿರುವ ಆಪ್ ಚಾರ್ಮ್​ ಈ ಮೂಲಕ ವಾಪಸ್ ತರಲು ಯತ್ನ?

    ಕೇಜ್ರಿವಾಲ್ ರಾಜೀನಾಮೆಯ ಹಿಂದೆ ಇರುವ ಐದು ರಾಜಕೀಯ ತಂತ್ರಗಳೇನು?

ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಸಿಎಂ ಅರವಿಂದ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಕೇಜ್ರಿವಾಲ್ ಈ ನಿರ್ಧಾರದ ಹಿಂದೆ ರಾಜಕೀಯ ಚಾಣಾಕ್ಷತೆ ಅಡಗಿಕೊಂಡಿದೆ ಎಂದೇ ರಾಜಕೀಯ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. ರಾಜೀನಾಮೆ ನೀಡುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಿ ಬಿಜೆಪಿ ವಿರೋಧಿ ನೆಲೆಯನ್ನು ದೆಹಲಿಯಲ್ಲಿ ಗಟ್ಟಿಗೊಳಿಸಲು ಅರವಿಂದ್ ಕೇಜ್ರಿವಾಲ್ ರಾಜಕೀಯ ನೀತಿ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಕೇಜ್ರಿವಾಲ್ ಭಾರಿಸಿದ ಭರ್ಜರಿ ಸಿಕ್ಸರ್​ ಎಂದೇ ರಾಜಕೀಯ ತಜ್ಞರು ಬಣ್ಣಿಸುತ್ತಿದ್ದಾರೆ.

ಒಂದು ಬಾಲ್​ಗೆ ಆರು ರನ್​ ಬೇಕಾದಾಗ ಒಬ್ಬ ಬ್ಯಾಟ್ಸಮನ್​ ಹಲವು ತಂತ್ರಗಳನ್ನು ಹೂಡುತ್ತಾನೆ. ಎದುರಿಗಿರುವ ಬೌಲರ್ ಕೂಡ ಹಲವು ಅಸ್ತ್ರಗಳನ್ನಿಟ್ಟುಕೊಂಡು ಬ್ಯಾಟರ್​ನನ್ನು ಕಟ್ಟಿಹಾಕುವ ಸಿದ್ಧತೆ ಮಾಡಿಕೊಂಡೇ ಇರುತ್ತಾನೆ. ಸದ್ಯ ದೆಹಲಿ ರಾಜಕಾರಣದ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಹಿಡಿದು ನಿಂತಿದ್ದಾರೆ ಅರವಿಂದ್ ಕೇಜ್ರಿವಾಲ್ ಬಿಜೆಪಿ ಎಸೆದ ಬಾಲ್​ಗೆ ರಾಜೀನಾಮೆ ಎಂಬ ಸಿಕ್ಸರ್ ಸಿಡಿಸಿ ಮತ್ತೆ ದೆಹಲಿಯಲ್ಲಿ ಆಪ್​ ಸರ್ಕಾರವನ್ನು ಅಧಿಕಾರಕ್ಕೆ ತರುವ ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ರಾಜೀನಾಮೆ ಅಸ್ತ್ರಕ್ಕೆ ಬಿಜೆಪಿ ಅಂಕ ಗಣಿತ ಪಲ್ಟಿ.. ದೆಹಲಿ CM ರೇಸ್​ನಲ್ಲಿ ಮೂವರು..?
ಈಗಾಗಲೇ ಅರವಿಂದ್ ಕೇಜ್ರಿವಾಲ್ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಅದರ ಜೊತೆಗೆ ಜನಾದೇಶ ಬರುವವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕೂರುವುದಿಲ್ಲ. ನಾನು ನ್ಯಾಯಾಲಯದಿಂದ ನ್ಯಾಯ ಮಾಡಿದಿದ್ದೇನೆ. ಮುಂದೆ ಜನತಾ ನ್ಯಾಯಾಲಯದಿಂದಲೂ ನ್ಯಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಏಕಾಏಕಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಮುಂದಾಗಿರುವ ಹಿಂದೆ ಇದೆ ಐದು ಪ್ರಮುಖ ಕಾರಣಗಳಿವೆ.

1 ದೆಹಲಿಯ ವಿಧಾನಸಭಾ ಚುನಾವಣೆ ಸದ್ಯದಲ್ಲಿಯೇ ಇದೆ; ಕಳೆದುಕೊಳ್ಳುವಂತಹದ್ದು ಏನೂ ಇಲ್ಲ
ದೆಹಲಿಯ ವಿಧಾನಸಭಾ ಚುನಾವಣೆಗೆ ಈಗ ಐದು ತಿಂಗಳಿಗಿಂತ ಕಡಿಮೆ ಇದೆ. ಮುಂದಿನ ಫೆಬ್ರುವರಿಯಲ್ಲಿ ಚುನಾವಣೆ ಆರಂಭವಾಗಲಿದ್ದು, ಕೇಜ್ರಿವಾಲ್ ಇಲ್ಲಿ ಕಳೆದುಕೊಳ್ಳುವಂತದ್ದೂ ಏನೂ ಇಲ್ಲ. ರಾಜೀನಾಮೆ ನೀಡುವುದರಿಂದ ಎಲೆಕ್ಷನ್ ಇನ್ನೂ ಬೇಗ ಆರಂಭವಾಗಲಿದ್ದು. ಮತ್ತೆ ಅಧಿಕಾರ ಹಿಡಿಯುವ ಪ್ಲಾನ್ ಕೇಜ್ರಿವಾಲ್​ರದ್ದು. ಇನ್ನೂ ಸುಪ್ರೀಂಕೋರ್ಟ್​ ಹಾಕಿರುವ ಷರುತ್ತುಗಳಲ್ಲಿ ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯುವಂತಿಲ್ಲ ಎಂದು ಕೂಡ ಉಲ್ಲೇಖವಾಗಿದೆ. ಹೀಗಾಗಿ ಸದ್ಯ ಫೆಬ್ರುವರಿಯಲ್ಲಿ ನಡೆಯುವ ಎಲೆಕ್ಷನ್ ನವೆಂಬರ್​ನಲ್ಲಿಯೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಜೊತೆಯಲ್ಲಿಯೇ ನಡೆಯಲಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ,.
ಈ ಸಮಯದಲ್ಲಿ ಕೇಜ್ರಿವಾಲ್ ರಿಸೈನ್ ಮಾಡಿದ್ದರ ಹಿಂದೆ ನಾನು ಹಾಗೂ ನನ್ನ ಪಕ್ಷದ ಜನರು ರಾಜಕೀಯ ಪಿತೂರಿಗೆ ಬಲಿಯಾದೆವು ಅನ್ನೊ ವಿಚಾರವನ್ನು ಜನರಲ್ಲಿ ಬಿತ್ತಲು ಒಂದು ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ: Narendra Modi: ನಾಳೆ ಪ್ರಧಾನಿ ಮೋದಿಗೆ 74ನೇ ಹುಟ್ಟುಹಬ್ಬ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್‌ ಏನು?

2 ಕಳಂಕದಿಂದ ಮುಕ್ತವಾಗಲು ರಾಜೀನಾಮೆ ಎಂಬ ರಹದಾರಿ
ಭ್ರಷ್ಟಾಚಾರದ ವಿರುದ್ಧ ಹೋರಾಟದ ಫಲವಾಗಿಯೇ ಅರವಿಂದ್ ಕೇಜ್ರಿವಾಲ್ 2011ರಲ್ಲಿ ದೆಹಲಿಯ ಗದ್ದುಗೆಯನ್ನು ಹಿಡಿದವರು. ಈಗ ಅವರದೇ ಮೇಲೆ ಅಬಕಾರಿ ನೀತಿಯಲ್ಲಿ ಅವ್ಯವಹಾರ ನಡೆಸಿ ಜೈಲಿಗೆ ಹೋಗಿ ಬಂದ ಆರೋಪವಿದೆ. ಈ ಕಳಂಕದಿಂದ ಮುಕ್ತವಾಗುವುದರ ಸಲುವಾಗಿ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಒಂದು ಅಗ್ನಿಪರೀಕ್ಷೆ ಎಂದು ಬಿಂಬಿಸಿ, ನಾನು ಜನರ ತೀರ್ಪಿಗೆ ಬದ್ಧನಾಗಿರಲು ಕಾಯುತ್ತಿದ್ದೇನೆ. ಚುನಾವಣೆ ಎದುರಿಸಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ದೆಹಲಿ ಜನರಿಗೆ ಸಾಗಿಸುವ ಸಿದ್ಧತೆಯಲ್ಲಿದ್ದಾರೆ. ಈ ಮೂಲಕ ಮತದಾರರ ಅನುಕಂಪ ಹಾಗೂ ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಈ ದಾಳವನ್ನು ಉರುಳಿಸಿದ್ದಾರೆ.

3 ಆಡಳಿತ ವಿರೋಧಿ ಅಲೆಯಿಂದ ಆಚೆ ಬರಲು ಪ್ಲಾನ್
ಅರವಿಂದ್ ಕೇಜ್ರಿವಾಲ್ 2013ರಿಂದಲೂ ದೆಹಲಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.2014-15ರಲ್ಲಿ ಕೇಂದ್ರ ಸರ್ಕಾರದ ಆಡಳಿತ ಹೊರತುಪಡಿಸಿ ನಿರಂತರವಾಗಿ ದೆಹಲಿ ಸಿಎಂ ಪಟ್ಟ ಅಲಂಕರಿಸಿಕೊಂಡು ಬಂದಿದ್ದಾರೆ. ಈಗ ರಾಜೀನಾಮೆ ನೀಡಿ ಆದಷ್ಟು ಬೇಗೆ ದೆಹಲಿಯಲ್ಲಿ ಚುನಾವಣೆಯನ್ನು ನಡೆಯುವ ಮೂಲಕ ದೆಹಲಿಯಲ್ಲಿರುವ ಆಪ್​ ಪರದ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸುವ ಪ್ಲಾನ್ ಮಾಡಿದ್ದಾರೆ.

4 ವಿಪಕ್ಷಗಳ ಬಿಜೆಪಿ ವಿರೋಧಿ ಧ್ವನಿಯ ಬೆಂಬಲ ಪಡೆಯುವ ಉದ್ದೇಶ
ಫೆಬ್ರುವರಿಯಲ್ಲಿ ನಡೆಯಬೇಕಾದ ಎಲೆಕ್ಷನ್​ ನವೆಂಬರ್​ನಲ್ಲಿಯೇ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಗಳ ಜೊತೆಗೂ ನಡೆಸಿ ಎಂದು ಈಗಾಗಲೇ ಅರವಿಂದ್ ಕೇಜ್ರಿವಾಲ್ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಇದು ನಡೆದಿದ್ದೇ ಆದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಧ್ವನಿಯನ್ನು ತಮ್ಮ ಗೆಲುವಿಗೆ ಅಡಿಪಾಯ ಮಾಡಿಕೊಳ್ಳುವ ಉದ್ದೇಶದಲ್ಲಿದ್ದಾರೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ವಿರುದ್ಧ ಮರಾಠ ಮೀಸಲಾತಿಯ ವಿಚಾರವಾಗಿ ಅನೇಕ ರೀತಿಯ ಅಸಮಾಧಾನಗಳಿವೆ. ಜಾರ್ಖಂಡ್​ನಲ್ಲಿಯೂ ಕೂಡ ಬಿಜೆಪಿ ಜೆಎಂಎಂ ಪಕ್ಷವನ್ನು ಕಟ್ಟಿಹಾಕುವಲ್ಲಿ ಪರದಾಡುತ್ತಿದೆ. ಇದರ ನಡುವೆಯೇ ದೆಹಲಿಯಲ್ಲಿ ಚುನಾವಣೆ ನಡೆದಿದ್ದೇ ಆದಲ್ಲಿ, ಬಿಜೆಪಿ ವಿರೋಧಿಯ ಅಲೆಯನ್ನು ಎಬ್ಬಿಸುವುದು ಸುಲಭ ಎಂಬುದು ಕೇಜ್ರಿವಾಲ್ ಐಡಿಯಾ

5 ಕೇಂದ್ರ ಸರ್ಕಾರದ ಆಡಳಿತದಿಂದ ದೆಹಲಿಯನ್ನು ಬಚಾವ್ ಮಾಡುವುದು
ರಾಜೀನಾಮೆ ನೀಡಿ, ಆದಷ್ಟು ಬೇಗ ದೆಹಲಿಯಲ್ಲಿ ಚುನಾವಣೆಯ ನಡೆಯುವಂತೆ ಮಾಡುವುದರ ಮೂಲಕ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಡಳಿತವನ್ನು ದೂರ ಇಡುವ ನಿಟ್ಟಿನಲ್ಲಿ ಕೇಜ್ರಿವಾಲ್ ಪ್ಲಾನ್ ಮಾಡಿದ್ದಾರೆ. ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಬಿಜೆಪಿ ಅನೇಕ ನಾಯಕರ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಅದು ಅಲ್ಲದೇ ಸಿಎಂ ಆಫೀಸ್​ಗೆ ಭೇಟಿ ಕೊಡದಂತೆ ಸುಪ್ರೀಂಕೋರ್ಟ್ ಅರವಿಂದ್ ಕೇಜ್ರಿವಾಲ್​ಗೆ ನಿಯಂತ್ರಣ ಹೇರಿದೆ. ಹೀಗಾಗಿ ಆದಷ್ಟು ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಬರದಂತೆ ತಡೆದು. ನೇರ ಚುನಾವಣೆಗೆ ಹೋಗಿ, ಅನುಕಂಪ ಹಾಗೂ ಬಿಜೆಪಿಯೂ ನನ್ನ ವಿರುದ್ಧ ನಡೆಸಿದ ಷಡ್ಯಂತ್ರಗಳ ಎಂದು ಆರೋಪಿಸಿ ಮತ್ತೆ ಅಧಿಕಾರ ಗದ್ದುಗೆ ಏರುವ ಕನಸು ಕಾಣುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಅರವಿಂದ್​​ ಕೇಜ್ರಿವಾಲ್​​​ ದಿಢೀರ್​ ರಾಜೀನಾಮೆಗೆ ಮುಂದಾಗಿದ್ದೇಕೆ? ಇಲ್ಲಿವೆ 5 ಕಾರಣಗಳು!

https://newsfirstlive.com/wp-content/uploads/2023/10/KEJRIWAL.jpg

Load More