newsfirstkannada.com

ಆರ್ಯವರ್ಧನ್​​ ಕಚೇರಿಯಲ್ಲಿ ಪೆಂಡೆಂಟ್​​ ಪತ್ತೆ.. ಈ ಬಗ್ಗೆ ಗುರೂಜಿ ಹೇಳಿದ್ದೇನು..?

Share :

26-10-2023

  ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದರು ಎಂಬ ಆರೋಪ

  ಆರ್ಯವರ್ಧನ್​ ಗುರೂಜಿ ಕಚೇರಿಯಲ್ಲಿ ಪೆಂಡೆಂಟ್​ ಪತ್ತೆ

  ಈ ಬಗ್ಗೆ ಆರ್ಯವರ್ಧನ್​​ ಗುರೂಜಿ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದರು ಎಂಬ ಆರೋಪ ಆರ್ಯವರ್ಧನ್​​ ಗುರೂಜಿ ವಿರುದ್ಧ ಕೇಳಿ ಬಂದಿತ್ತು. ಹೀಗಾಗಿ ನೋಟಿಸ್​ ನೀಡಿ ಆರ್ಯವರ್ಧನ್​​ ಗುರೂಜಿ ಕಚೇರಿ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಪೆಂಡೆಂಟ್​​ವೊಂದು ಪತ್ತೆಯಾಗಿದೆ. ಸದ್ಯ ಪೆಂಡೆಂಟ್​​ ಯಾವ ಪ್ರಾಣಿಗೆ ಸೇರಿದ್ದು ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು, ಈ ಹೊತ್ತಲ್ಲೇ ಆರ್ಯವರ್ಧನ್​​ ಗುರೂಜಿ, ಬಿಗ್​ಬಾಸ್​​ ಕಾರ್ಯಕ್ರಮದಲ್ಲಿ ಒಂದು ಡಾಲರ್​ ಧರಿಸಿದ್ದೆ. ನಾನು ಕಾಳಿಯನ್ನು ಆರಾಧ ಮಾಡ್ತೀನಿ. ಹಾಗಾಗಿ ಕೊರಳಲ್ಲಿ ಹಾಕಿಕೊಳ್ಳೋ ತ್ರಿಶೂಲವನ್ನು ಡಾಲರ್​ನಲ್ಲಿ ಮಾಡಿಸಿದ್ದೆ ಎಂದರು.

ನಾನು ಬಿಗ್​ಬಾಸ್​ ಒಟಿಟಿಯಲ್ಲಿ ಈ ಡಾಲರ್​ ಹಾಕಿಕೊಂಡಿದ್ದೆ. ನನ್ನ ಕಚೇರಿ ಬಂದು ಅರಣ್ಯ ಅಧಿಕಾರಿಗಳು ಕರೆ ಮಾಡಿದ್ರು. ನಾನು ಓಡಿ ಬಂದೆ, ಪ್ರಶಾಂತ್​ ಸಂಬರಗಿ ಕೂಡ ಇದ್ದರು. ಕೊರಳಲ್ಲಿದ್ದ ಡಾಲರ್​ ತನ್ನಿ ಎಂದರು. ನನ್ನ ಸಿಬ್ಬಂದಿಯನ್ನು ಮನೆಗೆ ಕಳಿಸಿ ತರಿಸಿದ್ದೆ. ಈಗ ಅದರಲ್ಲಿ ಇದ್ದದ್ದು ಪ್ಲಾಸ್ಟಿಕ್​ ಎಂದು ಗೊತ್ತಾಗಿದೆ. ನನಗೂ ಹುಲಿ ಉಗುರು ಪೆಂಡೆಂಟ್​​ ಹಾಕೋದು ಅಪರಾಧ ಎಂದು ಗೊತ್ತು ಎಂದರು ಆರ್ಯವರ್ಧನ್​ ಗುರೂಜಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್ಯವರ್ಧನ್​​ ಕಚೇರಿಯಲ್ಲಿ ಪೆಂಡೆಂಟ್​​ ಪತ್ತೆ.. ಈ ಬಗ್ಗೆ ಗುರೂಜಿ ಹೇಳಿದ್ದೇನು..?

https://newsfirstlive.com/wp-content/uploads/2023/10/Pendant_Aryavardhan-Guruji.jpg

Load More